Advertisement

ಪಿಂಚಣಿ ನೀಡುವಂತೆ ಶಿಕ್ಷಕರಿಂದ ಪತ್ರ ಚಳವಳಿ

12:05 PM Aug 23, 2019 | Team Udayavani |

ಕಾರಟಗಿ: ರಾಜ್ಯದ ಅನುದಾನಿತ ಶಾಲಾ ಕಾಲೇಜ್‌ಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಪಿಂಚಣಿ ನೀಡುವಂತೆ ಒತ್ತಾಯಿಸಿ ಸ್ಥಳೀಯ ಶ.ಬ. ವಿದ್ಯಾ ಸಂಸ್ಥೆಯ ಶಿಕ್ಷಕರು ಗುರುವಾರ ಪತ್ರ ಚಳವಳಿ ಮಾಡಿದರು.

Advertisement

ಈ ಕುರಿತು ಮಾತನಾಡಿದ ಅನುದಾನಿತ ಶಿಕ್ಷಣ ಸಂಸ್ಥೆಯ ಶಿಕ್ಷಕ ದೇವೇಂದ್ರಪ್ಪ ಎಚ್. ಒಡ್ಡೊಡಗಿ, ರಾಜ್ಯದ ಅನುದಾನಕ್ಕೆ ಒಳಪಟ್ಟ 60 ಸಾವಿರ ನೌಕರರಿಗೆ ಯಾವುದೇ ವಿಧದ ಪಿಂಚಣಿ ಸೌಲಭ್ಯವಿರುವುದಿಲ್ಲ. 01-4-2006 ನಂತರ ನೇಮಕವಾದ ಮತ್ತು 01-04-2006 ಮೊದಲೇ ನೇಮಕವಾದ ಸಾಕಷ್ಟು ನೌಕರರು ಕೊನೆಯ ತಿಂಗಳ ಸಂಬಳ ಪಡೆದು ನಿವೃತ್ತರಾಗಿದ್ದಾರೆ. ಕೆಲವರು ಅಕಾಲಿಕ ಮರಣ ಹೊಂದಿದ್ದಾರೆ, ಅನುದಾನಿತ ನೌಕರರಿಗೆ ಪಿಂಚಣಿ ನೀಡುವ ವಿಚಾರದಲ್ಲಿ ಆಗಿರುವ ತಾರತಮ್ಯ ಮತ್ತು ಅನ್ಯಾಯದಿಂದಾಗಿ ಅವರ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಈ ಕುರಿತು ಹಲವಾರು ಬಾರಿ ಹೋರಾಟಗಳು ನಡೆಸಿದರು ಫಲಕಾರಿಯಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿದ್ದಾಗ ನಮ್ಮ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಹಿಂದಿನ ಸರಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದು ಶ್ಲಾಘನೀಯ. ವೇತನ ನೀಡುತ್ತಿರುವುದು ಸರಕಾರವೇ ಆಗಿರುವುದರಿಂದ ನಿವೃತ್ತಿ ವೇತನವನ್ನು ಸರಕಾರವೇ ನೀಡಬೇಕು. ಅಲ್ಲದೇ ದೇಶದ ಇತರೆ ರಾಜ್ಯಗಳಲ್ಲಿ ಪಿಂಚಣಿ ವಿಚಾರದಲ್ಲಿ ಸರಕಾರಿ ಮತ್ತು ಅನುದಾನಿತ ಸಂಸ್ಥೆಗಳ ನೌಕರರ ಮಧ್ಯೆ ತಾರತಮ್ಯ ಇರುವುದಿಲ್ಲ. 2006ಕ್ಕೂ ಮೊದಲು ರಾಜ್ಯದಲ್ಲಿ ಸಮಾನತೆ ಇತ್ತು. ಪಿಂಚಣಿ ಪ್ರತಿಯೊಬ್ಬ ನೌಕರರ ಮೂಲಭೂತ ಹಕ್ಕು. ಆದ್ದರಿಂದ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಪಿಂಚಣಿ ಸೌಲಭ್ಯ ನೀಡುವಂತೆ ಮನವಿ ಮಾಡಿದರು. ಶಿಕ್ಷಕ ಜಗಧೀಶ ಭಜಂತ್ರಿ ಮಾತನಾಡಿ, ಪಿಂಚಣಿ ಸೌಲಭ್ಯದ ಕುರಿತು ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಅರೆಬೆತ್ತಲೆ ಮೆರವಣಿಗೆಯೊಂದಿಗೆ ಉಗ್ರಹೋರಾಟ ನಡೆಸಲಾಗುವುದು ಎಂದರು. ಶಿಕ್ಷಕ, ಶಿಕ್ಷಕಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next