ಮಲ್ಪೆ: ದೇಶ ಲಾಕ್‌ಡೌನ್ ಆಗಿದ್ದರೂ ಕೋವಿಡ್-19ನಿವಾರಣೆಗೆ ವೈದ್ಯರು ದಾದಿಯರು ಆರೋಗ್ಯ ಸೇವಾ ಕರ್ತರು ಪೊಲೀಸರು ಸೇರಿದಂತೆ ನಮಗಾಗಿ ಹಗಲಿರುಳು ಶ್ರಮಿಸುತ್ತಿರುವಾಗ ನಾವು ಸಂಬಂಧವೇ ಇಲ್ಲದಂತೆ ಇರಬಾರದು.ನಮ್ಮಿಂದ ಸಮಾಜಕ್ಕೆ ಏನು ಮಾಡಲಾಗುತ್ತೋ ಅದನ್ನು ಮಾಡಬೇಕು.ಸಂಕಷ್ಟದಲ್ಲಿರುವವರಿಗೆ ಆಹಾರ ಧಾನ್ಯದಿಂದ ಹಿಡಿದು ಔಷಧ ಸಾಮಗ್ರಿಗಳನ್ನು ಸಣ್ಣ ಪ್ರಮಾಣದಲ್ಲಿ ಒದಗಿಸುವ ಕೆಲಸವನ್ನಾದರೂ ಮಾಡಬೇಕು. ಆಗ ಸಂಕಷ್ಟ ಕಾಲದಲ್ಲಿ ಕೈಜೋಡಿಸಿದಂತಾಗುತ್ತದೆ ಎಂದು ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಉದ್ಯಾವರ ಗ್ರಾ.ಪಂ.ವ್ಯಾಪ್ತಿಯ ಯಶಸ್ವಿ ಫಿಶ್‌ಮೀಲ್,ಕೇದಾರ್ ಹಾಗೂ ವಿವಿಧ ಪ್ರದೇಶಗಳ ಜನರಿಗೆ ಟ್ರಸ್ಟ್ ವತಿಯಿಂದ ಅಕ್ಕಿಯನ್ನು ವಿತರಿಸಿ ಮಾತನಾಡಿದರು.
ಕಾಪು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿ.ಪಂ. ಮಾಜಿ ಸದಸ್ಯೆ ನಯನ ಗಣೇಶ್, ಸಂಧ್ಯಾ ರಮೇಶ್, ಸಲಿಂ ಅಂಬಾಗಿಲು, ಕಾಪು ಯುವಮೋರ್ಚಾ ಅಧ್ಯಕ್ಷ ಸಚಿನ್ ಪಿತ್ರೋಡಿ, ಪಂಚಾಯತ್ ಸದಸ್ಯ ರಾದ ರಾಜೇಶ್ ಕುಂದರ್, ಗಿರೀಶ್ ಕುಮಾರ್, ಗಂಗಾಧರ್ ಕರ್ಕೇರ, ಶಾಂತ ರಾಜ್, ಚೇತನ್ ಕುಮಾರ್, ಉಮೇಶ್ ಕರ್ಕೇರ, ವಾರಿಜ ಜಯ ಕುಮಾರ್, ರಮೇಶ್ ಕೋಟ್ಯಾನ್, ರವಿ ಪಡುಕರೆ, ಪ್ರಜ್ವಲ್ ಕೋಟ್ಯಾನ್ ರಾಮರಾಜ್ ಕಿದಿಯೂರು, ರಾಜೀವ ಪೂಜಾರಿ, ಜಗದೀಶ್ ಶೆಟ್ಟಿ, ಗಿರೀಶ್ ಅಮೀನ್, ಸುಂದರ ಪೂಜಾರಿ, ನವೀನ್ ಕುಂದರ್, ವಿಷ್ಣು ಪೂಜಾರಿ, ಭರತ್ ಭೂಷಣ್, ಅಕ್ಷಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.