Advertisement

ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ಯತ್ನ ಸರಿಯಲ್ಲ

08:08 AM Jun 11, 2020 | Suhan S |

ಹರಿಹರ: ಲಂಬಾಣಿ, ಬೋವಿ, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಠ ಜಾತಿ ಪಟ್ಟಿಯಿಂದ ಕೈಬಿಡಲು ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಇದಕ್ಕೆ ಮಣಿಯಬಾರದೆಂದು ಆಗ್ರಹಿಸಿ ಈ ಸಮುದಾಯಗಳ ಜನರು ಬುಧವಾರ ನಗರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಹಾಕುವ ಮೂಲಕ ಪತ್ರ ಚಳವಳಿ ನಡೆಸಿದರು.

Advertisement

ನಗರದ ಮುಖ್ಯ ಅಂಚೆ ಕಚೇರಿ ಮುಂದೆ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಶಿಕ್ಷಕ ರೇವಣ್ಣ ನಾಯ್ಕ ಮಾತನಾಡಿ, ಲಂಬಾಣಿ, ಬೋವಿ, ಕೊರಚ, ಕೊರಮ ಜಾತಿಗಳು ಅತಿ ಹಿಂದುಳಿದಿವೆ. ಕೆಲವು ಪಟ್ಟಭದ್ರರು ಸದರಿ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಕೈಬಿಡಬೇಕೆಂದು ಸಂಚು ನಡೆಸಿದ್ದಾರೆ.ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡೆಯಾಗಿದೆ. ಇಂತಹ ಸಂಚಿಗೆ ಒಳಗಾಗಬಾರದು.ಈ ಜಾತಿಗಳನ್ನು ಯಥಾರೀತಿ ಎಸ್ಸಿ ಪಟ್ಟಿಯಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿದರು.

ತಾಂಡಾ ರಕ್ಷಣಾ ವೇದಿಕೆ ಅಧ್ಯಕ್ಷ ಶಶಿ ನಾಯ್ಕ ಮಾತನಾಡಿ, ಸಿಕ್ಕಿರುವ ಮೀಸಲಾತಿ ಯಾರ ಭಿಕ್ಷೆಯೂ ಅಲ್ಲ. ಡಾ| ಅಂಬೇಡ್ಕರ್‌ ರವರು ರಚಿತ ಸಂವಿಧಾನ ಬದ್ಧ ಹಕ್ಕಾಗಿದೆ. ವಿನಾಕಾರಣ ಸಮಾಜದಲ್ಲಿ ಈ ವಿಷಯದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಈಗಲೂ ಮೂಲ ಸೌಕರ್ಯವಿಲ್ಲದ ತಾಂಡಾಗಳಲ್ಲಿ, ಕಾಡು, ಮೇಡುಗಳಲ್ಲಿ ಲಂಬಾಣಿ ಸಮುದಾಯದವರು ವಾಸಿಸುತ್ತಿದ್ದಾರೆ.ಬೋವಿ, ಕೊರಚ, ಕೊರಮ ಸಮುದಾಯದವರೂ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇವರ ಸರ್ವತೋಮುಖಅಭಿವೃದ್ಧಿಗೆ ಮೀಸಲಾತಿ ಅತ್ಯಗತ್ಯ ಎಂದರು.

ಭೋವಿ ಸಮಾಜದ ಮುಖಂಡರಾದ ಪರಶುರಾಮಪ್ಪ, ಮಂಜುನಾಥ, ಆರ್‌  ಯಮನೂರು, ವೆಂಕಟೇಶ್‌, ಮೋತ್ಯಾ ನಾಯ್ಕ, ರಾಜಾ ನಾಯ್ಕ, ಮಂಜಾ ನಾಯ್ಕ, ಮಂಜು, ಹರೀಶ್‌, ಶಾರುಖ್‌, ಹನುಮಂತ ನಾಯ್ಕ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next