ತಾಳಿಕೋಟೆ: ಜೀವನದಲ್ಲಿ ಯಾವುದ ಕ್ಕೂ ಚಿಂತಿಸದೇ ಇದ್ದರೂ ಕಳೆದ ಹೋದ ಹಣಕ್ಕಾಗಿ ಚಿಂತಿಸಬೇಕಾಗುತ್ತದೆ ಎಂದು ಸ್ಥಳೀಯ ಕೈಲಾಸ ಪೇಟೆಯ ಬಸವಪ್ರಭು ದೇವರು ನುಡಿದರು.
ಸ್ಥಳೀಯ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ.ದ 14ನೇ ವಾರ್ಷಿಕ ಸಭೆ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಂಪತ್ತನ್ನು ಸರಿಯಾಗಿ ಬಳಕೆ ಮಾಡಿಕೊಂಡು ಸುಖವಾಗಿ ಬದುಕಬೇಕೆಂದು ಶರಣರು ತಿಳಿಸಿದ್ದಾರೆ ಎಂದರು.
ಖಾಸ್ಗೆತೇಶ್ವರ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದ ಅಧ್ಯಕ್ಷರಾದ ವಿ.ಸಿ. ಹಿರೇಮಠ (ಹಂಪಿಮುತ್ಯಾ) ಮಾತನಾಡಿ, ಸಹಕಾರಿ ತತ್ವದಿಂದ ವ್ಯಾಪಾರ ವ್ಯವಹಾರ, ಸಮಾಜ ಬೆಳೆಯಲು ಅನುಕೂಲವಾಗಿದೆ ಎಂದರು.
ಉಪಾಧ್ಯಕ್ಷ ಎಂ.ಎಸ್. ಸರಶೆಟ್ಟಿ ವರದಿ ವಾಚಿಸಿದರು. ಎಸ್ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಮಣೂರ, ರಕ್ಷಿತಾ ಶೆಟ್ಟಿ, ಅನೂಪ ಜಗತಾಪ ಅವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
ಜಿ.ಎಸ್. ಕಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುರುಘೇಶ ವಿರಕ್ತಮಠ, ಐ.ಆರ್. ಜಾಲವಾದಿ, ಎಚ್. ಬಿ.ಬಾಗೇವಾಡಿ, ಎಸ್.ವಿ.ಸರೂರ, ಬಿ.ಎಸ್.ಪಾಟೀಲ (ಯಾಳಗಿ), ಬಿ.ಎಸ್.ಕಿಣಗಿ, ಎ.ಐ.ಜಾಲವಾದಿ, ಐ.ಸಿ.ಸಜ್ಜನ, ಸಿ.ಬಿ.ರೂಡಗಿ, ಸುಭಾಷ್ ಹೂಗಾರ, ಎಂ.ಜಿ.ಯರನಾಳ, ಎಸ್.ಎಸ್. ಸುರಪುರ, ಮುತ್ತುಗೌಡ ಪಾಟೀಲ ಇದ್ದರು. ಸಹನಾ ಯಡ್ರಾಮಿ, ಸುಷ್ಮಾ ಬಡಿಗೇರ ಪ್ರಾರ್ಥಿಸಿದರು. ಮಹಾಂತೇಶ ಮುರಾಳ ವಚನ ಗಾಯನ ಹಾಡಿದರು. ಕಾಶೀನಾಥ ಮುರಾಳ ವಂದಿಸಿದರು.