Advertisement

UV Fusion: ಗಿಡಮೂಲಿಕೆಗಳ ಗುಣ ಮರೆಯದಿರೋಣ

12:40 PM Sep 13, 2024 | Team Udayavani |

ನಮ್ಮ ಸುತ್ತ ಮುತ್ತ ನಾವು ಹಲವಾರು ರೀತಿಯ ಔಷಧಿಯ ಸಸ್ಯಗಳನ್ನು ಕಾಣುತ್ತೇವೆ. ಅಂತಹ ಸಸ್ಯಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ಎಕ್ಕದ ಗಿಡವು ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿದೆ. ಇದರ ಎಲೆ, ಬೇರು, ಹೂವು ಅದ್ಭುತವಾದ ಔಷಧಿಯ ಗುಣವನ್ನು ಹೊಂದಿದೆ. ಇದರಲ್ಲಿ ಎರಡು ರೀತಿಯ ವಿಧಗಳನ್ನು ಕಾಣಬಹುದು.

Advertisement

ಒಂದು ಬಿಳಿ ಎಕ್ಕದ ಗಿಡ ಹಾಗೂ ನೀಲಿ ಬಣ್ಣದ ಎಕ್ಕದ ಗಿಡ. ಎಕ್ಕದ ಗಿಡ, ಎಕ್ಕೆ ಗಿಡ, ಬಿಳಿ ಎಕ್ಕ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಗಿಡವು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯವಾಗಿ ನಾವು ಕಾಣಬಹುದು. ಬಿಳಿ ಎಕ್ಕ ಹಲವಾರು ರೀತಿಯ ಅರೋಗ್ಯದ ಗುಣಗಳನ್ನು ಹೊಂದಿದೆ. ಬಿಳಿ ಎಕ್ಕದ ಗಿಡ, ಅದರ ಹೂವು ಮತ್ತು ಹೂವಿನ ಹಾರಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಧಾರ್ಮಿಕವಾಗಿ ಇದನ್ನು ಗಣಪತಿ ಹಾಗೂ ಆಂಜನೇಯ ದೇವರಿಗೆ ಒಂದು ಅಥವಾ ಎರಡು ಹೂವು ಆದರೂ ಇಡುವುದು ಆಚಾರ. ಅದೇ ರೀತಿ ಆರೋಗ್ಯದ ವಿಚಾರಕ್ಕೆ ಬಂದಾಗ ಎಕ್ಕದ ಗಿಡ ಶ್ರೀಮಂತವಾಗಿದೆ ಎಕ್ಕದ ಗಿಡದ ಎಲೆಯು ಡಯಬಿಟಿಸ್‌ ಅನ್ನು ಕಡಿಮೆ ಮಾಡುತ್ತದೆ.

ಇದರ ಎಲೆಯನ್ನು ಉಲ್ಟಾ ಮಾಡಿ ಪಾದದ ಮೇಲಿಟ್ಟು ಅದರ ಮೇಲೆ ಸಾಕ್ಸ್‌ ಹಾಕಿ ಬೆಳಗ್ಗಿನಿಂದ ಸಂಜೆಯ ವರೆಗೂ ಇಟ್ಟು ಅನಂತರ ಅದನ್ನ ತೆಗೆದಾಗ ಅದು ಮನುಷ್ಯನ ದೇಹದಲ್ಲಿರುವ ಸಕ್ಕರೆ ಪ್ರಮಾಣ ವನ್ನು ನಿಯಂತ್ರಿಸುವುದಕ್ಕೆ ಸಹಕರಿಯಾಗುತ್ತದೆ.

ಹೀಗೆ 3-4 ತಿಂಗಳು ಮಾಡಿದರೆ ಡಯಾಬಿಟೀಸ್‌ ನಿಯಂತ್ರಣಕ್ಕೆ ಬರುತ್ತದೆ ಹಾಗೂ ಇದರ ಬೇರಿನ ರಸವನ್ನು ವಿಷ ಜಂತುಗಳು ಕಚ್ಚಿದಾಗ ಅರಿಶಿನ ದೊಂದಿಗೆ ಸ್ವಲ್ಪ ನೀರನ್ನು ಸೇರಿಸಿ ಹಚ್ಚಿದಾಗ ವಿಷದ ಪ್ರಮಾಣ ಕಡಿಮೆಯಾಗುತ್ತದೆ. ಮಂಡಿನೋವು, ಕಾಲುನೋವು ಇರುವವರು ಈ ಎಕ್ಕದ ಗಿಡದ ಎಲೆಯನ್ನು ಕೆಂಡದ ಮೇಲೆ ಸುಟ್ಟು ಅದನ್ನು ನೋವಿರುವ ಜಾಗಕ್ಕೆ ಕಟ್ಟಿದರೆ ಶೀಘ್ರವಾಗಿ ನೋವು ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೆ ಈ ಗಿಡ ಇರುವ ಜಾಗದಲ್ಲಿ ನೀರು ಇರುತ್ತದೆ ಎಂಬುವುದು ಕೂಡ ನಿಜ. ಹೀಗೆ ಎಲ್ಲ ತರದಲ್ಲೂ ಉಪಯೋಗಕ್ಕೆ ಬರುವ ಈ ಎಕ್ಕೆಯ ಗಿಡವು ಎಲ್ಲರ ಮನೆಯಲ್ಲಿ ಬೆಳೆಸುವುದು ಅಗತ್ಯ. ಹಲವಾರು ಗಿಡಮೂಲಿಕೆಗಳು ನಮಗೆ ಪ್ರಕೃತಿದತ್ತವಾಗಿ ದೊರಕ್ಕುತ್ತದೆ. ಎಕ್ಕ ಮಾತ್ರವಲ್ಲದೆ ಎಲ್ಲಾ ಗಿಡಮೂಲಿಕೆ ಗಳು ತನ್ನದೇ ಆದ ಔಷಧಿಯ ಗುಣ ಹೊಂದಿದ್ದು ಅವೆಲ್ಲದರ ಮಹತ್ವವನ್ನು ಅರಿಯಬೇಕು.

Advertisement

-ದಿವ್ಯಾ

ಎಂ. ಪಿ. ಎಂ ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next