Advertisement
ಬುಧವಾರ ನಡೆದ ಪಂದ್ಯದಲ್ಲಿ 18 ಬಾರಿಯ ಡಬಲ್ಸ್ ಗ್ರ್ಯಾನ್‌ಸ್ಲಾಮ್ ಚಾಂಪಿಯನ್, ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಲಿಯಾಂಡರ್ ಪೇಸ್ ಬಹುತೇಕ ಭಾರತ ನೆಲದಲ್ಲಿ ಕೊನೆಯ ಪಂದ್ಯವನ್ನಾಡುತ್ತಿದ್ದಾರೆ. ಹೀಗಾಗಿ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಇವರ ಆಟ ನೋಡುವುದಕ್ಕಾಗಿಯೇ ಅಭಿಮಾನಿಗಳು ಕೆಎಸ್‌ಎಲ್‌ಟಿಎಗೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆಸ್ಟ್ರೇಲಿಯಾದ ಮ್ಯಾಥ್ಯೂ ಅಬೆನ್ ಜತೆಗೂಡಿ ಡಬಲ್ಸ್ ಕಣಕ್ಕೆ ಇಳಿದ ಪೇಸ್ ಬಿರುಸಿನ ಆಟವಾಡಿದರು.
ಜೋಡಿಯನ್ನು 7-6(2), 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು. ಮೊದಲ
ಸೆಟ್‌ನಲ್ಲಿ ಎದುರಾಗಳಿಂದ ಪ್ರಬಲ ಹೋರಾಟ ಎದುರಾದರೂ ಎರಡನೇ ಸೆಟ್‌ನಲ್ಲಿ ಪೇಸ್ ಜೋಡಿ ಸ್ವಲ್ಪ ಸುಲಭವಾಗಿಯೇ ಗೆದ್ದು ಬಂದಿತು. ಗುಣೇಶ್ವರನ್, ರಾಮ್‌ಕುಮಾರ್ ಕ್ವಾರ್ಟರ್ ಫೈನಲ್‌ಗೆ: ಹಾಲಿ ಚಾಂಪಿಯನ್ ಪ್ರಜ್ಞೆಶ್ ಗುಣೇಶ್ವರನ್ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಅವರು 6-2, 4-6, 6-4 ಸೆಟ್‌ಗಳ ಅಂತರದಿಂದ ಜರ್ಮನಿಯ ತಾರಾ ಆಟಗಾರ ಸೆಬಾಸ್ಟಿಯನ್ ಫಾನ್ಸೆಲ್ವೊ ವಿರುದ್ಧ ಗೆಲುವುಗಳಿಸಿದರು. ಮೊದಲ ಸೆಟ್‌ನಲ್ಲಿ 1-0 ಮುನ್ನಡೆ ಪಡೆದ ಗುಣೇಶ್ವರನ್‌ಗೆ 2ನೇ ಸೆಟ್‌ನಲ್ಲಿ ಸೆಬಾಸ್ಟಿಯನ್ ಆಘಾತ ನೀಡಿದರು. ಹೀಗಾಗಿ ಸೆಟ್ 1-1ರಿಂದ ಸಮಗೊಂಡಿತು. ರೋಚಕವಾಗಿ ಸಾಗಿದ ಅಂತಿಮ ಸೆಟ್‌ನಲ್ಲಿ 6-4 ಅಂತರದಿಂದ ಸೆಬಾಸ್ಟಿಯನ್‌ಗೆ ಸೋಲುಣಿಸಿ 2-1 ಅಂತರದಿಂದ ಪಂದ್ಯ ವಶ ಪಡಿಸಿಕೊಂಡರು.
Related Articles
Advertisement