Advertisement

ಚಿಂಚಲಿ ಗ್ರಾಮದ ಗ್ರಂಥಾಲಯ ಕಟ್ಟಡ ಅರ್ಧಂಬರ್ಧ

02:38 PM Nov 04, 2019 | Suhan S |

ಮುಳಗುಂದ: ಸಮೀಪದ ಚಿಂಚಲಿ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಹೊಸ ಕಟ್ಟಡ ಭಾಗ್ಯ ದೊರೆತಿದ್ದರೂ ಕಾಮಗಾರಿ ಅರ್ಧಕ್ಕೆ ನಿಂತಿದೆ.  ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕಾಗಿ ಗ್ರಾಮ ವಿಕಾಸ ಯೋಜನೆಯಡಿ ಶೇ.12 ಅನುದಾನ ಮೀಸಲಿಟ್ಟು ಹೊಸ ಸುಸಜ್ಜಿತ ಕಟ್ಟಡ ನಿರ್ಮಿಸಬೇಕೆಂಬ ಯೋಜನೆ ಉದ್ದೇಶ ಈಡೇರದೇ ಅರ್ಧಕ್ಕೆ ನಿಂತ ಕಟ್ಟಡವೀಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

Advertisement

ಸ್ಥಳೀಯ ಗ್ರಾಮ ಪಂಚಾಯತಿ ಜಾಗೆಯಲ್ಲಿ ಸುಮಾರು 12 ಲಕ್ಷ ರೂ.ಗಳ ವೆಚ್ಚದಲ್ಲಿ ಕಟ್ಟಡ ಪ್ರಾರಂಭಿಸಲು ಯೋಜನೆ ರೂಪಿಸಿತ್ತಾದರೂ ಮೀಸಲಾದ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿದ್ದರಿಂದ ಕಟ್ಟಡ ಅರ್ಧಂಬರ್ಧವಾಗಿದೆ. ಅಲ್ಲದೆ ಕಾಮಗಾರಿ ಕಳಪೆಯಾಗಿದ್ದರಿಂದ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. 2001ರಿಂದ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳ ಕಟ್ಟಡದ ಸಣ್ಣ ಕೋಣೆಯಲ್ಲೇ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಇಲ್ಲಿಯೂ ನೆಲೆ ಕಾಣದೆ ಇಂದು ಗ್ರಾಮದ ಸಂಘವೊಂದರ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ 350 ಜನ ಓದುಗ ಸದಸ್ಯರಿದ್ದು, 3093 ಪುಸ್ತಕಗಳಿವೆ. ಮೂರು ಗ್ರಾಮಗಳ ನೂರಾರು ಯುವಕರು, ವಿದ್ಯಾರ್ಥಿಗಳು ಈ ಗ್ರಂಥಾಲಯದ ಸಹಾಯದಿಂದ ಸ್ವಾವಲಂಬಿಗಳಾಗಿದ್ದಾರೆ. ಉನ್ನತ ಹುದ್ದೆಗೇರಲು ಈ ಗ್ರಂಥಾಲಯ ಅನುಕೂಲವಾಗಿದೆ.

ಚಿಂಚಲಿ ಗ್ರಾಪಂ ವತಿಯಿಂದ ಗ್ರಂಥಾಲಯ ಕಟ್ಟಡಕ್ಕೆ ಜಾಗೆ ಮಂಜೂರಾಗಿದ್ದು, ಮೂರು ಗ್ರಾಮಗಳಿಗೆ ಅಗತ್ಯವಾಗಿ ಬೇಕಾದ ಸುಸಜ್ಜಿತ ಕಟ್ಟಡವಿಲ್ಲದೆ ಓದುಗರಿಗೆ ನಿರಾಶೆಯಾಗಿದೆ. – ಮಂಜುನಾಥ ಹೂಗಾರ, ಗ್ರಂಥಪಾಲಕ

 ಚಿಂಚಲಿ ಗ್ರಂಥಾಲಯ ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಗ್ರಾಪಂ ಸೇರಿದಂತೆ ಯಾರೊಬ್ಬರೂ ಗಮನ ಹರಿಸುತ್ತಿಲ್ಲ. ಕೂಡಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. ರಾಜು ನದಾಫ, ಓದು

 

Advertisement

-ಎಂ.ಎಂ. ನೀಲಗುಂದ

Advertisement

Udayavani is now on Telegram. Click here to join our channel and stay updated with the latest news.

Next