Advertisement

ಹಿರಿಯರು ಉಳಿಸಿದ ಜಾನಪದ ಬೆಳೆಸೋಣ

02:55 PM Aug 28, 2022 | Team Udayavani |

ಕಲಬುರಗಿ: ಜಾನಪದ ಕಲೆಯನ್ನು ನಮ್ಮ ಹಿರಿಯರು ಉಳಿಸಿಕೊಂಡು ಬಂದಿದ್ದು, ಅದನ್ನು ಮುಂದಿನ ತಲೆಮಾರಿಗಾಗಿ ನಾವು ಬೆಳೆಸಿ ಕೊಡಬೇಕಿದೆ ಎಂದು ಪಂಚ ಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ್‌ ಹೇಳಿದರು.

Advertisement

ನಗರದ ಕನ್ನಡ ಭವನದ ಸುವರ್ಣ ಸಭಾವನದಲ್ಲಿ ನಡೆದ ಸರಸ್ವತಿ ಸಾಂಸ್ಕೃತಿಕ ಕಲಾ ಟ್ರಸ್ಟ್‌ , ಕನ್ನಡ ಮತ್ತು ಸಂಸƒRತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಜಾನಪದ ಉತ್ಸವ -2022ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಕಲೆ ನಶಿಸಿ ಹೋಗುತ್ತಿದೆ. ನಾವು, ನೀವೆಲ್ಲರೂ ಸೇರಿ ಜಾನಪದ ಕಲೆ ಉಳಿವಿಗೆ ಕಂಕಣ ಬದ್ದರಾಗೋಣ ಎಂದರು.

ಮುಖ್ಯ ಅತಿಥಿಯಾಗಿದ್ದ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಹಾಯಕ ಆಡಳಿತ ಅಧಿಕಾರಿ ಶಿವರಾಜ ಎಸ್‌. ಪಾಟೀಲ ಮಾತನಾಡಿ, ಜಾನಪದ ಕಲಾವಿದರಿಗೆ ವೇದಿಕೆ ಒದಗಿಸುವ ಜವಾಬ್ದಾರಿ ನಮ್ಮ ಭಾಗದ ಸಂಘ-ಸಂಸ್ಥೆಗಳ ಮೇಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಾಬುರಾವ್‌ ಕೋಬಾಳ ಮಾತನಾಡಿ, ವಿವಿಧ ಸಂಘ-ಸಂಸ್ಥೆಗಳು ಜಾನಪದ ಕಲಾವಿದರಿಗೆ ವೇದಿಕೆ ಕಲ್ಪಿಸುವಲ್ಲಿ ಶ್ರಮಿಸಬೇಕು ಎಂದು ಕೋರಿದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಬಸವರಾಜ ತೋಟದ್‌ ಮಾತನಾಡಿದರು. ಮುಖಂಡರಾದ ಶಿವಾನಂದ ಪಠಪತಿ, ಸಿದ್ದಲಿಂಗಶೆಟ್ಟಿ ಶಿರವಾಳ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಜನಪದ ಗಾಯನ, ವಚನ ಗಾಯನ, ಸೋಬಾನೆ ಪದ, ತತ್ವಪದಗಳ ಹಾಡುಗಾರಿಕೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next