Advertisement
ಕಾಲ ಬದಲಾಗುತ್ತಿದೆ. ಅಂತೆಯೇ ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಯಾವುದೇ ದೇಶದಲ್ಲಿ ನಡೆಯುವ ವರ್ತಮಾನವನ್ನು ಸಲೀಸಾಗಿ ನೋಡುವಂತಹ ಅಂತರ್ಜಾಲ ವ್ಯವಸ್ಥೆ ಇದೆ. ಕ್ಷಣಮಾತ್ರದಲ್ಲಿ ಅಮೆರಿಕಾದಲ್ಲಿ ನಡೆಯುವ ಘಟನೆಯೊಂದು ಭಾರತದ ಯಾವುದೋ ಚಿಕ್ಕ ಹಳ್ಳಿಯಲ್ಲಿ ಕುಳಿತು ನೋಡುವ, ವಿಶ್ಲೇಷಿಸುವಂತ ಈ ಕಾಲದಲ್ಲಿ ಇಂದಿಗೂ ಕನ್ನಡದ ದೊಡ್ಡ ಹಬ್ಬ ಅಕ್ಷರ ಜಾತ್ರೆಯನ್ನು ನೇರವಾಗಿ ನೋಡಲಾಗದ ಪರಿಸ್ಥಿತಿ ಇದ್ದು, ಕನ್ನಡ ಸಾಹಿತ್ಯ ಪರಿಷತ್ತು ಅಪ್‌ಡೇಟ್ ಆಗಬೇಕಿದೆ ಎಂಬ ಮಾತು ಕೇಳಿ ಬರುತ್ತಿದೆ.
ರಾಜ್ಯಗಳ ಕನ್ನಡಿಗರು ಸೇರಿದಂತೆ ಸಾಗರಾಚೆಗೆ ಇರುವ ಕನ್ನಡಿಗರಿಗೆ ಸಮ್ಮೇಳನದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ವಿವಿಧ ಗೋಷ್ಠಿಗಳನ್ನು ನೇರ ಪ್ರಸಾರದಲ್ಲಿ ನೋಡಲು ಅನುಕೂಲ ಕಲ್ಪಿಸುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿದ್ದು, ಈ ಬಾರಿಯೂ ಹೊರನಾಡು, ವಿದೇಶಗಳಲ್ಲಿರುವ ಕನ್ನಡಿಗರು ಅವಕಾಶ ವಂಚಿತರಾಗುತ್ತಿರುವುದು ವಿಪರ್ಯಾಸವೆನ್ನಬಹುದು. ದಾಖಲೀಕರಣ: ಪ್ರಸ್ತುತ ರಾಷ್ಟ್ರಕವಿ ಕುವೆಂಪು ಮುಖ್ಯವೇದಿಕೆ
ಕಾರ್ಯಕ್ರಮ ಸೇರಿ ವಿವಿಧ ಗೋಷ್ಠಿಗಳನ್ನು ವೇದಿಕೆ ಸುತ್ತಮುತ್ತ ಅಳವಡಿಸಲಾಗುತ್ತಿರುವ ಸುಮಾರು 13ರಿಂದ 20 ಎಲೆಕ್ಟ್ರಾನಿಕ್ ಪರದೆಗಳಲ್ಲಿ ನೇರವಾಗಿ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಮ್ಮೇಳನದ ಪ್ರತಿಯೊಂದು ಕಾರ್ಯಕ್ರಮವನ್ನು ದಾಖಲು ಮಾಡಲು ಯೋಜನೆ ರೂಪಿಸಿದ್ದು, ಈಗಾಗಲೇ ಅದಕ್ಕಾಗಿ ಹಲವು ವಿಡಿಯೋಗ್ರಾಫರ್‌ಗಳನ್ನು, ಛಾಯಾಚಿತ್ರಗಾರರನ್ನು
ನೇಮಿಸಲಾಗಿದೆ. ಗೋಷ್ಠಿ, ಊಟ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ವೇದಿಕೆ ಕಾರ್ಯಕ್ರಮ ಎಲ್ಲವೂ ದಾಖಲುಗೊಳ್ಳಲಿದೆ. ಸಾಂಪ್ರದಾಯಿಕ ಶಿಷ್ಠಾಚಾರ?: ಬೆಂಗಳೂರಿನಲ್ಲಿ ಪ್ರತಿದಿನವೂ ಹೊಸ ಹೊಸ ಕೃತಿಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಇತ್ತೀಚಿನ ಟ್ರೆಂಡ್ ಹೇಗಾಗಿದೆಯೆಂದರೆ, ಕೃತಿ ಲೋಕಾರ್ಪಣೆ ಕಾರ್ಯಕ್ರಮವೂ ಕೂಡ ಕ್ಷಣದಲ್ಲಿ ಪೇಸ್‌ಬುಕ್‌ನಲ್ಲಿ ನೇರಪ್ರಸಾರ(ಲೈವ್)ದಲ್ಲಿ ಬಿಡುಗಡೆಯಾಗುತ್ತದೆ. ಕೆಲವು ಕಡೆಗಳಲ್ಲಿ ಯೂಟೂಬ್‌ಗಳಲ್ಲೂ ಕಾರ್ಯಕ್ರಮದ ವಿಡಿಯೋ ಸಿಗುವಂತೆ ಆಯೋಜಕರು, ಲೇಖಕರು ಮಾಡುವುದಲ್ಲದೆ, ಅದರ ಸಂಪರ್ಕವನ್ನು (ಲಿಂಕ್) ಕಳುಹಿಸಿ ಕೊಟ್ಟು, ಅದು ವೈರಲ್ ಆಗುವಂತೆ ಮಾಡುತ್ತಾರೆ. ಆದರೆ, ಸಾಮಾಜಿಕ ಜಾಲತಾಣಗಳು ಮಿಂಚಿನಂತೆ ಜಗತ್ ವ್ಯಾಪಿ ಹರಿದಾಡುತ್ತಿರುವಾಗ ಅಖೀಲ ಭಾರತ ಕನ್ನಡ ಸಾಹತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್‌ನಲ್ಲಿ ನೇರವಾಗಿ ಪ್ರಸಾರ ಮಾಡುವ ವ್ಯವಸ್ಥೆಯನ್ನು ಮಾತ್ರ ಮಾಡಿಲ್ಲ. ಕಸಾಪ ಕೇವಲ ಪುಸ್ತಕಗಳನ್ನು ಮುದ್ರಿಸುವುದು, ವರ್ಷಕ್ಕೊಂದು ಸಮ್ಮೇಳನ ಮಾಡಿ ಸುಮ್ಮನಿರುವುದನ್ನೇ ತನ್ನ ಸಾಂಪ್ರದಾಯಿಕ ಶಿಷ್ಠಾಚಾರವೆಂದು ಕೈಕಟ್ಟಿ ಕುಳಿತುಕೊಂಡಿದೆ ಎಂಬ ಸಂಶಯ ನನಗಿದೆ. ಇಲ್ಲದಿದ್ದರೆ, ಪ್ರತಿ ಸಮ್ಮೇಳನವನ್ನು ತಂತ್ರಜಾnನ ಬಳಕೆ ಮಾಡಿಕೊಂಡು ಗಡಿನಾಡು, ಹೊರನಾಡು, ವಿದೇಶದಲ್ಲಿರುವ ಅನಿವಾಸಿ ಕನ್ನಡಿಗರಿಗೂ ಅಕ್ಷರ ಜಾತ್ರೆಯ ಸವಿ ಉಣಿಸಬಹುದಿತ್ತು.
ಆದರೆ, ಸಾಮಾಜಿಕ ಜಾಲತಾಣವನ್ನು ಈ ಸಮ್ಮೇಳನದಲ್ಲೂ ಬಳಕೆ ಮಾಡಿಕೊಳ್ಳದಿರುವುದು ಬೇಸರ ತರಿಸುತ್ತಿದೆ ಎನ್ನುತ್ತಾರೆ ಸಮ್ಮೇಳನಕ್ಕೆ ದೂರದ ರಾಯಚೂರಿನಿಂದ ಆಗಮಿಸಿರುವ ರೇವಣ್ಣಬಸಪ್ಪಕೆಂಗಣ್ಣವರ್.
Related Articles
●ಡಾ.ಮನುಬಳಿಗಾರ್, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು
Advertisement
ಮಾಹಿತಿ-ತಂತ್ರಜಾnನ ಕ್ಷೇತ್ರದಲ್ಲಿ ಇಡೀ ವಿಶ್ವಕ್ಕೆ ಕನ್ನಡಿಗರೇ ಗುರುಗಳು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಕನ್ನಡ ನುಡಿ ಹಬ್ಬದ ಕುರಿತು ಚರ್ಚೆಯಾಗುತ್ತಿಲ್ಲ. ಇನ್ನು ನೇರ ಪ್ರಸಾರವಂತೂ ಕನಸಿನ ಮಾತು. ಕನ್ನಡಿಗರು ಅಪ್‌ಡೇಟ್ ಆಗಬೇಕು. ಕನ್ನಡವನ್ನು ಅಪ್‌ಡೇಟ್ ಮಾಡಬೇಕು.●ಡಾ.ನಿರಂಜನ್ ಕುಮಾರ್, ಎಂಜಿನಿಯರ್, ಮೈಸೂರು