Advertisement

ಮಹಿಳೆಯನ್ನು ಪುರುಷನಿಗೆ ಸಮನಾಗಿ ಬೆಳೆಸೋಣ: ಸೊರಕೆ

08:35 AM Aug 21, 2017 | Harsha Rao |

ಕಾಪು: ಮಹಿಳಾ ಶಕ್ತಿ ದೇಶದ ಶಕ್ತಿಯಾಗಿದ್ದು, ಮಹಿಳೆಯರ ಸರ್ವತೋಮುಖ ಬೆಳವಣಿಗೆಯಿಂದ ಮಾತ್ರ ಮಹಿಳಾ ಶಕ್ತಿ ದೇಶದ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡಿ ಅವರನ್ನು ಪುರುಷರಿಗೆ ಸಮಾನರನ್ನಾಗಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕಾಪು ಶಾಸಕ ವಿನಯಕುಮಾರ್‌ ಸೊರಕೆ ಹೇಳಿದರು.

Advertisement

ಶಿರ್ವದಲ್ಲಿ ರವಿವಾರ ಜರಗಿದ ಶಿರ್ವ ಮಹಿಳಾ ಮಂಡಲದ ಸುಸಜ್ಜಿತವಾದ ನೂತನ ಮಹಿಳಾ ಸೌಧ ಮತ್ತು ಕುತ್ಯಾರು ಕನ್ಯಾನ ಪ್ರೇಮಾ ಆರ್‌. ಶೆಟ್ಟಿ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

54 ವರ್ಷಗಳ ಇತಿಹಾಸ ಹೊಂದಿರುವ ಶಿರ್ವ ಮಹಿಳಾ ಮಂಡಲವು ಮಹಿಳೆಯರಿಗೆ ಆಶ್ರಯ ಮತ್ತು ರಕ್ಷಣೆ ನೀಡುವ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಮಾದರಿ ಮಹಿಳಾ ಮಂಡಲವಾಗಿ ಮೂಡಿ ಬರುತ್ತಿದೆ. ಮಹಿಳಾ ಮಂಡಲವು ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗಿ ಮಿಂಚುವಂತಾಗಲಿ ಎಂದು ಹಾರೈಸಿದರು.

ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಜಗದೀಶ ಅರಸ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೂತನ ರಂಗ ವೇದಿಕೆಯನ್ನು ದಾನಿ ಕುತ್ಯಾರು ಕನ್ಯಾನ ಪ್ರೇಮಾ ಆರ್‌. ಶೆಟ್ಟಿ ಉದ್ಘಾಟಿಸಿದರು.

ಆಗಮ ವಿದ್ವಾಂಸ / ಕಟ್ಟಡ ರಚನಾ ಸಮಿತಿ ಗೌರವ ಅಧ್ಯಕ್ಷ ವೇ| ಮೂ| ಕೇಂಜ ಶ್ರೀಧರ ತಂತ್ರಿ, ಶಿರ್ವ ಆರೋಗ್ಯ ಮಾತಾ ದೇವಾಲಯದ ಧರ್ಮಗುರು ವಂ| ಸ್ಟಾ Âನಿ ತಾವ್ರೊ, ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಧರ್ಮಗುರು ಜನಾಬ್‌ ಸಿರಾಜುದ್ದೀನ್‌ ಝೈನಿ ಶುಭ ಹಾರೈಸಿದರು.

Advertisement

ಅತಿಥಿಗಳಾಗಿದ್ದ ಅದಾನಿ-ಯುಪಿಸಿಎಲ್‌ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ, ಸಮಾಜ ಸೇವಕ ಗುರ್ಮೆ ಸುರೇಶ್‌ ಶೆಟ್ಟಿ, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ.ಪಂ. ಸದಸ್ಯ ವಿಲ್ಸನ್‌ ರೋಡ್ರಿಗಸ್‌, ತಾ.ಪಂ. ಸದಸ್ಯೆ ಗೀತಾ ವಾಗ್ಲೆ, ಶಿರ್ವ ಗ್ರಾ.ಪಂ. ಅಧ್ಯಕ್ಷೆ ವಾರಿಜಾ ಪೂಜಾರಿ¤, ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ| ವೈ. ಭಾಸ್ಕರ ಶೆಟ್ಟಿ, ಶಿರ್ವ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಸುಂದರ ಪ್ರಭು ಶುಭಾಶಂಸನೆಗೈದರು.

ದಾನಿಗಳ ಪರವಾಗಿ ಶಕುಂತಳಾ ಶೆಟ್ಟಿ, ಹೇಮಲತಾ ಎಸ್‌. ಶೆಟ್ಟಿ, ಕುಸುಮಾ  ಎಚ್‌. ಹೆಗ್ಡೆ, ವಿದ್ಯಾ ಡಿ. ಶೆಟ್ಟಿ, ಸುಲತಾ ಶೆಟ್ಟಿ ನ್ಯಾರ್ಮ, ಚೇತನಾ ಪಿ. ಶೆಟ್ಟಿ, ಜಗದೀಶ ಅರಸ, ಉಪಾಧ್ಯಕ್ಷೆ ಸುನೀತಾ ಸದಾನಂದ್‌, ಕೋಶಾಧಿಕಾರಿ ಶ್ವೇತಾ ಗಿರಿಧರ್‌ ಪ್ರಭು ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಪದಾಧಿಕಾರಿ ಜಯಶ್ರೀ ಜೆ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮಾಲತಿ ಎ. ಮೂಡಿತ್ತಾಯ ವರದಿ ವಾಚಿಸಿದರು. ಮರಿಯಾ ಜೆ. ಮಥಾಯಿಸ್‌ ವಂದಿಸಿದರು. ಸುಮತಿ ಜೆ. ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next