Advertisement
ಕೊರೊನಾ ಎಂಬ ಈ ಕಣ್ಣಿಗೆ ಕಾಣದ ಜೀವಾಣು ಲಕ್ಷಾಂತರ ಜನರ ಸಾವಿಗೆ ಕಾರಣವಾಗಿ ಇಡೀ ವಿಶ್ವದ ಆರ್ಥಿಕತೆಯನ್ನು ನೆಲಕ್ಕುರುಳಿಸಿ ಬಿಟ್ಟಿದೆ. ಅನೇಕ ಜನರು ಕೆಲಸ ಕಳೆದುಕೊಂಡು ಬದುಕುವ ದಾರಿ ಕಾಣದೆ, ಮಾನಸಿಕವಾದ ಕಾಯಿಲೆಗಳಿಗೆ ಶಿಕಾರಿಯಾಗಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಮಾನಸಿಕ ಕಾಯಿಲೆಗಳಿಂದ ವಿಶ್ವದಾದ್ಯಂತ ಆತ್ಮಹತ್ಯೆಗಳ ಬಗ್ಗೆ ಚಿಂತನ ಮಂಥನ ಮಾಡಿಕೊಂಡು ಆ ದಿಶೆಯಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.
Related Articles
ಆಧಾರಿತವಾಗಿರುತ್ತದೆ ಅನ್ನುವುದು ಎಷ್ಟೊಂದು ಸತ್ಯ. ಒಂದು ಕಡೆ ಚಂದ್ರನಲ್ಲಿ ಮನೆ ಮಾಡುವ ತಯಾರಿಯಲ್ಲಿರುವ ನಾವು ಬದುಕಿನ ಮೂಲ ಶಕ್ತಿಯ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡುವಂತಹ ಅಮಾಯಕ ಕೆಲಸಗಳನ್ನು ಮಾಡುತ್ತಿದ್ದೇವೆ. ಸರಕಾರದ ಧ್ಯೇಯ, ಧೋರಣೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆಂತರಿಕ ಶಕ್ತಿಗಳ ಪ್ರಚೋದನೆಗೆ ಒಳಪಟ್ಟು ಕಲಹ ಹುಟ್ಟಿಸಿ, ಜನಸಾಮಾನ್ಯರ ಜೀವನ ಮತ್ತು ಸಾರ್ವಜನಿಕ ಸಂಪತ್ತಿಗೆ ಹಾನಿಯುಂಟು ಮಾಡುವ ದುಷ್ಟ ಶಕ್ತಿಗಳು ತಲೆ ಎತ್ತಿ ನಿಲ್ಲುತ್ತಿರುವುದು ನಿಜಕ್ಕೂ ಚಿಂತಿಸಬೇಕಾದ ಸಂಗತಿಯಾಗಿದೆ.
Advertisement
ಪ್ರಜಾತಂತ್ರ ರಾಷ್ಟ್ರದಲ್ಲಿ ಪ್ರತಿಯೊಬ್ಬನಿಗೂ ಸಾಂವಿಧಾನಿಕವಾದ ಹಕ್ಕು ಬಾಧ್ಯತೆಗಳಿದ್ದರೂ ತಮ್ಮ ನಿಜ ಸ್ವಾರ್ಥಕ್ಕಾಗಿ ಯುವ ಜನತೆಯನ್ನು ಹಾಳು ದಾರಿಗೆಪ್ರಚೋದಿಸುವ ಶಕ್ತಿಗಳನ್ನು ಮುರಿದು ತಟಸ್ಥಗೊಳಿಸುವುದು ಅನಿವಾರ್ಯವಾಗಿದೆ. ಡಿಜಿಟಲ್ ಮಾಧ್ಯಮದೊಂದಿಗೆ ಇಂದು ಕಾಂಕ್ರೀಟ್ ನೆಲದಲ್ಲಿ ವಾಸಿಸುತ್ತಿರುವ ಜನತೆ ಪ್ರಕೃತಿಯ ಮಹತ್ವವನ್ನು ಅರಿತು ಅದರೊಂದಿಗೆ ಸಾಮರಸ್ಯದ ಜೀವನ ಮಾಡಲು ಪ್ರಯತ್ನಿಸಬೇಕು. ಸಂಭ್ರಮದಿಂದ ಸ್ವಾಗತಿಸುತ್ತಿರುವ ಹೊಸ ವರುಷ, ಹೊಸ ಶತಮಾನ ಜಗತ್ತಿನ ಅಂಧಕಾರವನ್ನು ಸರಿಸಿ, ಶಾಂತಿಯ ನೆಲೆಗಟ್ಟಲ್ಲಿ ಎಲ್ಲರೂ ಸುಖ ಶಾಂತಿಯಿಂದ ಬದುಕುವಂತೆ ಅವಕಾಶ ಮಾಡಿಕೊಡಲಿ. ಶಾಂತಿ, ಖುಷಿ, ಪ್ರೀತಿ ತುಂಬಿದ ಹೃದಯದಲ್ಲಿ, ನಗು ತುಂಬಿದ ತುಟಿಗಳಲಿ, ಹೊಸ ಹೊಸ ಕನಸುಗಳ ಕಂಗಳಲಿ, ಸಕಾರಾತ್ಮದೆಡೆ ಹೆಜ್ಜೆಯಿಡುವ ಈ ಶುಭ ಸಂದರ್ಭದಲ್ಲಿ “ತಮಸೋಮಾ ಜ್ಯೋತಿರ್ಗಮಯ’ ಎಂಬ ವೇದವಾಕ್ಯದೊಂದಿಗೆ, ಸುಂದರ ಕಾಮನೆಯೊಂದಿಗೆ
ಒಬ್ಬರನ್ನೊಬ್ಬರು ಪ್ರೀತಿಸಿ, ಗೌರವಿಸಿ, ಹೊಸ ಆಸೆ, ಭರವಸೆಯೊಂದಿಗೆ ಮುಂದಡಿಯಿಡೋಣ. *ಸುಶೀಲಾ ಎಸ್. ಅಮೀನ್
ಬೊರಿವಲಿ, ಲೇಖಕಿ