Advertisement

ಪ್ರಾದೇಶಿಕ ಭಾಷೆಯಲ್ಲೇ ತೀರ್ಪಿನ ಪ್ರತಿ ಸಿಗಲಿ: ರಾಷ್ಟ್ರಪತಿ

06:00 AM Oct 29, 2017 | Team Udayavani |

ಕೊಚ್ಚಿ: ಕನ್ನಡ ಸಹಿತ ಆಯಾ ಪ್ರಾದೇಶಿಕ ಭಾಷೆಯಲ್ಲಿ ನ್ಯಾಯಾಂಗದ ತೀರ್ಪು ಸಿಗುವಂತಾಗಬೇಕು ಎನ್ನುವುದು ಬಹಳ ಕಾಲದಿಂದ ಇರುವ ಒತ್ತಾಯ. ಈಗ ಅದಕ್ಕೆ ಪೂರಕವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಕೂಡ ಮಾತನಾಡಿದ್ದಾರೆ. ಎಲ್ಲ ಕೋರ್ಟ್‌ ತೀರ್ಪುಗಳು ಅರ್ಜಿದಾರರಿಗೆ ಅರ್ಥವಾಗುವ ಭಾಷೆಯಲ್ಲಿದ್ದು, ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಆರಂಭಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಹೀಗಾಗಿ ಕನ್ನಡ ಸಹಿತ ಪ್ರಾದೇಶಿಕ ಭಾಷೆಗಳ ಲ್ಲಿಯೇ ತೀರ್ಪು ನೀಡಬೇಕು ಎಂಬ ಒತ್ತಾಸೆಗೆ ಮತ್ತಷ್ಟು ಬಲ ಬಂದಂತಾಗಿದೆ.

Advertisement

ಕೇರಳ ಹೈಕೋರ್ಟ್‌ನ ವಜ್ರ ಮಹೋತ್ಸವ ಕಾರ್ಯ ಕ್ರಮದ ಸಮಾರೋಪ ಸಮಾ ರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್‌, “ಹೈಕೋರ್ಟ್‌ಗಳು ಆಂಗ್ಲ ಭಾಷೆಯಲ್ಲಿ ತೀರ್ಪು ನೀಡುತ್ತವೆ. ಆದರೆ ನಮ್ಮದು ವೈವಿಧ್ಯಮಯ ಭಾಷೆಗಳುಳ್ಳ ದೇಶ. ಅರ್ಜಿದಾರರಿಗೆ ಇಂಗ್ಲಿಷ್‌ನಲ್ಲಿ ನೀಡಿದ ತೀರ್ಪು ಏನೆಂದು ಗೊತ್ತಾಗದೆ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಇದನ್ನು ತಪ್ಪಿಸಲು, ಅರ್ಜಿದಾರರ ಭಾಷೆಗೆ ತೀರ್ಪನ್ನು ಭಾಷಾಂತರ ಮಾಡಿ ಅದರ ಪ್ರಮಾಣೀಕೃತ ಪ್ರತಿ ಯನ್ನು ನೀಡುವ ವ್ಯವಸ್ಥೆ ಜಾರಿಯಾಗಬೇಕು. ಕೇರಳದಲ್ಲಿ ಮಲಯಾಳ, ಪಟ್ನಾದಲ್ಲಿ ಹಿಂದಿ, ಕರ್ನಾಟಕದಲ್ಲಿ  ಕನ್ನಡ ಹೀಗೆ ಪ್ರಾದೇಶಿಕ ಭಾಷೆಯಲ್ಲಿ ತೀರ್ಪಿನ ಪ್ರತಿ ಸಿಗುವಂತಾಗಬೇಕು’ ಎಂದಿದ್ದಾರೆ.

ಇದರ ಜತೆಗೆ ವಿಳಂಬ ನ್ಯಾಯದಾನವನ್ನು ತಪ್ಪಿಸ ಬೇಕು ಎಂದೂ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯ ದಾನ ಪ್ರಕ್ರಿಯೆ ವಿಳಂಬವಾದರೆ ಬಡವರ್ಗದವರು ಮತ್ತು ತುಳಿತಕ್ಕೆ ಒಳಗಾದವರಿಗೆ ನ್ಯಾಯ ದೊರಕಿ ದಂತಾಗುವುದಿಲ್ಲ  ಎಂದರು.

Advertisement

Udayavani is now on Telegram. Click here to join our channel and stay updated with the latest news.

Next