Advertisement

ಪರೀಕ್ಷೆ ನಡೆಸಲಿ: ಹೊರಟ್ಟಿ

05:09 AM Jun 11, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕು ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿ ಬುಧವಾರ ಮಾಧ್ಯಮ  ಗಳೊಂದಿಗೆ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಪರೀಕ್ಷೆ ರದ್ದು ಮಾಡಲಾಗಿದೆ. ಆದರೆ, ಅಲ್ಲಿ 3 ಹಂತದ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಅವರಿಗೆ 10ನೇ ತರಗತಿ ಕಡ್ಡಾಯವಲ್ಲ.

Advertisement

ಈಗ ಪರೀಕ್ಷೆ ನಡೆಸದಿದ್ದರೆ ಮುಂದೆ ಸಮಸ್ಯೆ ಗಳಾಗುತ್ತವೆ. ಪಿಯುಸಿ ಪ್ರವೇಶ, ಉದ್ಯೋಗ ಪಡೆಯಲು ತೊಂದರೆ  ಆಗುತ್ತದೆಂದರು. ಇದೇ ವೇಳೆ, ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಶೇ.90 ಪೋಷಕರು ಬಡವರಿಲ್ಲ. ಆಂಗ್ಲ ಮಾಧ್ಯಮ ಬಯಸುವ ಪೋಷಕರು ಶ್ರೀಮಂತರಾಗಿರುತ್ತಾರೆ. ಅವರು ಶಾಲಾ ಪ್ರವೇಶ ಶುಲ್ಕ ಕಟ್ಟಲಿ.

ಆದರೆ, ಆರ್‌ಟಿಇ  ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳ ಹಣವನ್ನು ಸರ್ಕಾರ ಬೇಗ ಬಿಡುಗಡೆ ಮಾಡಬೇಕೆಂದರು. ರಾಜ್ಯಸಭೆಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಆಯ್ಕೆ ಸಮರ್ಥಿಸಿಕೊಂಡ ಅವರು, ರಾಜ್ಯದ 25 ಬಿಜೆಪಿ ಸಂಸದರಿದ್ದು ಸಂಸತ್ತಿನಲ್ಲಿ ಎಷ್ಟು ಬಾರಿ ಧ್ವನಿ ಎತ್ತಿದ್ದಾರೆ. ಹಿಂದಿ, ಇಂಗ್ಲಿಷ್‌ ಬರುವುದಿಲ್ಲ ಎಂದು ಹೇಳುತ್ತಾರೆ.

ಆದರೆ, ದೇವೇಗೌಡರು ರಾಜ್ಯದ ಪರ ದನಿ ಎತ್ತುತ್ತಾರೆ. ಪಕ್ಷಾತೀತವಾಗಿ ದೇವೇಗೌಡರು ಸಂಸತ್ತಿನಲ್ಲಿರಲಿ ಎಂದು ಬಯಸುತ್ತಾ ರೆಂದರು. ವಿಧಾನ ಪರಿಷತ್‌ ಚುನಾವಣೆಗೆ ಎಚ್‌.ಎಚ್‌. ಕೋನರೆಡ್ಡಿ, ಕುಪೇಂದ್ರ ರೆಡ್ಡಿ, ಪ್ರಕಾಶ್‌, ಟಿ.ಎ.ಶರವಣ ಆಕಾಂಕ್ಷಿಗಳಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆಂದರು.

Advertisement

Udayavani is now on Telegram. Click here to join our channel and stay updated with the latest news.

Next