Advertisement
ಈ ಪ್ರದೇಶಗಳಿಗೆ ಅವರು ಸೆ.23 ರಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ತೋಟಗಾರಿಕಾ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳೆಗಾರರ ಸಂಕಷ್ಟ ಆಲಿಸಿ, ಬೆಳೆ ಹಾನಿ ಪರಿಶೀಲನೆಯನ್ನು ನಡೆಸಿದರು. 20 ದಿನಗಳೊಳಗಾಗಿ ಮಟ್ಟುಗುಳ್ಳದ ಫಸಲು ಕೈ ಸೇರಲು ಸಿದ್ಧವಾಗಿರುವ ನಡುವೆಯೇ ಮಟ್ಟುಗುಳ್ಳದ ಬೆಳೆ ಪ್ರವಾಹ ದಿಂದ ಹಾನಿಗೀಡಾಗಿದೆ. ಈಗಾಗಲೇ ಮಲಿcಂಗ್ ಶೀಟ್, ಗೊಬ್ಬರ, ಸಸಿ ಸಹಿತ ಬೆಳೆಗಾರರಿಗೆ ಲಕ್ಷಾಂತರ ರೂ. ನಷ್ಟ ವಾಗಿದೆ. ಆ ನಿಟ್ಟಿನಲ್ಲಿ ಬೆಳೆ ನಷ್ಟಕ್ಕೆ ಹೆಚ್ಚಿನ ಮೊತ್ತದ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿದ್ದರು.
ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ ಎಷ್ಟು ಬೆಳೆಗಾರರ ಮತ್ತು ಎಷ್ಟು ಬೆಳೆಹಾನಿ ಸಂಭವಿಸಿದೆ ಎಂಬ ಬಗ್ಗೆ ವರದಿ ಸಿದ್ಧಪಡಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಸರಕಾರದಿಂದ ವಿಶೇಷವಾಗಿ ಪ್ಯಾಕೇಜ್ ಬಂದಲ್ಲಿ ಹೆಚ್ಚಿನ ಪರಿಹಾರ ಮೊತ್ತವನ್ನು ನೀಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಎನ್.ಡಿ.ಆರ್.ಎಫ್. ಮಾರ್ಗದರ್ಶನದಡಿ ಮಾತ್ರ ಪರಿಹಾರ ಹಣ ಕೊಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.