Advertisement
ಇತಿಹಾಸ: ವಿಶ್ವ ಪ್ರಾಣಿಗಳ ದಿನವು “ಪ್ರಾಣಿಗಳ ಪೋಷಕ ಸಂತ’ ಎಂದೇ ಕರೆಯಲ್ಪಡುವ ಸೈಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿಯ ಹಬ್ಬದ ದಿನವಾಗಿದೆ. 1925ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಹೆನ್ರಿಕ್ ಜಿಮ್ಮರ್‌ಮ್ಯಾನ್ ಈ ಕಾರ್ಯಕ್ರಮ ಆಯೋಜಿಸಿದ್ದು 5,000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. 1929ರಲ್ಲಿ ಮೊದಲ ಬಾರಿಗೆ ಅ. 4ರಂದು ಜರ್ಮನಿ, ಆಸ್ಟ್ರಿಯಾ, ಸ್ವಿಟ್ಸರ್‌ಲ್ಯಾಂಡ್, ಜೊಕೋಸ್ಲೊವಾಕಿಯಾದಲ್ಲಿ ಈ ದಿನವನ್ನು ಆಚರಿಸಲಾಯಿತು. 2019ರಲ್ಲಿ ಮೊದಲ ಬಾರಿಗೆ ವಿಶ್ವದ 56 ದೇಶಗಳು ಈ ದಿನವನ್ನು ಆಚರಿಸಿದವು.
“ಅರಣ್ಯಗಳು ಮತ್ತು ಜೀವನೋಪಾಯ: ಜನರು ಮತ್ತು ಗ್ರಹದ ಉಳಿಸಿಕೊಳ್ಳುವುದು’ ಎನ್ನುವ ಸಂದೇಶದೊಂದಿಗೆ ಈ ಬಾರಿಯ ವಿಶ್ವ ಪ್ರಾಣಿಗಳ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಪ್ರಾಣಿಗಳ ಆರೈಕೆ, ರಕ್ಷಣೆ ಕೇವಲ ಒಂದು ದಿನಕ್ಕಾಗಿ ಅಲ್ಲ. ಜೀವಮಾನವಿಡೀ ಅವುಗಳ ಬಗ್ಗೆ ಜಾಗರೂಕರಾಗಿರುವುದು, ಅವುಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವ ಪ್ರತಿಜೆn ಮಾಡುವುದು. ಇದನ್ನೂ ಓದಿ:ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ
Related Articles
ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಭೂಮಿಯ ಮೇಲೆ ಸರಿಸುಮಾರು 8.7 ಮಿಲಿಯನ್ ಜಾತಿಗಳ ಜೀವಿಗಳಿವೆ. ಅದರಲ್ಲಿ ಸುಮಾರು 1- 2 ಮಿಲಿಯನ್ ಪ್ರಾಣಿಗಳಾಗಿವೆ. ಭೂ ಪ್ರದೇಶಗಳಲ್ಲಿರುವ ಶೇ. 86ರಷ್ಟು ಜಾತಿಯ ಪ್ರಾಣಿಗಳು ಹಾಗೂ ಎಲ್ಲ ಸಮುದ್ರ ಜಾತಿಗಳಲ್ಲಿ ಶೇ.91ರಷ್ಟನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಅಂದಾಜಿಸಲಾಗಿದೆ.
Advertisement
ಪ್ರಪಂಚದಲ್ಲಿಂದು 7.9 ಶತಕೋಟಿಗೂ ಹೆಚ್ಚು ಮಾನವರಿದ್ದಾರೆ. ಆದರೆ ಮನುಷ್ಯರಿಗಿಂತ ಹೆಚ್ಚು ಕೋಳಿಗಳಿವೆ. ಅದು 18 ಬಿಲಿಯನ್‌ಗಿಂತಲೂ ಹೆಚ್ಚು. ಜಾನುವಾರುಗಳ ಸಂಖ್ಯೆ 1.4 ಬಿಲಿಯನ್ ಹಾಗೂ ಕುರಿಗಳ ಸಂಖ್ಯೆ 1.1 ಬಿಲಿಯನ್ ಆಗಿವೆ. ಇನ್ನು ಕೀಟ ಪ್ರಪಂಚದಲ್ಲಿ ಸುಮಾರು 10,000 ಟ್ರಿಲಿಯನ್ ಇರುವೆಗಳು ಜೀವಂತವಾಗಿರುತ್ತವೆ ಎಂದು ವಿಜಾnನಿಗಳು ಅಂದಾಜಿಸಿದ್ದಾರೆ.
ಪ್ರಪಂಚದ ಶೇ.2.4ರಷ್ಟು ಭೂ ಪ್ರದೇಶವನ್ನು ಹೊಂದಿರುವ ಭಾರತದಲ್ಲಿ 91,000 ಜಾತಿಯ ಪ್ರಾಣಿಗಳಿದ್ದು ಅದು ಶೇ. 7-8ರಷ್ಟಾಗಿದೆ.
ಅಳಿವಿನಂಚಿನಲ್ಲಿರುವ ಪ್ರಮುಖ ಪ್ರಾಣಿಗಳು– ಚೀನದ ರಾಷ್ಟ್ರೀಯ ಸಂಪತ್ತು ಎಂದೇ ಪರಿಗಣಿಸಲಾಗಿರುವ ಪಾಂಡಾ ಚೀನದ ಪರ್ವತಗಳಲ್ಲಿ ಸಮಶೀತೋಷ್ಣ ಕಾಡುಗಳಲ್ಲಿ ವಾಸಿಸುತ್ತವೆ. ಬಿದಿರನ್ನು ತಿಂದು ಬದುಕುವ ಈ ಪ್ರಾಣಿಗಳು ಈಗ ಅಳಿವಿನಂಚಿನಲ್ಲಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸುಮಾರು 1,864ರಷ್ಟು ಪಾಂಡಾಗಳು ಮಾತ್ರ ಉಳಿದುಕೊಂಡಿವೆ. -ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಹುಲಿಯೂ ಒಂದಾಗಿದೆ. ಭಾರತ, ರಷ್ಯಾ, ನೇಪಾಲ, ಬಾಂಗ್ಲಾದೇಶ ಮತ್ತು ಭೂತಾನ್‌ನಲ್ಲಿ 2016ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಜಾಗತಿಕವಾಗಿ ಸುಮಾರು 3,890 ಹುಲಿಗಳಷ್ಟೇ ಉಳಿದುಕೊಂಡಿವೆ. - ದಂತ, ಮಾಂಸ, ಚರ್ಮಕ್ಕಾಗಿ ಆನೆಗಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. 13 ದೇಶಗಳಲ್ಲಿ ಏಷ್ಯನ್ ಆನೆಗಳ ಸಂಖ್ಯೆ ಸುಮಾರು 40- 50 ಸಾವಿರ ಮಾತ್ರ. - ಸಮುದ್ರ ನೀರು ನಾಯಿಗಳ ತುಪ್ಪಳಕ್ಕೆ ಹೆಚ್ಚು ಬೇಡಿಕೆ ಇರುವುದು ಅವುಗಳ ಅವನತಿಗೆ ಕಾರಣವಾಗಿದೆ. ಅಂದಾಜು 3 ಲಕ್ಷವಿದ್ದ ನೀರು ನಾಯಿಗಳು 1911ರ ವೇಳೆಗೆ ಉಳಿದದ್ದು 2,000 ಮಾತ್ರ. ಅನಂತರ ಅವುಗಳ ರಕ್ಷಣೆಗಾಗಿ ಕಾಯ್ದೆ ಜಾರಿಯಾಗಿತ್ತು. - ಚೀನ, ಮಂಗೋಲಿಯಾ, ಭಾರತ, ಕಿರ್ಗಿಸ್ಥಾನ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹಿಮ ಚಿರತೆ ಪ್ರಸ್ತುತ 6,500ಕ್ಕೂ ಕಡಿಮೆ ಇದೆ. - ಗೊರಿಲ್ಲಾಗಳಲ್ಲಿ ಪೂರ್ವ ಮತ್ತು ಪಶ್ಚಿಮ ಗೊರಿಲ್ಲಾಗಳೆಂದು ಎರಡು ವಿಧ. ಅದರಲ್ಲಿ ಪೂರ್ವ ತಗ್ಗು, ಪಶ್ಚಿಮ ತಗ್ಗು, ಪರ್ವತ ಎಂಬ ಮೂರು ಉಪಜಾತಿಗಳಿವೆ. ಕಾಡಿನಲ್ಲಿ ಪ್ರಸ್ತುತ ಉಳಿದಿರುವ ಗೊರಿಲ್ಲಾಗಳ ಸಂಖ್ಯೆ 2,20,000 ಮಾತ್ರ. – ಭಾರತದಲ್ಲಿರುವ ಪ್ರಾಣಿಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಮಕಾಕ್, ಕಾಶ್ಮೀರ ಕಣಿವೆಗಳಲ್ಲಿ ಕಂಡುಬರುವ ಸ್ಟಾಗ್, ನೀಲಗಿರಿ ಬೆಟ್ಟಗಳಲ್ಲಿ ಕಂಡುಬರುವ ತಹರ್, ಪಶ್ಚಿಮ ಘಟ್ಟಗಳಲ್ಲಿರುವ ನೇರಳೆ ಕಪ್ಪೆ, ಅಸ್ಸಾಂನಲ್ಲಿರುವ ಪಿಗ್ಮಿ ಹಾಗ್, ಮಲಬಾರ್ ಸಿವೆಟ್ ಸೇರಿದಂತೆ ಇನ್ನು ಹಲವು ಪ್ರಾಣಿಗಳು ಅಳಿವಿನಂಚಿನಲ್ಲಿವೆ.