Advertisement

ಸಹಬಾಳ್ವೆಯಿಂದ ಜೀವಿಸೋಣ: ಶಶಿಕಾಂತ್‌ ಸೆಂಥಿಲ್‌

12:39 PM Dec 17, 2017 | Team Udayavani |

ಮಂಗಳೂರು : ಸೈನಿಕರು ಮಾಡಿದ ತ್ಯಾಗಕ್ಕೆ ಪ್ರತಿಯಾಗಿ ದೇಶವಾಸಿಗಳಾದ ನಾವು ಪರಸ್ಪರ ಭಿನ್ನತೆ ಗಳನ್ನು ಮರೆತು ಬದುಕಬೇಕು. ಜಾತಿ-ಧರ್ಮಗಳ ಹೆಸರಿನಲ್ಲಿ ದ್ವೇಷ ಸಾಧಿಸದೆ ಸಹಬಾಳ್ವೆಯಿಂದ ಜೀವಿಸು ವುದನ್ನು ಕಲಿಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಹೇಳಿದರು.

Advertisement

ಭಾರತ-ಪಾಕ್‌ ನಡುವೆ 1971ರಲ್ಲಿ ನಡೆದ ಯುದ್ಧದಲ್ಲಿ ಭಾರತೀಯ ಯೋಧರು ಶೌರ್ಯ ಮೆರೆದು ಪಾಕ್‌ಗೆ ಸೋಲುಣಿಸಿದ್ದರ ನೆನಪಿನಲ್ಲಿ ಕದ್ರಿಯ ಯುದ್ಧ ಸ್ಮಾರಕದಲ್ಲಿ ಶನಿವಾರ ನಡೆದ “ವಿಜಯ ದಿವಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ  ಕೆಲವೇ ಮಂದಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರನ್ನು ದೂರವಿಟ್ಟು ಪರಸ್ಪರ ಸೌಹಾರ್ದದಿಂದ ಬದುಕಬೇಕು. ನಮ್ಮ ರಕ್ಷಣೆಗಾಗಿ ವೀರ ಯೋಧರು ಹಗಲಿರುಳು ದೇಶ ಕಾಯುವ ಕೆಲಸ ಮಾಡುತ್ತಿದ್ದಾರೆ. ಅವರ ತ್ಯಾಗ, ಶೌರ್ಯವನ್ನು ಗೌರವಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಮಂಗಳೂರು ನಗರ ಪೊಲೀಸ್‌ ಆಯುಕ್ತ ಟಿ. ಆರ್‌. ಸುರೇಶ್‌ಮಾತನಾಡಿ, ದೇಶದ ಸುರಕ್ಷತೆಗಾಗಿ ಸೈನಿಕರು ಬಲಿದಾನ ಮಾಡಿದ್ದಾರೆ. ಅವರ ಬಲಿದಾನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ, ಬ್ರಿಗೇಡಿಯರ್‌ ಐ.ಎನ್‌. ರೈ, ಲಯನ್ಸ್‌ ಉಪ ಗವರ್ನರ್‌ ದೇವದಾಸ್‌ ಭಂಡಾರಿ, ರೋಟರಿಯ ಕೃಷ್ಣ ಶೆಟ್ಟಿ ಶುಭ ಹಾರೈಸಿದರು.

ಸಂಘದ ಸಂಘಟನಾ ಸಮಿತಿ ಸಂಚಾಲಕ ಕರ್ನಲ್‌ ಎನ್‌.ಎಸ್‌. ಭಂಡಾರಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಎಸ್‌.ಎಂ. ಐರನ್‌ ವಂದಿಸಿದರು. ಸಂಘದ ಅಧ್ಯಕ್ಷ ವಿಕ್ರಮ್‌ ದತ್ತ ನಿರೂಪಿಸಿದರು. ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘ, ಲಯನ್ಸ್‌ ಹಾಗೂ ಶಾಸ್ತಾವು ಶ್ರೀ ಭೂತನಾಥೇಶ್ವರ ಟ್ರಸ್ಟ್‌ ವತಿಯಿಂದ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next