ಜೇವರ್ಗಿ: ಭವ್ಯ ಭಾರತದ ಭವಿಷ್ಯ ಕಟ್ಟಲು ಯುವಜನಾಂಗ ಗಡಿಕಾಯುವ ಈ ದೇಶದ ಸೈನಿಕರಂತೆ ಕೆಲಸ ಮಾಡಬೇಕಿದೆ ಎಂದು ಯುವ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪಟ್ಟಣದ ಸಜ್ಜನ ಕಲ್ಯಾಣ ಮಂಟಪದ ಆವರಣದಲ್ಲಿ ರವಿವಾರ ಸಂಜೆ ಯುವ ಬ್ರಿಗೇಡ್ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ರಾಷ್ಟ್ರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದು 20ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ದೇಶದ ಪ್ರಧಾನಿ ಪಾಕಿಸ್ತಾನದ ಬಾಲ ಕಟ್ ಮಾಡಿದ್ದಾರೆ. ಪಾಕ್ ಈ ದೇಶವನ್ನು ಎರಡು ಭಾಗಗಳಾಗಿ ವಿಂಗಡಣೆ ಮಾಡಲು ಹೊರಟರೆ ನಮ್ಮ ಪ್ರಧಾನಿ ಪಾಕಿಸ್ತಾನವನ್ನು ನಾಲ್ಕು ಭಾಗಗಳನ್ನಾಗಿ ಮಾಡಿದ್ದಾರೆ ಎಂದರು.
ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾದಲ್ಲಿ ಮಾತ್ರ ಭಾಗ್ಯಶಾಲಿ, ಸದೃಢಶಾಲಿ ಭಾರತದ ನಿರ್ಮಾಣ ಸಾಧ್ಯ. ಈ ಪುಣ್ಯ ಭೂಮಿಯಲ್ಲಿ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಶಕ್ತಿಯಾಗಬಲ್ಲ ಸಾಮರ್ಥ್ಯವಿದೆ ಎಂದು ಹೇಳಿದರು.
ಸೊನ್ನದ ಡಾ| ಶಿವಾನಂದ ಸ್ವಾಮೀಜಿ ಸಾನ್ನಿಧ್ಯ, ಯಡ್ರಾಮಿ ವಿರಕ್ತ ಮಠದ ಸಿದ್ಧಲಿಂಗ ದೇವರು ಸಮ್ಮುಖ ವಹಿಸಿದ್ದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮುಖಂಡರಾದ ರಮೇಶಬಾಬು ವಕೀಲ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಅನೀಲ ರಾಂಪೂರ, ಸುನೀಲ ಸಜ್ಜನ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈಶ್ವರ ಹಿಪ್ಪರಗಿ, ವಿಶ್ವಪಾಟೀಲ, ಧರ್ಮು ಚಿನ್ನಿ ರಾಠೊಡ, ಅಶೋಕ ಗುಡೂರ, ಸಾಯಬಣ್ಣ ದೊಡ್ಮನಿ, ವೀರೇಶ ಕಟ್ಟಿಸಂಗಾವಿ, ಎ.ಸಿ.ಹಾರಿವಾಳ, ಪ್ರಶಾಂತ ಮಾಗಣಗೇರಿ, ಸಂತೋಷ
ನವಲಗುಂದ, ಶಿವಪುತ್ರ ನೆಲ್ಲಗಿ, ಸಿದ್ದು ಚಿನಗುಡಿ, ಸುರೇಶ ನೇದಲಗಿ, ರೇವಣಸಿದ್ದ ಅಕ್ಕಿ, ಶ್ರೀಶೈಲಗೌಡ ಕರಕಿಹಳ್ಳಿ, ಸಿದ್ದು ಅಂಗಡಿ ಭಾಗವಹಿಸಿದ್ದರು.