ಬೆಂಗಳೂರು: ದೇಶದ ಅತಿದೊಡ್ಡ ವಿಮಾ ಕಂಪೆನಿಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ನಿವ್ವಳ ಸಂಪತ್ತು ಮೌಲ್ಯ (ಎಂಬೆಡೆಡ್ ವ್ಯಾಲ್ಯೂ) 2022ರ ಮಾರ್ಚ್ ಅಂತ್ಯಕ್ಕೆ 5.41 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
2021ರ ಮಾರ್ಚ್ ಅಂತ್ಯಕ್ಕೆ 95,605 ಕೋಟಿ ರೂ. ಇದ್ದ ಈ ಮೌಲ್ಯವು ಸೆಪ್ಟಂಬರ್ ವೇಳೆಗೆ ಏಕಾಏಕಿ 5.39 ಲಕ್ಷ ಕೋಟಿ ತಲುಪಿತು. ಮಾರ್ಚ್ ಅಂತ್ಯಕ್ಕೆ ಅದು 5.41 ಕೋಟಿ ತಲುಪಿದೆ. ಇದಕ್ಕೆ ಪ್ರಮುಖ ಕಾರಣ ನಿಧಿಗಳ ಮರುವಿಂಗಡಣೆಯಾಗಿದೆ.
ಈ ಸಂಬಂಧದ ವರದಿಯನ್ನು ನಿಗಮದ ನಿರ್ದೇಶಕರ ಮಂಡಳಿ ಈಚೆಗೆ ಅಂಗೀ ಕರಿಸಿದೆ. ಇದರೊಂದಿಗೆ ಹಿಂದಿರುಗಿಸಬೇಕಾದ ಸಂಪತ್ತಿನ ಮೌಲ್ಯ (ಆರ್‌ಒಇವಿ)ವು ಶೇ. 36.9ರಿಂದ ಶೇ. 11.9 ಆಗಿದೆ. ಇದು ನಿಧಿಗಳ ಮರುವಿಂಗಡಣೆಯ ಫಲ ಎಂಬುದನ್ನು ಸೂಚಿಸುತ್ತದೆ.
ಹೊಸ ವ್ಯಾಪಾರ – ವಹಿವಾಟಿನ ಮೌಲ್ಯ 2022ರ ಮಾರ್ಚ್ ಅಂತ್ಯಕ್ಕೆ 7,619 ಕೋಟಿ ರೂ. ಆಗಿದ್ದು, ಕಳೆದ ವರ್ಷ ಇದೇ ಅವಧಿಗೆ 4,167 ಕೋಟಿ ರೂ. ಇತ್ತು. ಇದರೊಂದಿಗೆ ಹೊಸ ವ್ಯಾಪಾರ-ವಹಿವಾಟಿನ ಮೌಲ್ಯದ ಪ್ರಮಾಣ ಶೇ. 9.9ರಿಂದ ಶೇ. 15.1 ಆಗಿದೆ.
ವಾರ್ಷಿಕ ಪ್ರೀಮಿಯಂ ಇಕ್ವೆಲಂಟ್ 2022ರ ಮಾರ್ಚ್ ಅಂತ್ಯಕ್ಕೆ 50,390 ಕೋಟಿ ರೂ. ಇದ್ದು, ಇದು 2021ರ ಮಾರ್ಚ್ ಅಂತ್ಯಕ್ಕೆ 45,588 ಕೋ. ರೂ. ಆಗಿತ್ತೆಂದು ಪ್ರಕಟನೆ ತಿಳಿಸಿದೆ.