Advertisement

ಇ-ತಿಮ್ಮಸಂದ್ರ  ಗ್ರಾಪಂನಿಂದ ಮಾದರಿ ಲೈಬ್ರರಿ

07:53 PM Sep 29, 2021 | Team Udayavani |

ಶಿಡ್ಲಘಟ್ಟ: ಉದ್ಯೋಗ ಖಾತ್ರಿ ಯೋಜನೆಯಡಿ ಬಹುಮಾನ್‌ ಚೆಕ್‌ ಡ್ಯಾಂ, ಅಂಗನವಾಡಿ, ಶಾಲಾಕಟ್ಟಡಗಳಿಗೆ ಹೊಸ ರೂಪ ನೀಡುವ ಮೂಲಕಗಮನ ಸೆಳೆದಿದ್ದ ಜಿಲ್ಲೆ ಈಗ, ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನರ್ಜನೆ ಹೆಚ್ಚಿಸಲು ಸುಸಜ್ಜಿತ ಗ್ರಂಥಾಲಯ ನಿರ್ಮಿಸಿ ಮಾದರಿ ಆಗಿದೆ.

Advertisement

ಜಿಲ್ಲೆಯಲ್ಲಿ ಸಿಇಒ ಆಗಿದ್ದ ಫೌಝಿಯಾ ತರುನ್ನಮ್‌ ನರೇಗಾ ಯೋಜನೆ ಪರಿಣಾಮಕಾರಿ ಆಗಿ ಅನುಷ್ಠಾನಗೊಳಿಸಿ ರಾಷ್ಟ್ರ ಮಟ್ಟದಲ್ಲಿ ಚಿಕ್ಕಬಳ್ಳಾಪುರ ಗುರುತಿಸುವಂತೆ ಮಾಡಿದ್ದರು. ಗ್ರಾಮೀಣ ಮಕ್ಕಳ ಕಲಿಕೆಗೆ ಉತ್ತಮವಾತಾವರಣ ಒದಗಿಸಲು ಶಾಲಾ, ಅಂಗನವಾಡಿ ಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿ ಗೊಳಿಸಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆಬೆಳೆಗಾರರಿಗೆ ಅನೇಕ ಸೌಲಭ್ಯ ಒದಗಿಸಿದ್ದರು.

ಗ್ರಾಮೀಣ ವಿದ್ಯಾರ್ಥಿಗಳೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಜೊತೆಗೆ ಜ್ಞಾನರ್ಜನೆ ಹೆಚ್ಚಿಸುವ ಸಲುವಾಗಿ ಡಿಜಿಟಲ್‌ ಲೈಬ್ರರಿ ಮಾಡುವ ಕನಸನ್ನುಜಿಪಂ ನಿಕಟಪೂರ್ವ ಸಿಇಒ ಫೌಝಿಯಾ ತರುನುಮ್‌ ಹೊಂದಿದ್ದರು. ಅದನ್ನು ಈಗಿನ ಸಿಇಒ ಪಿ. ಶಿವಶಂಕರ್‌ ನನಸು ಮಾಡಿದ್ದು, ಇದಕ್ಕೆ ತಾಲೂಕಿನ ಇ-ತಿಮ್ಮಸಂದ್ರದಲ್ಲಿನ ಗ್ರಂಥಾಲಯ ಸಾಕ್ಷಿಯಾಗಿದೆ.

ಸಕಲ ಸೌಲಭ್ಯ: ಇ-ತಿಮ್ಮಸಂದ್ರ ಗ್ರಾಪಂನ ಅಭಿವೃದ್ಧಿ ಅಧಿಕಾರಿ ತನ್ವೀರ್‌ ಅಹಮದ್‌ ವಿಶೇಷ ಆಸಕ್ತಿವಹಿಸಿಸಾರ್ವಜನಿಕ ಗ್ರಂಥಾಲಯವನ್ನು ಗ್ರಾಪಂನಿಂದವರ್ಣಮಯವಾಗಿಸಿದ್ದಾರೆ. ಇಡೀ ಗ್ರಂಥಾಲಯದ ವಾತಾವರಣವೇ ಬದಲಾಗಿದೆ. ಈ ಹಿಂದೆಗ್ರಂಥಾಲಯದಲ್ಲಿ ಓದುಗರು ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆ ಇರಲಿಲ್ಲ. ಕಟ್ಟಡ ಸುಣ್ಣಬಣ್ಣ ಕಾಣದೇ ಹಳೇಯದ್ದಾಗಿತ್ತು. ಇದೀಗ ಓದುಗರುಉತ್ಸಾಹದಿಂದ ಗ್ರಂಥಾಲಯದತ್ತ ಹೆಜ್ಜೆ ಇಡುವಂತಹ ವಾತಾವರಣ ಸೃಷ್ಟಿಸಲಾಗಿದೆ.

ಪುಸ್ತಕಗಳ ಕೊಡುಗೆ: ಕೊಂಡೂರು ಫೌಂಡೇಷನ್‌ನಿಂದ 69, ಸ್ಮಿತ್‌ ಶಾ ಪವರ್‌ ಆಫ್‌ ಟೆನ್‌ ಟ್ರಸ್ಟ್ ನವರು ಪುಸ್ತಕಗಳು ಕೊಡುಗೆಯಾಗಿ ನೀಡಿದ್ದಾರೆ. ಗ್ರಾಪಂನಿಂದ ಸುಣ್ಣಬಣ್ಣ ಬಳಿದು ಗ್ರಂಥಾಲಯವನ್ನುಆಕರ್ಷಣೀಯ ಗೊಳಿಸಲಾಗಿದೆ. ಶಿಡ್ಲಘಟ್ಟ ತಾಲೂಕು ಕೇಂದ್ರದಿಂದ 40 ಕಿ.ಮೀ.ದೂರದಲ್ಲಿರುವ ಇ-ತಿಮ್ಮಸಂದ್ರ ಗ್ರಾಪಂ ಕೇಂದ್ರದಲ್ಲಿಜನ ಆಕರ್ಷಕ ಡಿಜಿಟಲ್‌ ಗ್ರಂಥಾಲಯ ನಿರ್ಮಿಸಿ ಓದುಗರಿಗಾಗಿ ಎರಡು ಕಂಪ್ಯೂಟರ್‌, ಸ್ಮಾರ್ಟ್‌ ಟೀವಿ ಒದಗಿಸಲಾಗಿದೆ. ಆನ್‌ಲೈನ್‌ ಮೂಲಕವೇ ( https://www.karnatakadigitalpubliclibrary.org/login )ನೋಂದಣಿ ಮಾಡಿಸಿ ಓದುಗರಿಗೆ ಅನುಕೂಲ ಕಲ್ಪಿಸಲಾಗಿದೆ.

Advertisement

ಗ್ರಾಮೀಣ ವಿದ್ಯಾರ್ಥಿಗಳು ಜ್ಞಾನರ್ಜನೆ ಹೆಚ್ಚಿಸಿಕೊಳ್ಳಲು ಸಾರ್ವಜನಿಕ ಗ್ರಂಥಾಲಯ ಬಳಸಿಕೊಳ್ಳಬೇಕು, ಈನಿಟ್ಟಿನಲ್ಲಿ ಗ್ರಾಪಂ ಮೂಲಕ ಇ-ತಿಮ್ಮ ಸಂದ್ರ ಗ್ರಾಮದಲ್ಲಿ ಡಿಜಿಟಲ್‌ ಗ್ರಂಥಾಲಯ ಅಭಿವೃದ್ಧಿಗೊಳಿಸಲಾಗಿದೆ. ಅದನ್ನುಸಂರಕ್ಷಣೆ ಮಾಡಿಕೊಂಡು ಇಡೀ ರಾಜ್ಯಡಿದಲ್ಲಿ ಮಾದರಿ ಗ್ರಂಥಾಲಯವಾಗಿ ಅಭಿವೃದ್ಧಿ ಹೊಂದಲಿ.– ಚಂದ್ರಕಾಂತ್‌, ತಾಪಂ ಇಒ, ಶಿಡ್ಲಘಟ್ಟ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 157 ಗ್ರಾಪಂ ಪೈಕಿ 132ರಲ್ಲಿರುವ ಗ್ರಾಮೀಣ ಗ್ರಂಥಾಲಯಗಳನ್ನುಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗ್ರಾಮೀಣಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳಿಗೆವರ್ಗಾಯಿಸಿದ ಬಳಿಕ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಜ್ಞಾನರ್ಜನೆ ಮತ್ತು ಮಾಹಿತಿ ಒದಗಿಸುವ ಸಲುವಾಗಿ ಗ್ರಾಪಂ ಅನುದಾನ ಬಳಸಿ ಕೊಂಡು ಉನ್ನತೀಕರಿಸಲಾಗುತ್ತಿದೆ. ಈಗಾಗಲೇ ಕೆಲ ಗ್ರಂಥಾಲಯ ಮಾದರಿಯಾಗಿ ಅಭಿವೃದ್ಧಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇ-ತಿಮ್ಮಸಂದ್ರ ಗ್ರಾಪಂ ಪಿಡಿಒ ಅತ್ಯುತ್ತಮ ಕೆಲಸ ಮಾಡಿದ್ದಾರೆ.– ಪಿ.ಶಿವಶಂಕರ್‌, ಜಿಪಂ ಸಿಇಒ, ಚಿಕ್ಕಬಳ್ಳಾಪುರ.

ಗ್ರಾಪಂ ಅನುದಾನ ಬಳಸಿ ಸಾರ್ವಜನಿಕ ಗ್ರಂಥಾಲಯ ಮಾದರಿ ಆಗಿ ಅಭಿವೃದ್ಧಿಪಡಿಸಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಎಲ್ಲಾ ವಿಧವಾದ ಪುಸ್ತಕಗಳನ್ನು ನೀಡಲಾಗಿದೆ. ಹಲವುಪುಸ್ತಕಗಳನ್ನು ದಾನಿಗಳು ಕೊಡುಗೆ ನೀಡಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ವಿದ್ಯಾರ್ಥಿಗಳಿಗೆಗ್ರಂಥಾಲಯದಿಂದ ಹೆಚ್ಚಿನ ಅನುಕೂಲವಾಗಿದೆ.ತಾಲೂಕು ಕೇಂದ್ರದಿಂದ ದೂರವಿದ್ದರೂ ಗ್ರಾಪಂಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನರ್ಜನೆಹೆಚ್ಚಿಸಿಕೊಳ್ಳಲು ಗ್ರಂಥಾಲಯ ಸಹಕಾರಿಯಾಗಿದೆ.– ತನ್ವೀರ್‌ಅಹಮದ್‌, ಪಿಡಿಒ, ಇ-ತಿಮ್ಮಸಂದ್ರ ಗ್ರಾಪಂ, ಶಿಡ್ಲಘಟ್ಟ ತಾಲೂಕು

-ಎಂ.ಎ.ಅಬ್ದುಲ್‌ ವಹಾಬ್‌

Advertisement

Udayavani is now on Telegram. Click here to join our channel and stay updated with the latest news.

Next