Advertisement
ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಪೀಠಾರೋಹಣಗೈಯಲಿರುವ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಯವರಿಗೆ ಶರವು ಶ್ರೀ ಮಹಾ ಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿ ರವಿವಾರ ಆಯೋಜಿ ಸಿದ್ದ ಪೌರ ಸಮ್ಮಾನ ಸ್ವೀಕರಿಸಿ ಅಶೀ ರ್ವಚನ ನೀಡಿದ ಅವರು ಪರಿ ಶುದ್ಧ ಮನಸ್ಸು ಮತ್ತು ಭಕ್ತಿಗೆ ಭಗವಂತನ ಸ್ಪಂದನೆ ಸದಾ ಇರುತ್ತದೆ. ಎಲ್ಲರೂ ಪ್ರೀತಿ ಯಿಂದ ಹಾಗೂ ಲೋಕಕಲ್ಯಾಣದ ನಿರೀಕ್ಷೆ ತುಂಬಿರುವ ಸಮ್ಮಾನ ನೀಡಿ ದ್ದೀರಿ, ಅದರಿಂದಾಗಿ ನನಗೆ ಭರವಸೆ ಮೂಡಿದೆ. ಒಬ್ಬೊಬ್ಬನಿಗೆ ವ್ಯಕ್ತಿಗತವಾಗಿ ಬರುವ ಆಪತ್ತು ತೊಲಗಿಸುವುದು ಸುಲಭ, ಆದರೆ ಇದು ಲೋಕಕ್ಕೆ ತಗಲಿರುವ ಕಂಟಕ, ಇದನ್ನು ತೊಲಗಿಸುವುದು ಸುಲಭ ವಲ್ಲ. ಆದರೆ ಪರಮಾತ್ಮನ ಏಕಾಂತ ಭಕ್ತರೆನಿಸಿ ಕೊಂಡ ಮಧ್ವರು, ವಾದಿರಾಜರಿಗೆ ಅದು ಸಾಧ್ಯ. ನಾನು ಶುದ್ಧ ಮನಸ್ಸಿನಿಂದ ಇದನ್ನು ಅವರಿಗೆ ಅರ್ಪಿಸುತ್ತೇನೆ, ಅದು ಅವರ ಚಿತ್ತಕ್ಕೆ ಬರಲಿ, ಆ ಮೂಲಕ ಎಲ್ಲರ ಇಷ್ಟಾರ್ಥ ಸಿದ್ಧಿಯಾಗಲಿ ಎಂದರು.
Related Articles
Advertisement
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ ಸ್ವಾಮೀಜಿಯವರ ಅನುಗ್ರಹ, ಅಶೀರ್ವಾದ ಸಮಾಜಕ್ಕೆ ಸದಾ ದೊರೆಯಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಪರ್ಯಾಯ ಸ್ವಾಮೀಜಿಯವರಿಗೆ ಪೌರ ಸಮ್ಮಾನ ಮಾಡುತ್ತಿರುವುದು ನಮ್ಮ ಪಾಲಿಗೆ ಸೌಭಾಗ್ಯದ ಸಂದರ್ಭವಾಗಿದೆ ಎಂದರು. ಶ್ರೀ ಕ್ಷೇತ್ರದ ಶರವು ಶಿಲೆಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸಿŒ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಸಪಾ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶ್ರೀ ಕ್ಷೇತ್ರ ಮಂಗಳಾದೇವಿಯ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಉಪಮೇಯರ್ ಸುಮಂಗಲ ರಾವ್, ಕಾರ್ಪೊರೇಟರ್ ಪೂರ್ಣಿಮಾ, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಸುಧಾಕರ ರಾವ್ ಪೇಜಾವರ ಮತ್ತಿತರರು ಉಪಸ್ಥಿತರಿದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಸ್ತಾವನೆಗೈದು ಸ್ವಾಗತಿಸಿದರು. ದಯಾ ನಂದ ಕಟೀಲು ನಿರೂಪಿಸಿದರು.