Advertisement

ಮೊದಲಿಗೆ ಶಾಲಾ ಕಾಲೇಜ್‌ ಆರಂಭವಾಗಲಿ: ಕಪಿಲ್‌

02:01 AM Apr 26, 2020 | Sriram |

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ಬಳಿಕ ಮೊದಲಿಗೆ ಶಾಲಾ ಕಾಲೇಜ್‌ಗಳು ಪುನರಾರಂಭಗೊಳ್ಳುವುದು ಯುವ ಪೀಳಿಗೆಗೆ ಅತ್ಯಂತ ಆವಶ್ಯಕವಾಗಿದೆ. ಕ್ರೀಡಾ ಚಟುವಟಿಕೆಗಳು ನಿಧಾನವಾಗಿ ಆರಂಭವಾಗಲಿ ಎಂದು ಕಪಿಲ್‌ ದೇವ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಕಾರಣ ವಿಶ್ವವೇ ಸ್ತಬ್ಧವಾಗಿದೆ. ಕ್ರೀಡೆ ಸಹಿತ ಯಾವುದೇ ಚಟುವಟಿಕೆ ತತ್‌ಕ್ಷಣ ಪುನರಾರಂಭಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಕ್ರೀಡೆಗಳ ಆರಂಭಕ್ಕೆ ಕಾಯಬಹುದು ಎಂದು 61ರ ಹರೆಯದ ಕಪಿಲ್‌ ತಿಳಿಸಿದರು.

ಲಾಕ್‌ಡೌನ್‌ನಿಂದಾಗಿ ಯಾವುದೇ ಚಟುವಟಿಕೆ ನಡೆಯು ತ್ತಿಲ್ಲ. ಎಲ್ಲ ಜನರು ಮನೆಯಲ್ಲಿಯೇ ಉಳಿಯುವಂತಾಗಿದೆ. ಈ ಸನ್ನಿವೇಶವನ್ನು ಬೃಹತ್‌ ಮಟ್ಟದಲ್ಲಿ ನೋಡುವುದಾದರೆ ಇದರಿಂದ ಬಹಳಷ್ಟು ತೊಂದರೆಗೆ ಸಿಕ್ಕಿರುವುದು ಶಾಲಾ ಮತ್ತು ಕಾಲೇಜಿನ ಮಕ್ಕಳು. ಅವರ ಅಮೂಲ್ಯ ಸಮಯವು ಇದರಿಂದ ನಷ್ಟವಾಗುತ್ತಿದೆ. ಹೀಗಾಗಿ ಶಾಲಾ ಕಾಲೇಜ್‌ಗಳು ಪುನರಾರಂಭಗೊಳ್ಳುವುದಕ್ಕೆ ನನ್ನ ಮೊದಲ ಆದ್ಯತೆ. ಕ್ರಿಕೆಟ್‌, ಫ‌ುಟ್‌ಬಾಲ್‌ ನಿಧಾನವಾಗಿ ಆರಂಭವಾಗಲಿ ಎಂದು ಕಪಿಲ್‌ ಹೇಳಿದರು.

ಗಡಿಯಲ್ಲಿನ ಚಟುವಟಿಕೆ ಮೊದಲು ನಿಲ್ಲಿಸಲಿ
ಕೋವಿಡ್-19 ನಿಯಂತ್ರಣಕ್ಕೆ ನಿಧಿ ಸಂಗ್ರಹಿಸಲು ಭಾರತ ಮತ್ತು ಪಾಕಿಸ್ಥಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜಿಸಬೇಕೆಂಬ ಪಾಕಿಸ್ಥಾನದ ವೇಗಿ ಶೋಯಿಬ್‌ ಅಖ್ತರ್‌ ಸಲಹೆಗೆ ಕಪಿಲ್‌ ಒಪ್ಪಿಗೆ ಸೂಚಿಸಿಲ್ಲ. ಭಾರತದ ಜತೆ ದ್ವಿಪಕ್ಷೀಯ ಸರಣಿ ಪುನರಾರಂಭಗೊಳ್ಳಬೇಕಾದರೆ ಪಾಕಿಸ್ಥಾನ ಮೊದಲಿಗೆ ಗಡಿಯಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲಿ ಮತ್ತು ಇದರ ಬದಲಾಗಿ ಈ ಹಣವನ್ನು ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಳ್ಳಲಿ ಎಂದು ಕಪಿಲ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next