ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಬಹುನಿರೀಕ್ಷಿತ ಐಪಿಒ ಪ್ರಸಕ್ತ ವಿತ್ತೀಯ ವರ್ಷದ ಕೊನೇಯ ತ್ತೈಮಾಸಿಕದಲ್ಲಿ ಜಾರಿಯಾಗುವುದು ಬಹುತೇಕ ಅನುಮಾನ.
ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯ ಹೊಂದಿರುವ ಆಸ್ತಿಯ ಮೌಲ್ಯಮಾಪನ ಕಾರ್ಯ ಆ ಸಮಯದ ಒಳಗಾಗಿ ಮುಕ್ತಾಯವಾಗುವುದು ಅನುಮಾನ.
ಜತೆಗೆ ಐಪಿಒ ಜಾರಿಗೆ ಸಂಬಂಧಿಸಿದ ಕೆಲಸಗಳನ್ನೂ ಇನ್ನೂ ಅಪೂರ್ಣವಾಗಿವೆ. ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ), ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎಐ) ಕೂಡ ಐಪಿಒಗೆ ಸಂಬಂಧಿಸಿದ ದಾಖಲೆಗಳನ್ನು ಇನ್ನಷ್ಟೇ ಪರಿಶೀಲಿಸಬೇಕಾಗಿದೆ.
ಈ ಎರಡೂ ಸಾಂಸ್ಥಿಕ ಸಂಸ್ಥೆಗಳು ದಾಖಲೆಗಳನ್ನು ಪರಿಶೀಲಿಸಿ, ಮುಕ್ತಾಯಗೊಳಿಸಿದರೂ, ಇನ್ನೂ ಹಲವು ತಾಂತ್ರಿಕ ಅಂಶಗಳು ಬಾಕಿ ಇವೆ. ಅವುಗಳು ಪೂರ್ಣಗೊಳ್ಳಲು ಮತ್ತಷ್ಟು ಸಮಯ ಬೇಕಾಗಬಹುದು.
ಇದನ್ನೂ ಓದಿ:ಯೋಗಿಯ ಬಾಲ್ ಎದುರಿಸುವ ಬ್ಯಾಟ್ಸ್ ಮನ್ ವಿಪಕ್ಷಗಳಲ್ಲಿ ಇಲ್ಲ: ರಾಜನಾಥ್ ಸಿಂಗ್
ಹೀಗಾಗಿ, ಪ್ರಸಕ್ತ ವಿತ್ತೀಯ ವರ್ಷದ ಕೊನೇಯ ಭಾಗದಲ್ಲಿ ಎಲ್‌ಐಸಿ ಐಪಿಒ ಮಾರುಕಟ್ಟೆ ಪ್ರವೇಶಿಸಲಾರದು ಎಂದು ಹೇಳಲಾಗುತ್ತಿದೆ.