Advertisement

37 ಶಾಸಕರನ್ನು ಇಟ್ಟುಕೊಂಡು ಹೇಗೆ ಸಾಲಮನ್ನಾ ಮಾಡಲಿ: ದೇವೇಗೌಡ  

10:52 AM May 28, 2018 | Team Udayavani |

ಬೆಂಗಳೂರು : ನಾವು 37 ಶಾಸಕರನ್ನು ಇಟ್ಟುಕೊಂಡು ಸಾಲಮನ್ನಾ ಮಾಡುವುದಾದರೂ ಹೇಗೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಬೇಸರದ ಮಾತುಗಳನ್ನು ಆಡಿದ್ದಾರೆ. ಕಾಂಗ್ರೆಸ್ ಮುಲಾಜಿನಲ್ಲಿದೆನೆಂದು ಕುಮಾರಸ್ವಾಮಿ ಹೇಳಿಕೆ ನೀಡಿದ ವಿಚಾರವಾಗಿ ಮಾತನಾಡಿದ ದೇವೇಗೌಡರು ಮುಖ್ಯಮಂತ್ರಿ ಕುಮಾರಸ್ವಾಮಿ ಸನ್ನಿವೇಶದ ಶಿಶು, ಹೆಚ್ಡಿಕೆ ಹೇಳುತ್ತಿರುವುದು ನಿಜ ನನಗೂ ಈ ವಿಚಾರವಾಗಿ ನೋವಿದೆ ರಾಜ್ಯದ ಆರೂವರೆ ಕೋಟಿ ಜನ ಹೆಚ್ಡಿಕೆ ಗೆ ಬೆಂಬಲ ನೀಡಿಲ್ಲ ಕೇವಲ 37 ಶಾಸಕರನ್ನು ಇಟ್ಟುಕೊಂಡು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.  
    
ಮುಖ್ಯಮಂತ್ರಿ ಪದವಿಯನ್ನು ಕಾಂಗ್ರೆಸ್ ಪಡೆದುಕೊಳ್ಳಲಿ ಎಂದು ನಾನು ಹೇಳಿದ್ದೆ ಆದರೆ ಕಾಂಗ್ರೆಸ್ ನವರು ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಪದವಿಯನ್ನು ಪಡೆಯಬೇಕು ಎಂದು ಹೇಳಿದ್ದಾರೆ. ಹಣಕಾಸು ಇಲಾಖೆಯನ್ನು ಕಾಂಗ್ರೆಸ್ ತನಗೆ ಬೇಕೆಂದು ಕೇಳುತ್ತಿದೆ. 

Advertisement

ಒಟ್ಟಾರೆಯಾಗಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರ ಮೈತ್ರಿಯಲ್ಲಿ ನಡೆಯುತ್ತಿಲ್ಲ ಎಂಬ ಆತಂಕದ ನುಡಿಯನ್ನು ದೇವೇಗೌಡರು ನುಡಿದ್ದಿದ್ದಾರೆ.  ಪ್ರಣಾಳಿಕೆಯಲ್ಲಿನ ಭರವಸೆಯ ಚರ್ಚೆಗಳು ನಡೆಯುತ್ತಿದೆ, ರೈತರ ಸಾಲ ಮನ್ನಾ ಮಾಡಿಲ್ಲ ಅಂದರೆ ಕುಮಾರಸ್ವಾಮಿ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next