Advertisement
ಈ ಊರಲ್ಲಿ ಪಾಂಡವರಿಲ್ಲ, ಕೌರವರಿಲ್ಲ ಶಕುನಿಯಂತೂ ಇಲ್ವೇ ಇಲ್ಲ. ಆದರೂ ಇಲ್ಲಿ ಪಗಡೆ ಮಕ್ಕಳಾಟದಷ್ಟೇ ಸಹಜವಾಗಿ ಆಚರಣೆಯಲ್ಲಿದೆ. ಹಾಗಂತ ಇಲ್ಲಿ ಆಡುವುದು ಜೂಜು ಕೂಡ ಅಲ್ಲ, ಈ ಊರಿನವರಲ್ಲಿ ಪಗಡೆಯಾಟದ ಸ್ಪರ್ಧೆ ಪ್ರತಿ ವರ್ಷವೂ ನಡೆಯುತ್ತದೆ. ಗೆದ್ದವರಿಗೆ ಬಹುಮಾನ ಇದೆ, ಜೊತೆಗೆ ಪುರಾತನ ಕ್ರೀಡೆಯನ್ನು ಉಳಿಸುವ ಕಳಕಳಿಯೂ ಇದೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಬನ್ನಿಕಟ್ಟಿಯಲ್ಲಿ ಪ್ರತಿ ದಸರಾ ದಿಂದ ಪ್ರಾರಂಭವಾಗಿ, ಗೌರಿ ಹುಣ್ಣಿಮೆಯ ತನಕ ಪಗಡೆಯಾಡುತ್ತಾರೆ.
Related Articles
Advertisement
ಇಲ್ಲಿನ ಪಗಡೆ ತಜ್ಞರಲ್ಲೊಬ್ಬರಾದ ಪ್ರಕಾಶ ಮುರುಗೋಡು ಹೇಳುತ್ತಾರೆ; “ಈ ಆಟಾನಾ ನಾವು ಚಿಕ್ಕವರಿದ್ದಾಗ ಅಜ್ಜ-ಅಪ್ಪನಿಂದ ಕಲಿತುಕೊಂಡ್ವಿ. ಆಗ ಇಲ್ಲಿ ಕೆಲವೇ ಜನರು ಮಾತ್ರ ಪಗಡೆಯಾಟ ಬಲ್ಲವರಿದ್ದರು. ಈಗ ನೂರರಿಂದ ನೂರೈವತ್ತು ಜನರು ಸರಾಗವಾಗಿ ಪಗಡೆ ಆಡುವುದರಲ್ಲಿ ನಿಸ್ಸೀಮರು. ಬಿಡುವಿದ್ದಾಗ ಈ ಆಟವನ್ನು ಕಲಿಯಲು ಆಸಕ್ತಿಯುಳ್ಳವರಿಗೆ ಆಟದ ರೂಪ ರೇಷಗಳನ್ನು ವಿವರಿಸಿ, ಅವರೂ ಆಡುವಂತೆ ರೂಪಿಸುತ್ತಿದ್ದೇವೆ. ಇಂಥ ಪುರಾತನ ಆಟ. ಇಂದಿನ ಯಾಂತ್ರೀಕೃತ ಬದುಕಿನಿಂದಾಗಿ ಹಾಳಾಗಿದೆ. ಈ ಹಿಂದೆ ಟಿ.ವಿ. ಇಲ್ಲದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಬರ್ತಿದ್ರು..
ಗ್ರಾಮೀಣ ಜನರಲ್ಲಿ ಕ್ರೀಡೆಯ ಬಗೆಗಿನ ಒಲವು ಟಿ.ವಿಯಿಂದ ಕಡಿಮೆಯಾಗ್ತಿದೆ ಎಂದು ವಿಷಾದ ವ್ಯಕ್ತ ಪಡಿಸುತ್ತಾರೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ ಈ ಕ್ರೀಡೆ. ಮುಂದಿನ ಪೀಳಿಗೆಯವರೂ ಈ ಆಟ ಆಡಲಿ ಎನ್ನುವ ಉದ್ದೇಶದಿಂದ ಇಲ್ಲಿನ ತ್ರ್ಯಂಭಕೇಶ್ವರ ದೇವಸ್ಥಾನ ಮಂಡಳಿ ಪ್ರತಿ ವರ್ಷ ಪಗಡೆ ಪಂದ್ಯಾವಳಿ ಏರ್ಪಡಿಸುತ್ತಾರೆ. ನೀವೂ ಆಡಬೇಕೆ ? ಹಾಗಾದರೆ ಬನ್ನಿಕಟ್ಟೆಗೆ ಬಂದು ಬಿಡಿ…
* ಪ್ರವೀಣರಾಜು ಸೊನ್ನದ