Advertisement
ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡುವುದು ಅಂದರೆ ಪರೋಕ್ಷವಾಗಿ ಷೇರಿನಲ್ಲಿ ಹಣ ಹೂಡುವುದು. ಹಾಗಾಗಿಯೇ ಷೇರು ಪೇಟೆಯ ಏರಿಳಿತಕ್ಕೆ ಮ್ಯೂಚುವಲ್ ಫಂಡ್ ಕೂಡ ಪ್ರತಿಸ್ಪಂದಿಸಲೇ ಬೇಕು. ಮ್ಯೂಚುವಲ್ ಫಂಡ್, ಹಣ ಹೂಡಿದ ಷೇರುಗಳ ಬೆಲೆಯಲ್ಲಿ ಇಳಿಕೆ ಆದಾಗ ಸಹಜವಾಗಿಯೇ ನಾವು ಹಣ ಹೂಡಿದ ಮ್ಯೂಚುವಲ್ ಫಂಡಿನ ಮೌಲ್ಯದಲ್ಲೂ ಇಳಿಕೆ ಆಗುತ್ತದೆ. ಮ್ಯೂಚುವಲ್ ಫಂಡ್‌ನ ಸೆಕ್ಟರ್‌ಫಂಡ್ ಅಂದರೆ ಒಂದು ವಲಯದ ಕಂಪನಿಗಳಲ್ಲಿ ಮಾತ್ರ ಹಣ ಹೂಡಿದಾಗ ಹಲವು ಸಂದರ್ಭಗಳಲ್ಲಿ ನಷ್ಟವೇ ಹೆಚ್ಚಾಗುತ್ತಿತ್ತು. ಉದಾಹರಣೆಗೆ ರಿಯಲ್ ಎಸ್ಟೇಟ್ ಕಂಪನಿಗಳ ಬೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಅಂತಹ ಏರಿಕೆ ಆಗಲಿಲ್ಲ. ಒಂದು ವೇಳೆ ಇನ್‌ಪ್ರಾಫಂಡ್ ನಲ್ಲಿ ಹಣ ಹೂಡಿದ್ದರೆ, ಅವರು ಹೂಡಿದ ಹಣ, ಬೆಳೆಯುವ ಬದಲು ಕರಗುವ ಸಾಧ್ಯತೆಯೂ ಇದೆ. ಹಾಗಾಗಿ ಯಾವುದಾದರೂ ಒಂದೇ ವಲಯದ ಮ್ಯೂಚುವಲ್ ಫಂಡ್‌ಗೆ ಹಾಕುವ ಬದಲು ಎಲ್ಲವೂ ಸೇರಿರುವ, ಒಳಗೊಂಡಿರುವ, ಯೋಜನೆಗಳಲ್ಲಿ ಹಣ ಹೂಡುವುದು ಕ್ಷೇಮ.
Related Articles
Advertisement
ಹೂಡಿಕೆದಾರರ ಅಗತ್ಯಕ್ಕೆ ಅನುಗುಣವಾಗಿ ಸಿಪ್‌ನಲ್ಲೂ ಹಲವಾರು ಯೋಜನೆಗಳಿವೆ, ಅನುಕೂಲತೆಗಳಿವೆ. ಸಣ್ಣ ಹೂಡಿಕೆದಾರರ ಅಗತ್ಯವನ್ನು ಮನಗಂಡು ಹಲವಾರು ರೀತಿಯಿಂದ ಹಣ ಹಿಂಪಡೆಯುವ ಅವಕಾಶವೂ ಇಲ್ಲಿದೆ. ಈಗಂತೂ ಸಿಪ್ ಬಗೆಗೆ ಎಲ್ಲೆಡೆಯೂ ಪ್ರಚಾರ ಮಾಡಲಾಗುತ್ತಿದೆ. ಇರುವುದರಲ್ಲಿ ಇದು ಹೆಚ್ಚು ಸುರಕ್ಷ ಅನ್ನಿಸುತ್ತಿದೆ. ಷೇರು ಪೇಟೆ ಇಳಿದಾಗ ನಾವು ಹಾಕಿದ ಅದೇ ಹಣಕ್ಕೆ ಜಾಸ್ತಿ ಯೂನಿಟ್ ಪಡೆಯುತ್ತೇವೆ. ಪೇಟೆ ಮೇಲಿರುವಾಗ ಅದೇ ಹಣಕ್ಕೆ ಕಡಿಮೆ ಯೂನಿಟ್ ಬರಬಹುದು. ಅಂದರೆ ಮಾರುಕಟ್ಟೆಯ ಅನಿಶ್ಚಿತತೆಯನ್ನು ಸರಿಯಾಗಿ ಎದುರಿಸುವುದಕ್ಕೆ ಇದು ಅತ್ಯಂತ ಸೂಕ್ತ ಮತ್ತು ಸರಳವಾದದ್ದು.
– ಸುಧಾಶರ್ಮ ಚವತ್ತಿ