Advertisement

ಮದುವೆ ದಿನ ಮೆರೆಯುವ ಸೌಂದರ್ಯದ ತಯಾರಿ ಹೀಗಿರಲಿ

12:21 AM Feb 21, 2020 | Sriram |

ಮದುವೆ ಎಂದರೆ ಏನು ಮೆರವಣಿಗೆ. ಅಂದರೆ ಎಂದು ಕೇಳಬೇಡಿ. ಮೆರವಣಿಗೆ ಎಂದರೆ ಸಂಭ್ರಮಕ್ಕೆ ಮತ್ತೂಂದು ಉಪಮೆ.

Advertisement

ಬದುಕಿನಲ್ಲಿ ಅತ್ಯಂತ ಮುಖ್ಯವಾದ ಗಳಿಗೆ ಮದುವೆ. ತನಗೂ ಮತ್ತು ತನ್ನನ್ನು ಇಷ್ಟಪಡುವವರಿಗೂ ಖುಷಿಯಾಗುಂತೆ ಕಂಗೊಳಿಸುವ ದಿನ. ಒಂದು ಅರ್ಥದಲ್ಲಿ ಹೇಳುವುದಾದರೆ ಇಬ್ಬರ ಆಸೆಗೂ ಅಂದು ಸಂಭ್ರಮ ಸ್ವರೂಪ.

ಕನಸು ತುಂಬಿದ ಕಣ್ಣುಗಳಿಗೆ ಕಾಡಿಗೆಯ ದೃಷ್ಟಿಬೊಟ್ಟು. ಮುಡಿ ತುಂಬಿದ ಮಲ್ಲಿಗೆ ಹೂವು. ಕತ್ತಿನ ತುಂಬ ವೈವಿಧ್ಯ ಆಭರಣ, ಕೈಯಲ್ಲಿ ಮಿಂಚುವ ತೋಳ್ಬಂದಿ, ಸೊಂಟ ವನ್ನು ನಯವಾಗಿ ಅಪ್ಪಿದ ಸೊಂಟದ ಪಟ್ಟಿ. ಝಗಮಗಿಸುವ ಬೆಳಕಿಗೆ ಸೆಡ್ಡು ಹೊಡೆಯುವಂತಹ ಹೊಳಪಿನ ಉಡುಪು, ಕಳೆ ತುಂಬಿದ ಮೊಗಕ್ಕೆ ಪ್ರಸಾಧನದ ಚಿತ್ತಾರ…ಇವು ಮದುಮಗಳ ಅಲಂಕಾರದ ಪರಿಪೂರ್ಣ ಲಕ್ಷಣಗಳಿವು. ಆದರೆ ಮನಸುಗಳ ನಾಡಿಮಿಡಿತ ಹಿಡಿದು ಮಗ್ಗಲು ಬದಲಿಸುವ ಕ್ಷೇತ್ರ ಫ್ಯಾಷನ್‌. ಹೀಗಾಗಿ ಮದುವೆಯಲ್ಲಿ ಟ್ರೆಂಡ್‌ಗೆ ತಕ್ಕಂತೆ ತಯಾರಾಗ ಬಯಸುವ ವಧುವಿಗೆ ಪೂರ್ವ ತಯಾರಿ ಅವಶ್ಯ. ಅದರಲ್ಲೂ ದಿನಕ್ಕೊಂದು ನಾವೀನ್ಯತೆಗೆ, ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿರುವ ಫ್ಯಾಷನ್‌ ಲೋಕದ ಒಳಹರಿವನ್ನು ಸಮರ್ಥ ವಾಗಿ ಅರಿತರೇ ಮಾತ್ರ ವಧು ಮತ್ತಷ್ಟು ಕಂಗೊಳಿಸಲು ಸಾಧ್ಯ.

ತಿಳಿ ಬಣ್ಣಗಳ ಸೀರೆಗಳದೇ ಕಾರುಬಾರು
ಮೊದಲೆಲ್ಲ ಮೆರೂನ್‌, ಪಿಂಕ್‌, ಹಸಿರು ಗಾಢ ಬಣ್ಣದ ಸೀರೆಗಳನ್ನೇ ಮದುವೆಗೆ ತೊಡುತ್ತಿದ್ದರು. ಆದರೆ ಈಗ ಅಭಿರುಚಿ ಬದಲಾಗುತ್ತಿದೆ. ಇದೀಗ ತಿಳಿ ಬಣ್ಣದ ಸೀರೆಗಳಿಗೆ ಬೇಡಿಕೆ. ಗಾಢ ಬಣ್ಣದ ಅಂಚುಗಳಿರಬೇಕು ಅದಕ್ಕೆ. ತಿಳಿಗೆಂಪು, ಆಕಾಶ ನೀಲಿ, ಮೆಜೆಂಟಾ, ಕನಕಾಂಬರ ಬಣ್ಣಗಳ ಸೀರೆಗಳು ಮೆರವಣಿಗೆಗೆ ಇಳಿದಿವೆ.

ಆರಕ್ಷತೆಯಲ್ಲಿ ಲೆಹೆಂಗಾ ಗೌನ್‌ಗಳದ್ದೇ ಸದ್ದು
ಇತ್ತೀಚಿನ ದಿನಗಳಲ್ಲಿ ಮದುವೆಯ ಆರತಕ್ಷತೆಯ ಸಮಾರಂಭಕ್ಕೆ ಸೀರೆಯ ಬದಲು ಲಾಂಗ್‌ ಗೌನ್‌ , ಲೆಹೆಂಗಾ ಹಾಗೂ ಆಫ್ಸ್ಯಾರಿಗಳನ್ನು ಧರಿಸುವ ಪರಿಪಾಠ ಹೆಚ್ಚುತ್ತಿದೆ. ಅದರಲ್ಲೂ ಧಾರೆ ಸೀರೆಗಳಿಗಿಂತ ಹೆಚ್ಚು ಮುತುವರ್ಜಿಯನ್ನು ಆರತಕ್ಷತೆ ದಿರಿಸುಗಳಿಗೆ ನೀಡಲಾಗುತ್ತಿದೆ. ಹೆಚ್ಚಾಗಿ ಇದನ್ನು ಸಿದ್ಧಪಡಿಸಲು ವಸ್ತ್ರವಿನ್ಯಾಸಕಾರರ ಮೊರೆಹೋಗುತ್ತಿದ್ದಾರೆ. ಇನ್ನೂ ನೀಲಿ ಬಣ್ಣದ ಎಲೆಕ್ಟ್ರಿಕ್‌ ಬ್ಲೂ ಗೌನ್‌, ಐವರಿ ಅಥವಾ ಆಫ್ ವೈಟ್‌ ಸವ್ಯಸಾಚಿ ಲೆಹೆಂಗಾ, ಕ್ಲಾಸಿಕ್‌ ವೈಟ್‌ ಗೋಲ್ಡನ್‌ ಗೌನ್‌, ಮೆರೂನ್‌ ಲೆಹೆಂಗಾಗಳು ತುಂಬಾ ಟ್ರೆಂಡಿಯಾಗಿವೆ.

Advertisement

ಆಭರಣಗಳ ಆಯ್ಕೆ
ಬಂಗಾರ, ಪಚ್ಚೆ, ಹಸಿರು ರತ್ನದ ಆಭರಣಗಳು ವಧುವಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ನಿಮ್ಮ ಮದುವೆಯ ಉಡುಪು ಕೆಂಪು ಬಣ್ಣ¨ªಾಗಿದ್ದರೆ ಈ ಆಭರಣಗಳು ಅದಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತವೆ. ರಿಸೆಪ್ಷನ್‌ನ ಸುಂದರ ಸಂಜೆಗಾಗಿ ಮದುಮಗಳಿಗೆ ವೈಟ್‌ ಗೋಲ್ಡ… ಆಭರಣಗಳಿದ್ದರೆ ಚೆನ್ನ. ಸುತ್ತ ಮುತ್ತ ವಜ್ರ, ಮಧ್ಯದಲ್ಲಿ ದೊಡ್ಡದೊಂದು ಪಚ್ಚೆ ಇರುವ ಹಾರ ಆ ಸಮಾರಂಭಕ್ಕೆ ಹೇಳಿ ಮಾಡಿಸಿದಂತಿರುತ್ತದೆ. ಕಾಕ್ಟೆ„ಲ್‌ ರಿಂಗ್‌ಗಳನ್ನು ಕೂಡ ಧರಿಸಬಹುದು. ಆಕಾಶ ನೀಲಿ ಬಣ್ಣದ ದಿರಿಸಿಗೆ ಹಸಿರು ಬಣ್ಣದ ಆಭರಣಗಳೇ ಸರಿ. ನೀಲಿ ಬಣ್ಣದ ರತ್ನಗಳಿರುವ ಹಸಿರು ಆಭರಣ ಕೂಡ ಚೆನ್ನ. ನೀಲಿ ಹಾಗೂ ಹಸಿರು ಬಣ್ಣದ ಕಾಂಬಿನೇಷನ್‌ ಸಹಜವಾಗಿಯೇ ಎಲ್ಲರನ್ನೂ ಆಕರ್ಷಿಸುತ್ತದೆ. ಹಸಿರು ಬಣ್ಣದ ರತ್ನಗಳಿರುವ ಆಭರಣ, ಕೆಂಪು, ಗುಲಾಬಿ, ಹಳದಿ ಮತ್ತು ನೀಲಿ ಬಣ್ಣದ ಸೀರೆ ಅಥವಾ ಇತರ ಮದುವೆ ದಿರಿಸಿನ ಮೇಲೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ನೀಲಿ ರತ್ನಾಭರಣ ಕಪ್ಪು ಬಣ್ಣದ ಉಡುಪಿಗೂ ಚೆನ್ನಾಗಿ ಕಾಣುತ್ತದೆ. ಆಭರಣಕ್ಕೆ ತಕ್ಕಂತಹ ಉಡುಪುಗಳನ್ನೇ ಆಯ್ಕೆ ಮಾಡಿಕೊಳ್ಳಿ. ಆಗ ಮಾತ್ರ ಮದುವೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಬಲ್ಲದು.

ಸರಳ ಸೀರೆಗೆ
ಅದ್ದೂರಿ ರವಿಕೆ
ಫ್ಯಾಷನ್‌ ಲೋಕದಲ್ಲಿ ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸುವುದು ಬ್ಲೌಸ್‌ನ ಲುಕ್‌ ಹಾಗೂ ಡಿಸೈನ್‌ಗಳು. ಅದರಲ್ಲಂತೂ ಇತ್ತೀಚೆಗೆ ಕುಪ್ಪಸಗಳ ವಿನ್ಯಾಸದಲ್ಲಿ ವಿಭಿನ್ನ ರೀತಿಯ ಟ್ರೆಂಡಿಗ್‌ ಶುರುವಾಗಿದೆ. ಹಾಗಾಗಿ ಉಡಲು ಆರಾಮ ಎನ್ನಿಸುವ ವಿಭಿನ್ನ ಸೀರೆಯನ್ನು ಖರೀದಿಸುವ ಮದುಮಗಳು ಅದಕ್ಕೆ ಅದ್ದೂರಿಯ ರವಿಕೆ ವಿನ್ಯಾಸ ಮಾಡಿಸುತ್ತಿದ್ದಾಳೆ. ಇದು ಮದುಮಗಳ ಅಂದವನ್ನು ಹೆಚ್ಚಿಸುತ್ತಿದೆ. ಕುಂದನ್‌ಗಳ ಸಹಾಯದಿಂದ ನವಿಲು, ದೇವಾಲಯದ ಗೋಪುರ ಚಿತ್ರಣಗಳನ್ನು ಮೂಡಿಸಲಾಗುತ್ತಿದೆ. ಇಂತಹ ವಿಭಿನ್ನ ಕುಸುರಿಯ ಕಲೆಯಿಂದ ಕೇವಲ ವಸ್ತ್ರಗಳು ಮಾತ್ರ ಆಕರ್ಷಕವಾಗಿ ಕಾಣುವುದಲ್ಲದೇ ಕಣ್ಮಣಿಗಳ ಅಂದವನ್ನು ಇಮ್ಮಡಿಗೊಳಿಸುತ್ತಿದೆ.

ದೊಡ್ಡ ಮೂಗುತಿ ಮೂಗು ಚುಚ್ಚದೆ ತೊಡಬಹುದಾದ ವೆರೈಟಿ ಮೂಗುತಿಗಳು ಇಂದು ಮಾನಿನಿಯರ ಟ್ರಡಿಷನಲ್‌ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿವೆ. ಬ್ರಾಂಡೆಡ್‌ ಆಭರಣ ಮಾರಾಟಗಾರರು ನಾನಾ ಶೈಲಿಯ ಮೂಗುತಿಗಳನ್ನು ಪರಿಚಯಿಸಿದ್ದಾರೆ. ಅಂತಹ ನಾನಾ ವಿನ್ಯಾಸದ ಮೂಗುತಿ ಪೈಕಿ ದೊಡ್ಡ ರಿಂಗ್‌ ವಿನ್ಯಾಸವಿರುವ ಮೂಗುತಿ ಅಗ್ರ ಸ್ಥಾನ ಪಡೆದುಕೊಂಡಿದ್ದು, ಮದುವೆ ಮನೆಗಳಲ್ಲಿ ಇವುಗಳ ದರ್ಬಾರು ಜೋರಾಗಿಯೇ ನಡೆಯುತ್ತಿದೆ. ದೊಡ್ಡ ಗೋಲಾಕರ ತಟ್ಟೆಯಂತಹ ಈ ರಿಂಗ್‌ಗಳಲ್ಲಿ ಹರಳು ಮತ್ತು ಮುತ್ತುಗಳನ್ನು ಕಾಣಬಹುದಾಗಿದ್ದು, ಸಾಂಪ್ರದಾಯಿಕ ಹರಳಿನ ಮೂಗುತಿ ಜತೆಗೆ ಮಿರರ್‌ ವರ್ಕ್‌, ಎನಾಮಲ್‌ ಮತ್ತು ತಂತಿಯ ವಿನ್ಯಾಸಗಳ ದೊಡ್ಡ ದೊಡ್ಡ ರಿಂಗಗಳು ದೊರೆಯುತ್ತಿವೆ.

ಅರಿಶಿನ ಶಾಸ್ತ್ರಕ್ಕೂ
ಬಂತು ತರಹೇವಾರಿ ವಸ್ತ್ರ
ಅರಿಶಿನ ಶಾಸ್ತ್ರಕ್ಕೆಂದೇ ಹಳದಿ ಬಣ್ಣದ ತರಹೇವಾರಿ ವಸ್ತ್ರಗಳು ಮಾರುಕಟ್ಟೆಗೆ ಬಂದಿದ್ದು, ಹೆಚ್ಚಿನವರು ಹಳದಿ ಬಣ್ಣದ ಕ್ರಾಪ್‌ ಟಾಪ್‌ ಮತ್ತು ಹಳದಿ ಸಿಲ್ಕ್ ಸೀರೆಗಳನ್ನು ತೊಡುತ್ತಿದ್ದಾರೆ. ಜತೆಗೆ ಇದಕ್ಕೆ ಕೃತಕ ಹೂಗಳಿಂದ ತಯಾರಿಸಿದ ನೆತ್ತಿ ಬೊಟ್ಟು, ಕೈಬಳೆ, ಸೊಂಟ ಪಟ್ಟಿ, ಕುತ್ತಿಗೆ ಹಾರಗಳನ್ನು ಧರಿಸುತ್ತಿದ್ದು, ಮದುಮಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ರಾಯಲ್‌ ಲುಕ್‌ ನೀಡುವ ಮಾತಾಪಟ್ಟಿ
ಮದುಮಗಳಿಗೆ ರಾಣಿಯ ಗಾಂಭೀರ್ಯತೆ ಕೊಡುವ ಮಾತಾಪಟ್ಟಿಗೆ (ಬೈತಲೆ ಬೊಟ್ಟು )ಗೆ ತುಸು ಬೇಡಿಕೆ ಹೆಚ್ಚು. ಮಾತಾಪಟ್ಟಿ ವಿನ್ಯಾಸಕ್ಕೆ ವಧುಗಳು ಮಾತ್ರವಲ್ಲದೇ ಬಾಲಿವುಡ್‌ ಸೆಲೆಬ್ರಿಟಿಗಳು ಕೂಡ ಮಾರುಹೋಗಿದ್ದಾರೆ. ಹೆವಿ ಮತ್ತು ಲೈಟ್‌ವೇಟ್‌, ಒಂದು ಮತ್ತು ಬಹು ಪದರದ ಹಲವು ವಿನ್ಯಾಸದ ಸುಂದರ ಮಾತಾಪಟ್ಟಿಗಳು ಲಭ್ಯವಿವೆ. ಸಿಂಪ್ಲಿಸಿಟಿ ವಿತ್‌ ಕುಂದನ್‌ ಸ್ಟ್ರಿಂಗÕ…, ಗೋಲ್ಡ್‌ ಮಾತಾಪಟ್ಟಿ ವಿತ್‌ ಗ್ರೀನ್‌, ರೆಡ್‌ ಅಥವಾ ಮಲ್ಟಿ ಕಲರ್‌ ಬಾರ್ಡರ್‌ ಇನ್ನಿತರ ವಿನ್ಯಾಸದ ಮತಾಪಟ್ಟಿಗಳಿಗೆ ಬೇಡಿಕೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next