Advertisement

ವಿಮಾ ಷೇರು ಮಾರಾಟ ದುರ್ಬಲ ವರ್ಗದವರ ಮೇಲೆ ಅಡ್ಡ ಪರಿಣಾಮ ಬೀರಲಿದೆ : ಎಲ್‌ಐಸಿ ಒಕ್ಕೂಟ

10:00 AM Jun 21, 2020 | sudhir |

ಚೆನ್ನೈ: ಲಾಕ್‌ಡೌನ್‌ನಿಂದಾಗಿ ದೇಶ ಸೇರಿದಂತೆ ಇಡೀ ವಿಶ್ವ ಆರ್ಥಿಕ ಹಿಂಜರಿತ ಎದುರಿಸುತ್ತಿದ್ದು, ಮಧ್ಯಮ ಮತ್ತು ಬಡ ವರ್ಗದವರ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಇದೀಗ ಲೈಫ್‌ ಇನ್ಸುರೆನ್ಸ್ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಲ್‌ಐಸಿ) ಕೂಡ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದು, ವಿಮೆದಾರರ ಷೇರುಗಳ ಮಾರಾಟ ಆರ್ಥಿಕತೆ ಮತ್ತು ದುರ್ಬಲ ವರ್ಗಗಳ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಎಲ್‌ಐಸಿ ಒಡೆತನದ ಮೂರು ಒಕ್ಕೂಟಗಳು ಕೇಂದ್ರಕ್ಕೆ ಮನವಿ ಮಾಡಿವೆ.

Advertisement

ಫೆಡರೇಷನ್‌ ಆಫ್‌ ಎಲ್‌ಐಸಿ ಕ್ಲಾಸ್‌ ಒನ್‌ ಆಫಿಸರ್ ಅಸೋಸಿಯೇಷನ್ಸ್, ನ್ಯಾಷನಲ್‌ ಫೆಡರೇಷನ್‌ ಆಫ್‌ ಇನ್ಸುರೆನ್ಸ್ ಫೀಲ್ಡ್ ವರ್ಕರ್ಸ್ ಆಫ್‌ ಇಂಡಿಯಾ ಮತ್ತು ಅಖೀಲ ಭಾರತ ವಿಮಾ ನೌಕರರ ಸಂಘಗಳ ಒಕ್ಕೂಟ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಈ ಬಗ್ಗೆ ಪತ್ರ ಬರೆದಿವೆ.

ಎಲ್‌ಐಸಿ ಹೂಡಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಹಣಕಾಸು ಸಚಿವಾಲಯ ಶುಕ್ರವಾರ ಸಲಹಾ ಸಂಸ್ಥೆ, ಹೂಡಿಕೆ ಬ್ಯಾಂಕರ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಸ್ತಾಪದ ಬಗ್ಗೆ ಸಲಹೆ ನೀಡಲು ಬಿಡ್‌ ಆಹ್ವಾನಿಸಿತ್ತು.

ಎಲ್‌ಐಸಿಯ ಐಪಿಒಗೆ ಸಂಬಂಧಿಸಿದ ಪ್ರಕ್ರಿಯೆಗಳ ಸಲಹಾ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಐಪಿಎಎಂ) ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದ ಬಳಿಕ ಮೂರು ಒಕ್ಕೂಟಗಳು ಆರ್ಥಿಕ ಸಚಿವರಿಗೆ ಪತ್ರ ಬರೆದಿದ್ದು, “ಈಕ್ವಿಟಿ ಮಾರಾಟದ ವಿರುದ್ಧದ ನಮ್ಮ ವಾದ ಯಾವುದೇ ಪಕ್ಷಪಾತದ ಹಿತಾಸಕ್ತಿಗಳಲ್ಲ. ಆದರೆ ರಾಷ್ಟ್ರೀಯ ಆರ್ಥಿಕತೆ ಮತ್ತು ಭಾರತೀಯ ಸಮಾಜದ ಹಿತಾಸಕ್ತಿಗಳನ್ನು ಆಧರಿಸಿವೆ ಎಂದು ಪತ್ರದಲ್ಲಿ ಉಲ್ಲೇಖೀಸಿವೆ. ಒಕ್ಕೂಟದ ಎಲ್‌ಐಸಿ ಪ್ರಸ್ತುತ 32 ಲಕ್ಷ ಕೋಟಿ ರೂ. ಅಧಿಕ ಆಸ್ತಿ ನಿರ್ವಹಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next