ನವ ದೆಹಲಿ : ಜನವರಿಗೂ ಮುನ್ನವೇ ಸಾರ್ವಜನಿಕರ ಖರೀದಿಗೆ ಭಾರತೀಯ ಜೀವ ವಿಮಾ ನಿಗಮದ (ಎಲ್ ಐ ಸಿ) ಷೇರುಗಳನ್ನು ಮುಕ್ತವಾಗಿಸುವ ಯೋಜನೆಯಲ್ಲಿ ಕೇಂದ್ರ ಸರ್ಕಾರ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲ್ ಐ ಸಿ ಷೇರು ವಿಕ್ರಯವನ್ನು ನಿರ್ವಹಿಸಲು ಮರ್ಚೆಂಟ್ ಬ್ಯಾಂಕರ್ ಗಳಿಂದ ಬಹುತೇಕ ಈ ತಿಂಗಳಿನಲ್ಲಿ ಬಿಡ್ ಆಹ್ವಾನಿಸುವ ಸಾದ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಸತ್ಯದ ಮಾರ್ಗದಲ್ಲಿದ್ದವರಿಗೆ ಒಳ್ಳೆಯದಾಗುತ್ತದೆ: ಪಿಎ ಬಂಧನ ವಿಚಾರಕ್ಕೆ ರಾಮುಲು ಪ್ರತಿಕ್ರಿಯೆ
ಇನ್ನು, ಮಿಲಿಮನ್ ಅಡ್ವೈಸರ್ಸ್ ಎಲ್ ಎಲ್ ಪಿ ಇಂಡಿಯಾ ಕಂಪನಿಯನ್ನು ಐಪಿಒಗೂ ಮುನ್ನ ಎಲ್ ಐ ಸಿ ಯ ಮೌಲ್ಯವನ್ನು ನಿರ್ಣಯಿಸಲು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಯು (ಡಿಐಪಿಎಎಂ) ನೇಮಕ ಮಾಡಿದೆ. ಈ ಕಂಪನಿಯು ಮುಂಬರುವ ಕೆಲವು ವಾರಗಳಲ್ಲಿ ಎಲ್ ಐ ಸಿಯ ಮೌಲ್ಯವನ್ನು ನಿರ್ಣಯಿಸಲಿದೆ ಎಂದು ಮಾಹಿತಿ ದೊರಕಿದೆ.
ಷೇರು ವಿಕ್ರಯ ಗುರಿ ತಲುಪಲು ಎಲ್ ಐ ಸಿ ಯ ಐಪಿಒ ಕೇಂದ್ರ ಸರ್ಕಾರಕ್ಕೆ ಬಹಳ ಮುಖ್ಯವಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಷೇರು ಮಾರಾಟ ಮತ್ತು ಖಾಸಗೀಕರಣದಿಂದ ಒಟ್ಟಾರೆ 1.75 ಲಕ್ಷ ಕೋಟಿ ರೂಪಾಯಿಯಷ್ಟು ಹಣ ಸಂಗ್ರಹಿಸುವ ಗುರಿಯನ್ನು ಕೇಂದ್ರ ಎದುರುಗಾಣುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ : “ಮಹಾ” ವಿಧಾನಸಭೆಯಲ್ಲಿ ಕೋಲಾಹಲ, ಅನುಚಿತ ವರ್ತನೆ: 12 ಬಿಜೆಪಿ ಶಾಸಕರು ಒಂದು ವರ್ಷ ಅನರ್ಹ