Advertisement

ಭೀಮಾ ನದಿಗೆ ನೀರು ಹರಿಸಲು ಜಿಲ್ಲಾಧಿಕಾರಿಗೆ ಪತ್ರ

03:12 PM Mar 26, 2022 | Team Udayavani |

ಯಾದಗಿರಿ: ಭೀಮಾನದಿ ಜಿಲ್ಲೆಯ ರೈತರ ಜೀವನಾಡಿ. ಯಾದಗಿರಿ ಭೀಮಾ ಬ್ಯಾರೇಜ್‌ನಿಂದ ಜೋಳದೆಡಗಿ ಬ್ಯಾರೇಜ್‌ ವರೆಗೆ ಬರುವ ಭೀಮಾನದಿ ತೀರದ ರೈತರು ಈಗಾಗಲೇ ಭತ್ತ ಬೆಳೆದಿದ್ದು, ಬೆಳೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಅದಕ್ಕಾಗಿ ಸನ್ನತಿ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು ಹರಿಸಿ ಬೆಳೆಗೆ ಅನುಕೂಲ ಮಾಡಿಕೊಡುವಂತೆ ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿದ ಅವರು, ನದಿ ಮೂಲದ ನೀರಿನ ಆಶ್ರಯದಲ್ಲಿ ಈ ಭಾಗದ ರೈತರು ಭತ್ತ ಬೆಳೆದಿದ್ದಾರೆ. ಇನ್ನು ಒಂದು ಅಥವಾ ಒಂದೂವರೆ ತಿಂಗಳಿನಲ್ಲಿ ಬೆಳೆ ಕಟಾವಿಗೆ ಬರುತ್ತದೆ.

ಯಾದಗಿರಿ, ಕೌಳೂರು, ಆನೂರು (ಬಿ) ಮತ್ತು ಜೋಳದೆಡಗಿ ಬ್ಯಾರೇಜ್‌ ಗಳಲ್ಲಿ ನೀರು ತೀರ ಕಡಿಮೆಯಾಗಿವೆ. ಭತ್ತದ ಬೆಳೆಗೆ ನೀರು ಪಡೆಯಲು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈಗ ಸನ್ನತಿ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು ಬಿಡದಿದ್ದರೆ ಭೀಮಾ ತೀರದ ರೈತರ ಬೆಳೆಗಳು ಹಾನಿಯಾಗುವ ಸಂಭವವಿದ್ದು, ಗುರುಮಠಕಲ್‌ ಮತಕ್ಷೇತ್ರದ ವ್ಯಾಪ್ತಿಯ ಭೀಮಾ ನದಿ ತೀರದ ರೈತರು ಗುಳೆ ಹೋಗುವ ಪರಿಸ್ಥಿತಿಯೂನಿರ್ಮಾಣವಾಗಬಹುದು. ಇವೆಲ್ಲ ಅಂಶ ಗಂಭೀರವಾಗಿ ಪರಿಗಣಿಸಿ ಸನ್ನತಿ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು ಹರಿಸಿ ರೈತರಿಗೆ ನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next