Advertisement

ಎಲ್‌ಐಸಿ ಷೇರು ಮೌಲ್ಯ ಭಾರೀ ಕುಸಿತ; ಹೂಡಿಕೆದಾರರಿಗೆ ನಿರಾಸೆ

08:10 PM Jun 06, 2022 | Team Udayavani |

ಮುಂಬೈ: ಎಲ್‌ಐಸಿ ಐಪಿಒ ಬಿಡುಗಡೆ ಆದಾಗಿನಿಂದಲೂ ಹೂಡಿಕೆದಾರರಿಗೆ ನಿರಾಸೆ ಮುಂದುವರಿದಿದೆ.

Advertisement

ಸೋಮವಾರ ಮತ್ತೆ ಭಾರತೀಯ ಜೀವ ವಿಮಾ ನಿಗಮದ ಷೇರು ಮೌಲ್ಯ ಸಾರ್ವಕಾಲಿಕ ಕುಸಿತ ದಾಖಲಿಸಿದ್ದು, ಪ್ರತಿ ಷೇರಿನ ದರ 782.45 ರೂ.ಗೆ ತಲುಪಿದೆ.

ಅಂದರೆ ಐಪಿಒ ಬಿಡುಗಡೆಯ ದರ(949 ರೂ.)ಕ್ಕಿಂತ ಶೇ.17.55ರಷ್ಟು ಕುಸಿತ ಕಂಡಿದೆ.ಕಳೆದ 6 ಸೆಷನ್‌ಗಳಲ್ಲೂ ಎಲ್‌ಐಸಿ ಷೇರು ಮೌಲ್ಯ ಸತತ ಕುಸಿತ ಕಾಣುತ್ತಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಕಂಪನಿಯ ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿ ರೂ.ಗಿಂತ ಕೆಳಗಿಳಿದಿದೆ. ಸೋಮವಾರ ಎಲ್‌ಐಸಿ ಮಾರುಕಟ್ಟೆ ಮೌಲ್ಯ 4.98 ಲಕ್ಷ ಕೋಟಿ ರೂ. ಆಗಿದೆ. ಐಪಿಒ ಮಾರಾಟ ಆರಂಭವಾದ ದಿನ(949 ರೂ.ಗಳಿದ್ದಾಗ) ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿತ್ತು.

ಪರಾಮರ್ಶೆ ಆರಂಭ:
ಈ ನಡುವೆ, ಆರ್‌ಬಿಐನ ಹಣಕಾಸು ಪರಾಮರ್ಶೆ ಸಮಿತಿಯ 3 ದಿನಗಳ ಸಭೆ ಸೋಮವಾರ ಆರಂಭವಾಗಿದೆ. ಈ ಬಾರಿಯೂ ಸಾಲದ ಮೇಲಿನ ಬಡ್ಡಿ ದರವನ್ನು ಸಮಿತಿ ಏರಿಕೆ ಮಾಡುವ ಸಾಧ್ಯತೆಯಿರುವ ಕಾರಣ, ಷೇರು ಮಾರುಕಟ್ಟೆ ಹೂಡಿಕೆದಾರರು ಮತ್ತು ಗೃಹ, ವಾಹನ ಸಾಲ ಮಾಡಿದವರು ಸಮಿತಿಯ ನಿರ್ಧಾರದ ಕಡೆಗೆ ಗಮನ ನೆಟ್ಟಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next