Advertisement

ಮಕ್ಕಳಿಗೆ ಸಾಹಿತ್ಯದ ಪರಿಚಯವಾಗಲಿ: ಡಾ|ಡಿ. ವೀರೇಂದ್ರ ಹೆಗ್ಗಡೆ

11:04 AM Nov 18, 2017 | |

ಬೆಳ್ತಂಗಡಿ: ಮಾತೃಭಾಷೆೆ ಕಲಿತ ಮಕ್ಕಳಿಗೆ ಕನ್ನಡ ಸಾಹಿತ್ಯದ ಪರಿಚಯವಾದಲ್ಲಿ ನಮ್ಮ ಸಂಸ್ಕೃತಿಯೂ ಉಳಿ ಯುತ್ತದೆ. ಭಾವನೆ-ಸಂವೇದನೆಗಳು ಅವರಲ್ಲಿ ಮೂಡಿ ಮಾನವೀಯ ಮೌಲ್ಯಗಳು ಹೆಚ್ಚಾಗುತ್ತವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಶುಕ್ರವಾರ ಸಂಜೆ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತಾವನೆಗೈದು, ಆಧುನಿಕತೆ ಬೆಳೆದಂತೆ ಸಾಹಿತ್ಯದ ಒಲವು ಕಡಿಮೆಯಾಗಿದೆ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆಯಲ್ಲಿ ವ್ಯತ್ಯಾಸವಾಗಿರಬಹುದು. ಆದರೆ ಮೊಬೈಲ್‌, ಕಂಪ್ಯೂಟರ್‌, ಐಪಾಡ್‌ಗಳ ಮೂಲಕ ಸಾಹಿತ್ಯವನ್ನು ಓದುವ ಯುವ ಸಮೂಹ ಹೆಚ್ಚಾಗಿದೆ. ಇಂದಿನ ದಿನಗಳಲ್ಲಿ ಪ್ರಮುಖವಾಗಿ ನಗರ – ಪಟ್ಟಣಗಳಲ್ಲಿ ದೈನಂದಿನ ಬಳಕೆ ಯಲ್ಲಿ ಮಾತೃಭಾಷೆೆಯ ಬಳಕೆ ಕಡಿಮೆಯಾಗಿ ಆಂಗ್ಲ ಭಾಷೆೆಯು ಹೆಚ್ಚಾದ ಕಾರಣ ಮಕ್ಕಳಲ್ಲಿ  ಸರಳ ಕನ್ನಡ ಪದ ಗಳ ಪರಿಚಯವೂ ಇಲ್ಲವಾಗುತ್ತಿದೆ. ಆದ್ದರಿಂದ ಮನೆಗಳಲ್ಲಿ ಮನಸ್ಸಿಗೆ ಹತ್ತಿರವಾದ, ಮುದನೀಡುವ, ಬೇಗನೆ ಅರ್ಥ ವಾಗುವ ಮಾತೃಭಾಷೆೆಯಲ್ಲಿ ವ್ಯವಹರಿಸಿದರೆ ಈ ಸಮಸ್ಯೆ ಬಹುಪಾಲು ಕಡಿಮೆಯಾಗುತ್ತದೆ ಎಂದರು.

ಜನಪದ ಅಧ್ಯಯನ: ಹೊಸಗನ್ನಡದ ಭಾಗ್ಯದ ಬಾಗಿಲು ತೆರೆದು ಕೊಂಡದ್ದೇ 20ನೇ ಶತಮಾನದಲ್ಲಿ. ಕನ್ನಡ ನವೋ ದಯದ ಅಂದಿನ ಸುವರ್ಣ ಯುಗದಲ್ಲಿ ಪ್ರಾತಃ ಸ್ಮರಣೀಯ ರಾಗಿ, ಧ್ರುವತಾರೆ ಗಳಾಗಿ ನೆಲೆಗೊಂಡ ಅನೇಕ ಮಹಾನ್‌ ಸಾಹಿತಿಗಳು ಕನ್ನಡ ನಾಡು-ನುಡಿಗಾಗಿ ಅನವರತ ಶ್ರಮಿಸಿದವರು. 21ನೇ ಶತಮಾನದ ಅರುಣೋದಯದೊಂದಿಗೆ ಕನ್ನಡ ದಲ್ಲಿ ವಿಶಿಷ‌r ವೆನಿಸುವ ಮಹಿಳೆಯರ ಧ್ವನಿ ಮತ್ತು ದಲಿತ ಪರಂಪರೆಯ ಹೆಜ್ಜೆ ಗುರುತುಗಳು ಮೂಡಲು ಆರಂಭ ವಾವೆ ಎಂದರು.

ಸಾರ್ಥಕ: ಜಾಗತೀಕರಣ ಮತ್ತು ಖಾಸಗೀಕರಣಗಳ ವರ್ತಮಾನ ಸಂದರ್ಭದಲ್ಲಿ ವ್ಯಷ್ಟಿ ಸಮಷ್ಟಿಯಾಗುವ, ವೈಯಕ್ತಿಕತೆ ಸಾಮಾಜಿಕವಾಗುವ, ಸ್ಥಳೀಯತೆ  ಜಾಗತಿಕ ಗೊಳ್ಳುವ ಇಂದು ಸಾಹಿತ್ಯ ಸಮ್ಮೇಳನದ ಅರ್ಥವಂತಿಕೆಯು ಹಿಂದೆಂದಿ ಗಿಂತಲೂ ಹೆಚ್ಚಿನ ಔಚಿತ್ಯವನ್ನು ಪಡೆದಿದೆ. ಕ್ಷೇತ್ರ ದಲ್ಲಿ ನಡೆ ಯುತ್ತ ಬಂದಿರುವ ಧರ್ಮ, ಸಾಹಿತ್ಯ ಹಾಗೂ ಲಲಿತಕಲಾ ಗೋಷ್ಠಿ ಗಳು ಸಾಂಸ್ಕೃತಿಕ ದಾಖಲೆಗಳೂ ಆಗಿ ಸಾರ್ಥಕ ವೆನಿಸುತ್ತವೆ. ಹೇಮಾವತಿಯವರು ಗ್ರಾಮಾಭಿ  ವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯದಲ್ಲಿ  ಕನ್ನಡದ ಬಳಕೆ ಮತ್ತು ಪ್ರೀತಿಗಾಗಿ ಕೆಲವು ಕಾರ್ಯಕ್ರಮ ಹಮ್ಮಿಕೊಂಡಿ ದ್ದಾರೆ ಎಂದರು.

ನಮ್ಮತನ ಉಳಿಯಲಿ: ಶತಮಾನಗಳಿಂದ ಸಾಹಿತ್ಯವು ಮಾನವೀಯತೆಯನ್ನು  ಉಳಿಸಿಕೊಂಡು ಬಂದಿದೆ.  ಸಂಸ್ಕೃತಿ, ಸಂಸ್ಕಾರವನ್ನು  ಬೆಳೆಸಿ ಕೊಂಡು ಬಂದಿದೆ. ಸಾಹಿತ್ಯದ ಮೂಲ ಉದ್ದೇಶವೂ ಇದೇ ಆಗಿದ್ದು, ಮಾತೃಭಾಷಾ ಶಿಕ್ಷಣದ ಮೂಲಕ ಸಾಹಿತ್ಯದ ಅಧ್ಯಯನ ಹೆಚ್ಚಾಗಿ ಎಲ್ಲರಲ್ಲಿ ಸಂವೇದನೆಗಳು, ಭಾವನೆಗಳು ಜಾಗೃತ ವಾಗುವಂತೆ ಮಾಡಿ, ನಮ್ಮ ನಾಡು ನುಡಿ ಸಂಸ್ಕೃತಿಗಳು ಉಳಿದು ನಮ್ಮತನ ಉಳಿಯಬೇಕು ಎಂದು ಡಾ| ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

Advertisement

ಇಂದು ಎಲ್ಲ  ಸಂಬಂಧಗಳು ಯಾಂತ್ರಿಕ ವಾಗ ತೊಡಗಿವೆ. ಆದರೂ ಜನರಿಗೆ ಯಕ್ಷಗಾನ, ನಾಟಕ, ಕಥೆ, ಕಾದಂಬರಿ ಗಳು, ಕವಿತೆಗಳು ಪ್ರಿಯವಾಗುತ್ತಿವೆ. ಏಕೆಂದರೆ ಅಲ್ಲಿ ಭಾವನೆಗಳಿವೆ. ಅನೇಕ ದಂಪತಿಗಳಲ್ಲಿ ವಿಚ್ಛೇದನ ಸಂದರ್ಭ ತಾಳ್ಮೆ ಹಾಗೂ ಪ್ರೀತಿ – ವಿಶ್ವಾಸಗಳ ಕೊರತೆ ಎದ್ದು ಕಾಣುತ್ತದೆ. ಸ್ವತಂತ್ರವಾಗಿ ಬದುಕುವ, ಮನಸೋ – ಇಚ್ಛೆ ಜೀವಿಸುವ, ಸಾಂಸಾರಿಕ ಬಂಧನವೇ ರಗಳೆಯಾಗಿ ಕಾಣುವ ಇಂದಿನ ಯುವ ಪೀಳಿಗೆ ಭವಿಷ‌ದ ಕುರಿತಾಗಿ ಯೋಚಿ ಸುವು ದಿಲ್ಲ. ಧರ್ಮ, ಅರ್ಥ, ಕಾಮಗಳ ಸಮ ತೋ ಲನ ಹಾಗೂ ನಿಯಂತ್ರಣವೇ ಸಾರ್ಥಕ ಬದುಕಿನ ಗುಟ್ಟು .
 ಡಾ| ಡಿ. ವೀರೇಂದ್ರ ಹೆಗ್ಗಡೆ

Advertisement

Udayavani is now on Telegram. Click here to join our channel and stay updated with the latest news.

Next