Advertisement

Letter row; ನಕಲಿ ಪತ್ರ ಪರಿಗಣಿಸದಿರಿ: ರಾಜ್ಯಪಾಲರಿಗೆ ಚಲುವರಾಯ ಸ್ವಾಮಿ ಮನವಿ

06:24 PM Aug 09, 2023 | Team Udayavani |

ಬೆಂಗಳೂರು: “ಜವಾಬ್ದಾರಿಯಿಲ್ಲದ ನಕಲಿ ಆರೋಪಗಳು ಮತ್ತು ಅರ್ಜಿಗಳನ್ನು ಪರಿಗಣಿಸಬೇಡಿ” ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಬುಧವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಅವರಲ್ಲಿ ಮನವಿ ಮಾಡಿದ್ದಾರೆ.

Advertisement

ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಚಲುವರಾಯಸ್ವಾಮಿ ಅವರು, “ಇಂತಹ ಹೊಣೆಗಾರಿಕೆಯಿಲ್ಲದ ನಕಲಿ ಆರೋಪಗಳು ಮತ್ತು ನಕಲಿ ಅರ್ಜಿಗಳಿಗೆ ಪರಿಗಣಿಸದಂತೆ ನಿಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತೇನೆ. ಮುಂದೆ ಇಂತಹ ಘಟನೆಗಳು ನಡೆದರೆ ಪ್ರಾಥಮಿಕ ತನಿಖೆಗೆ ಆದೇಶಿಸಿ, ತನಿಖೆಯಲ್ಲಿ ಪತ್ರ ಅಸಲಿ ಎಂದು ಕಂಡುಬಂದರೆ ತನಿಖೆಗೆ ಆದೇಶಿಸಬೇಕು. ನಿಜವೆಂದು ಕಂಡುಬಂದರೆ ಮತ್ತು ಸಾಕ್ಷ್ಯಾಧಾರಗಳಿಂದ ಬೆಂಬಲಿತವಾಗಿದೆ ಎಂದು ಕಂಡುಬಂದರೆ ಆ ಪ್ರಕರಣವು ವಿಚಾರಣೆಗೆ ಯೋಗ್ಯವಾಗಿರಬೇಕು ಅಥವಾ ಸಾಂವಿಧಾನಿಕ ಸಂಸ್ಥೆಗಳನ್ನು ಸಮಾಜವಿರೋಧಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಸುಲಭವಾಗಿ ಸರಕಾರ, ಇಲಾಖೆ ಮತ್ತು ನನಗೆ ಕೆಟ್ಟ ಹೆಸರು ತರಲು ದುರುಪಯೋಗಪಡಿಸಿಕೊಳ್ಳಬಹುದು” ಎಂದು ಮನವಿ ಮಾಡಿದ್ದಾರೆ.

ಪತ್ರವು “ಸಂಪೂರ್ಣವಾಗಿ ನಕಲಿ” ಎಂದು ಪ್ರತಿಪಾದಿಸಿರುವ ಸಚಿವ ಚಲುವರಾಯಸ್ವಾಮಿ ಈ ಬಗ್ಗೆ ತಿಳಿದ ನಂತರ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಏಳು ಸಹಾಯಕ ಕೃಷಿ ನಿರ್ದೇಶಕರು (ಎಡಿಎ) ಇತ್ತೀಚೆಗೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಸಚಿವರು ಜಂಟಿ ನಿರ್ದೇಶಕರ ಮೂಲಕ ತಮಗೆ ಆರು ಲಕ್ಷದಿಂದ ಎಂಟು ಲಕ್ಷ ರೂ. ಲಂಚ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸರಕಾರದ ವಿರುದ್ಧ ಹೋರಾಟಕ್ಕೆ ದೊಡ್ಡ ಅಸ್ತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next