Advertisement
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಿಟಿಷರು 200 ವರ್ಷಕ್ಕಿಂತ ಹೆಚ್ಚು ವರ್ಷ ಆಳ್ವಿಕೆ ಮಾಡಿದ ವೇಳೆ ದೇಶದ
ಇತಿಹಾಸ ಪುಟದಲ್ಲಿ ಅನೇಕ ಮಹಾನ್ ನಾಯಕರ ಹೆಸರುಗಳಿವೆ. ಅದೇ ರೀತಿ ಬ್ರಿಟಿಷರ ಇತಿಹಾಸ ಪುಟದಲ್ಲೂ ಟಿಪ್ಪು ಸುಲ್ತಾನ್ ಹೆಸರು ದಾಖಲಾಗಿದೆ. ಲಂಡನ್‌ನ ವಸ್ತು ಸಂಗ್ರಹಾಲಯದಲ್ಲಿ ಟಿಪ್ಪು ಅವರದ್ದೇ ಪ್ರತ್ಯೇಕ ವಿಭಾಗವಿದೆ.
ಬೇಕಾದರೆ ಬಿಜೆಪಿಯುವರು ಲಂಡನ್‌ಗೆ ಹೋಗಿ ನೋಡಿಕೊಂಡು ಬರಲಿ ಎಂದು ಸವಾಲು ಹಾಕಿದರು.
Related Articles
Advertisement
ಬ್ರಿಟಿಷರ ವಿರುದ್ಧ ಹೋರಾಡಿದವರನ್ನು ವಿರೋಧಿಸುವ ಬಿಜೆಪಿ ಮತ್ತು ಆರ್‌ಎಸ್ ಎಸ್‌ನಿಂದ ಯಾವೊಬ್ಬ ನಾಯಕನೂ ಸ್ವಾತಂತ್ರ್ಯಾ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಹೋಗಲಿ ಸ್ವಾತಂತ್ರ್ಯಾ ಸಿಕ್ಕ ನಂತರವಾದರೂ ಇವರು ಏನೂ ಮಾಡಿದ್ದಾರೆ? ದೇಶ ಭಕ್ತ ಎಂದು ಕರೆದುಕೊಳ್ಳುವ ಇವರು 2012ರ ವರೆಗೂ ಆರ್ ಎಸ್‌ಎಸ್ ಕಚೇರಿಯ ಮೇಲೆ ತಿರಂಗ ಧ್ವಜವನ್ನೇ ಹಾರಿಸಿರಲಿಲ್ಲ ಎಂದರು.
ಟಿಪ್ಪು ಯಾವುದೇ ಧರ್ಮದ ಆಧಾರದಲ್ಲಿ ಯಾವತ್ತೂ ಯುದ್ಧ ಮಾಡಿಲ್ಲ. ಅಂದಿನ ದಿನಗಳು ಮತ್ತು ಇಂದಿನ ದಿನಗಳಿಗೆ ಸಮೀಕರಿಸಿ ಸಮಾಜ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಬಿಡಬೇಕು. ಇತಿಹಾಸದಲ್ಲಿ ರಾಜಕೀಯ ಹಾಗೂ ಜಾತಿಬೆರೆಸುವುದು ತಪ್ಪು. ಪ್ರಬುದ್ಧ ಸಮಾಜ ಕಟ್ಟಲು ಎಲ್ಲರ ಅಭಿಪ್ರಾಯಗಳನ್ನು ಅಲಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಒಡೆದು ಆಳುವ ನೀತಿ ಸರಿಯಲ್ಲ ಎಂದು ಟೀಕಿಸಿದರು. ಶಾಸಕಿ ಖನೀಜ್ ಫಾತಿಮಾ ಮಾತನಾಡಿ, ದೇಶದ ಸ್ವಾತಂತ್ರ್ಯಾಕ್ಕೆ ಹೋರಾಡಿದ್ದ ಟಿಪ್ಪು ಸುಲ್ತಾನ್ ಬ್ರಿಟಿಷರಲ್ಲಿ ಭಯ ಹುಟ್ಟಿಸಿದ ಏಕೈಕ ದೊರೆ. ಇಂದು ಟಿಪ್ಪು ಸುಲ್ತಾನ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇಂತಹವರಿಗೆ ತಕ್ಕ ಪಾಠ
ಕಲಿಸಬೇಕಿದೆ ಎಂದರು. ಕಿಪ್ಪು ಸುಲ್ತಾನ್ ಕುರಿತು ನಿವೃತ್ತ ಪ್ರಾಧ್ಯಾಪಕ ಅಬ್ದುಲ್ ಹಮೀದ್ ಅಕºರ್, ಕಬೂಲ್ ಕೊಕಟನೂರ ವಿಶೇಷ ಉಪನ್ಯಾಸ ನೀಡಿದರು. ಮಹಾನಗರ ಪಾಲಿಕೆ ಮೇಯರ್ ಮಲ್ಲಮ್ಮ ವಳಕೇರಿ, ಟಿಪ್ಪು ಸೌಹಾರ್ದ ವೇದಿಕೆ ಅಧ್ಯಕ್ಷ ಶೌಕತ್ ಅಲಿ ಆಲೂರ, ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಜಿಪಂ ಸಿಇಒ ಡಾ| ಪಿ.ರಾಜಾ, ಪಾಲಿಕೆ ಆಯುಕ್ತ ಪೆದ್ದಪ್ಪಯ್ಯ ಆರ್. ಎಸ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಹಾಗೂ ಮತ್ತಿತರು ಇದ್ದರು.