Advertisement

ಎಲ್ ಐ ಸಿಯ ಈ ಪಾಲಿಸಿಯ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ

01:17 PM Aug 01, 2021 | |

ನವ ದೆಹಲಿ : ದಶಕಗಳಿಂದ ಗ್ರಾಹಕರ ವಿಶ್ವಾಸ ಉಳಿಸಿಕೊಂಡ ಎಲ್ ಐ ಸಿ ಈಗ ಮತ್ತೆ ತನ್ನ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ.

Advertisement

ಹೌದು, ತಮ್ಮ ಹೆಣ್ಣು ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎನ್ನುವ ಕನಸು ಸಾಮಾನ್ಯವಾಗಿ ಎಲ್ಲಾ ಪೋಷಕರಿಗೆ ಇರುತ್ತದೆ. ಆ ಕನಸನ್ನು ಹೊತ್ತುಕೊಂಡಿರುವವರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಲ್ ಐ ಸಿ ಕನ್ಯಾದಾನ ಪಾಲಿಸಿಯನ್ನು ಜಾರಿಗೆ ತಮದಿದೆ.

ಈ ಪಾಲಿಸಿಯು ವಿಶೇಷವಾಗಿ ಹೆಣ್ಣುಮಕ್ಕಳ ಮದುವೆಗೆ ಮಾತ್ರವೆಂದು ಜಾರಿಗೆ ತರಲಾಗಿದೆ. ಎಲ್ ಐ ಸಿ ನೀಡುತ್ತಿರುವ ಈ ಪಾಲಿಸಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೇ, ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ ಗಮನಿಸಿ.

ಇದನ್ನೂ ಓದಿ : ಪ್ರವಾಹ ಸ್ಥಿತಿ, ಪರಿಹಾರ ಕಾರ್ಯಗಳ ಕುರಿತಾಗಿ ಬಸವರಾಜ ಬೊಮ್ಮಾಯಿ‌ ತುರ್ತು ಸಭೆ

ಎಲ್ ಐ ಸಿ ನೀಡುತ್ತಿರುವ ಕನ್ಯಾದಾನ ಪಾಲಿಸಿ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು..?

Advertisement

ಎಲ್ ಐ ಸಿ ಜಾರಿಗೆ ತಂದಿರುವ ಈ ಹೊಸ ಪಾಲಿಸಿದಾರರು ನೀವಾಗಬೇಕೆಂದಲ್ಲಿ ನಿಮ್ಮ ಆಧಾರ್ ಕಾರ್ಡ್, ಆದಾಯ ಪುರಾವೆ, ಗುರುತಿನ ಚೀಟಿ, ವಿಳಾಸ ಪುರಾವೆ ಮತ್ತು ಪಾಸ್‌ ಪೋರ್ಟ್ ಫೋಟೋ ದಾಖಲೆಗಳು ಬಹಳ ಮುಖ್ಯ. ಇದರ ಹೊರತಾಗಿ, ಸಹಿ ಮಾಡಿದ ಅರ್ಜಿ ನಮೂನೆ ಮತ್ತು ಜನನ ಪ್ರಮಾಣಪತ್ರದೊಂದಿಗೆ ಮೊದಲ ಪ್ರೀಮಿಯಂಗೆ ಚೆಕ್ ಅಥವಾ ನಗದು ಸಹ ನೀಡಬೇಕಾಗುತ್ತದೆ. ಈ ಪಾಲಿಸಿಯನ್ನು ಪಡೆಯಲು ನೀವು ನಿಮ್ಮ ಹತ್ತಿರದ ಎಲ್ ಐ ಸಿ ಕಚೇರಿಯನ್ನು ಸಂಪರ್ಕಿಸುವುದು ಉತ್ತಮ.

ಎಲ್ ಐ ಸಿ ನೀಡುತ್ತಿರುವ ಈ ಹೊಸ ಪಾಲಿಸಿಯನ್ನು ಯಾರು ಪಡೆಯಬಹುದು..?

ಎಲ್ ಐ ಸಿ ಕನ್ಯಾದಾನ ಪಾಲಿಸಿಯನ್ನು 25 ವರ್ಷಗಳ ಬದಲು 13 ವರ್ಷಗಳವರೆಗೆ ಪಡೆದುಕೊಳ್ಳಬಹುದು. ಮದುವೆಯ ಹೊರತಾಗಿ, ಈ ಹಣವನ್ನು ಮಗಳ ಶಿಕ್ಷಣಕ್ಕಾಗಿಯೂ ಕೂಡ ಬಳಸಿಕೊಳ್ಳುವ ಪ್ರಯೋಜನವನ್ನು ಈ ಪಾಲಿಸಿ ನೀಡುತ್ತಿರುವುದು ವಿಶೇಷ. ಒಟ್ಟಾರೆಯಾಗಿ, ಎಲ್ ಐ ಸಿ ನೀಡುತ್ತಿರುವ ಈ ಪಾಲಿಸಿಯಿಂದ ನಿಮ್ಮ ಮಗಳ ವಿದ್ಯಾಭ್ಯಾಸ ಹಾಗೂ ಮದುವೆಯ  ಚಿಂತನೆಯಿಂದ ಹೊರಬರುವುದಕ್ಕೆ ಸಾಧ್ಯವಿದೆ.

ಪಾಲಿಸಿ ಸಿಂಧುತ್ವ :

ಎಲ್ ಐ ಸಿ ನೀಡುತ್ತಿರುವ ಈ ಪಾಲಿಸಿಯನ್ನು ನೀವು ಪಡೆಯುವುದಕ್ಕೆ ಬಯಸುವವರಾದರೇ, ನಿಮಗೆ ಕನಿಷ್ಠ ಮೂವತ್ತು ವರ್ಷ ವಯಸ್ಸಾಗಿರಬೇಕು ಹಾಗೂ ನಿಮ್ಮ ಮಗಳಿಗೆ ಒಂದು ವರ್ಷ ವಯಸ್ಸಾಗಿರಬೇಕು.

ಇ‍ನ್ನು, ಈ ಪಾಲಿಸಿಯು 25 ವರ್ಷಗಳದ್ದಾಗಿದ್ದರೂ, ಪ್ರೀಮಿಯಂ ನನ್ನು 22 ವರ್ಷಗಳವರೆಗೆ ಮಾತ್ರ ಪಾವತಿಸಬೇಕಾಗುತ್ತದೆ. ಉಳಿದ 3 ವರ್ಷಗಳವರೆಗೆ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಮಗಳ ವಯಸ್ಸಿನ ಪ್ರಕಾರ, ಈ ಪಾಲಿಸಿಯ ಅವಧಿಯನ್ನು ಸಹ ಕಡಿಮೆ ಮಾಡಬಹುದಾಗಿದೆ.

ಇದನ್ನೂ ಓದಿ : ಮೂಡಿಗೆರೆ : ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು : ಉಡುಪಿ ಮೂಲದ ಪ್ರಯಾಣಿಕರು ಪಾರು

Advertisement

Udayavani is now on Telegram. Click here to join our channel and stay updated with the latest news.

Next