Advertisement

LG v/s AAP: ಸುಪ್ರೀಂ ವಿಭಿನ್ನ ತೀರ್ಪು; ವಿಷಯ ವಿಸ್ತ್ರತ ಪೀಠಕ್ಕೆ 

06:50 AM Feb 14, 2019 | Team Udayavani |

ಹೊಸದಿಲ್ಲಿ : ದಿಲ್ಲಿ ಸರಕಾರದಲ್ಲಿ ಅಧಿಕಾರಿಗಳ ನಿಯೋಜನೆ, ವರ್ಗಾವಣೆ, ಎಸಿಬಿ ಮತ್ತು ತನಿಖಾ ಆಯೋಗಗಳ ನೇಮಕಾತಿ ಇವೇ ಮೊದಲಾದ ಬಹುಮುಖ್ಯ ವಿಷಯಗಳಲ್ಲಿ ಪರಮೋಚ್ಚ ಅಧಿಕಾರ ದಿಲ್ಲಿ  ಸರಕಾರಧ್ದೋ ಅಥವಾ ಲೆಫ್ಟಿನೆಂಟ್‌ ಗವರ್ನರ್‌ ಅವರಧ್ದೋ ಎಂಬ ವಿಷಯದಲ್ಲಿ  ನ್ಯಾಯಮೂರ್ತಿಗಳಾಗಿರುವ ಎ ಕೆ ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ ಪೀಠ ವಿಭಿನ್ನ ತೀರ್ಪು ನೀಡಿದೆ. ಹಾಗಾಗಿ ಈ ವಿಷಯವನ್ನು ಇದೀಗ ಐವರು ನ್ಯಾಯಾಧೀಶರುಗಳ ಬೃಹತ್‌ ಪೀಠಕ್ಕೆ ಉಲ್ಲೇಖೀಸಲಾಗಿದೆ. 

Advertisement

ಇಂದು ವಿಭಿನ್ನ ತೀರ್ಪು ನೀಡಿದ ಇಬ್ಬರು ನ್ಯಾಯಮೂರ್ತಿಗಳಲ್ಲಿ ಒಬ್ಬರು “ದಿಲ್ಲಿ ಸರಕಾರಕ್ಕೆ ಭೂಮಿ ಮತ್ತು ಪೊಲೀಸ್‌ ವಿಚಾರವನ್ನು ಹೊರತು ಪಡಿಸಿ ಉಳಿದೆಲ್ಲ ವಿಷಯದಲ್ಲಿ ಸಂಪೂರ್ಣ ಅಧಿಕಾರವಿದೆ’ ಎಂದು ತೀರ್ಪು ನೀಡಿದರು. 

ಜಸ್ಟಿಸ್‌  ಎ ಕೆ ಸಿಕ್ರಿ ಅವರು “ಜಂಟಿ ಕಾರ್ಯದರ್ಶಿ ಮತ್ತು ಈ ಮೇಲಿನ ವರ್ಗದ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಅಧಿಕಾರವು ಲೆಫ್ಟಿನೆಂಟ್‌ ಗವರ್ನರ್‌ ಕೈಯಲ್ಲಿರುತ್ತದೆ; ಉಳಿದೆಲ್ಲ ವರ್ಗಗಳ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಅಧಿಕಾರವು ದಿಲ್ಲಿ ಸರಕಾರದ ಕೈಯಲ್ಲಿರುತ್ತದೆ ‘ ಎಂದು ತೀರ್ಪು ನೀಡಿದರು. 

ಸುಪ್ರೀಂ ಕೋರ್ಟಿನ ಇಂದಿನ ತೀರ್ಪು ಅನೇಕ ವಿಚಾರಗಳಲ್ಲಿ ದಿಲ್ಲಿ ಸರಕಾರದ ಪರವಾಗಿ ಇದೆಯಾದರೂ ಒಟ್ಟಾರೆಯಾಗಿ ಇದರಲ್ಲಿ ದಿಲ್ಲಿ ಸರಕಾರಕ್ಕೆ ಹಿನ್ನಡೆಯಾದಂತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next