Advertisement

UV Fusion: ಪೋಷಕರ ಬದುಕಿಗೆ ಸಾರ್ಥಕತೆಯನ್ನು ತುಂಬೋಣ

03:45 PM Nov 30, 2024 | Team Udayavani |

ತಂದೆ-ತಾಯಿ ನಮ್ಮ ಜೀವನದ ಎರಡು ಕಣ್ಣುಗಳಿದ್ದಂತೆ. ತನ್ನ ಮಕ್ಕಳ ಜೀವನದ ಯಶಸ್ವಿಗಾಗಿ ನಿರಂತರ ಪಣ ತೊಟ್ಟು ತನ್ನ ಜೀವನ ಹೇಗೆ ಸಾಗಿದರು ಪರವಾಗಿಲ್ಲ. ಆದರೆ ನನ್ನ ಮಕ್ಕಳ ಜೀವನ ಸುಗಮವಾಗಿ, ಸಂತೋಷದಿಂದ ಸಾಗಬೇಕು ಎನ್ನುವುದು ಜಗತ್ತಿನ ಎಲ್ಲ ಪೋಷಕರ ಬಯಕೆ ಆಗಿರುತ್ತದೆ. ಅಂತೆಯೆ ಮಕ್ಕಳು ನಮ್ಮಂತೆ ಬದುಕಬಾರದು ನಾವು ಅಂದಿನ ದಿನಗಳಲ್ಲಿ ಕಂಡಂತಹ ಕಷ್ಟ ಕಾರ್ಪಣ್ಯ ನನ್ನ ಮಕ್ಕಳು ಕಾಣಬಾರದು ಎನ್ನುವ ಉದ್ದೇಶದಿಂದ ಮಕ್ಕಳಿಗೆ ಕಂಡಿದ್ದನ್ನು, ಕೇಳಿದ್ದನ್ನು ಕೊಟ್ಟು ಸಂತೋಷದಿಂದ ಇರುವಂತೆ ಸಲಹುತ್ತಾರೆ.

Advertisement

ಮಕ್ಕಳು ಮುಂದೆ ಮುಪ್ಪಿನ ಕಾಲದಲ್ಲಿ ನಮ್ಮನ್ನು ನೋಡುತ್ತಾರೊ ನಮಗೆ ನಮ್ಮ ಮಾತಿಗೆ ಗೌರನ ನೀಡುತ್ತಾರೋ ಎಂದು ಒಂದು ದಿನವು ಯೋಚಿಸದೆ ನಿರಂತರ ಮಕ್ಕಳ ಜೀವನಕ್ಕೆ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಇನ್ನು ಪೋಷಕರಲ್ಲಿ ಕೆಲವರು ನನ್ನ ಕೈಯಲ್ಲಿ ಮಗ ಅಥವಾ ಮಗಳಿಗೆ ಏನೂ ಕೊಡಲಾಗದಿದ್ದರೂ ಪರವಾಗಿಲ್ಲ ಆದರೆ ಮಕ್ಕಳಾಗುತ್ತವೆ ಸ್ವಾತಂತ್ರ್ಯದಿಂದ ಬದುಕಲು ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಮಕ್ಕಳ ಬಾಳಲ್ಲಿ ಜ್ಞಾನದ ದೀವಿಗೆ ಉರಿಯುವಂತೆ ಬೀಡಿ ಕಟ್ಟಿ, ಕೂಲಿ ಮಾಡಿ, ಯಾರದೋ ಮನೆಯಲ್ಲಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಾರೆ. ಇನ್ನು ಉನ್ನತ ವ್ಯಾಸಂಗಕ್ಕೂ ಸಹ ಎಲ್ಲಾದರೂ ಲಕ್ಷಾಂತರಗಟ್ಟಲೇ ಸಾಲ ಮಾಡೋಕು ಸಹ ಸಿದ್ಧರಿರುತ್ತಾರೆ. ಏಕೆಂದರೆ ತಾನು ಕಂಡಂತಹ ಜೀವನ ತನ್ನ ಮಕ್ಕಳು ಕಾಣಬಾರದೆಂದು.

ಆದರೆ ಪ್ರಸ್ತುತ ಯುಗದಲ್ಲಿ ಕಲಿತವರೇ ಅಡ್ಡ ದಾರಿಯನ್ನು ಹಿಡಿಯುತ್ತಿರುವುದನ್ನು ಗಮನಿಸಬಹುದು. ಒಂದು ವೇಳೆ ತಂದೆ ತಾಯಿ ಏನಾದರು ಕಿವಿ ಮಾತು ಹೇಳಿದರೆ ಅದನ್ನು ಕೇಳುವ ವ್ಯವದಾನವಾಗಲಿ ಅವಧಾನವಾಗಲಿ ಇಂದಿನ ಮಕ್ಕಳಲ್ಲಿ ಇಲ್ಲ. ನೀವೇನೂ ಹೇಳುವುದು ನನಗೆ ತಿಳಿದಿದೆ ಎನ್ನುವ ಅಹಂಕಾರದ ಮಾತುಗಳನ್ನು ಹೇಳಿ ತಂದೆ ತಾಯಿಯ ಮಾತನ್ನು ಮುಚ್ಚಿಸಿ ಬಿಡುವುದು. ತಂದೆ ತಾಯಿಗೆ ಅರಿವಾಗದಂತೆ ಅಡ್ಡ ದಾರಿಯನ್ನು ಹಿಡಿಯುವುದು ಕಂಡುಬರುತ್ತಿದೆ. ಕೆಲವು ಪೋಷಕರು ಏನು ಅರಿಯದ ಮುಗ್ಧರಿರುತ್ತಾರೆ. ತನ್ನ ಮಕ್ಕಳು ಮಾಡಿದ್ದೆ ಸರಿ ಎಂದು ಪ್ರೋತ್ಸಾಹಿಸುತ್ತಾರೆ ಕಾರಣ ಮಕ್ಕಳ ಮನಸ್ಸಿಗೆ ಬೇಸರವಾಗದಿರಲಿ ಎಂದು.

ವಿದ್ಯೆಯನ್ನು ಕಲಿತವರು ಒಂದನ್ನು ಯೋಚಿಸಬೇಕು. ನನ್ನನ್ನು ಸಲಹಿದ ತಂದೆ ತಾಯಿಯನ್ನು ಉತ್ತಮವಾಗಿ ಸಲಹಬೇಕು, ಅವರ ಮಾತನ್ನು ಕೇಳಬೇಕು, ಅವರು ಹೇಳಿದಂತೆ ನಡೆಯಬೇಕೆಂದು ಅವರು ನಮ್ಮ ಹಿಂದೂ ಮುಂದನ್ನು ಆಲೋಚಿಸದೆ ಸದಾ ನಮಗೆ ಒಳಿತನ್ನು ನೀಡಿ ನನ್ನ ಜೀವನಕ್ಕೆ ಶ್ರಮಿಸಿದ್ದಾರೆಂದು. ಕಲಿತು ಉತ್ತಮ ಸ್ಥಾನಕ್ಕೆ ತಲುಪಿದ ಮೇಲೆ ತಂದೆ ತಾಯಿಯನ್ನು ಮರೆತುಬಿಡುವುದು ಸರಿಯಲ್ಲ. ಇತ್ತೀಚಿಗೆ ಏನಾಗುತ್ತಿದೆ ಎಂದರೆ ತಂದೆ ತಾಯಿಗೆ ವಯಸ್ಸಾಗುತಿದ್ದಂತೆ ತಂದೆ ತಾಯಿಯನ್ನು ಸಲಹಲು ಸಾಧ್ಯವಿಲ್ಲವೆಂದೂ ಅನಾಥಾಶ್ರಮಕ್ಕೆ ಸೇರಿಸಿಬರುವುದು.

ಆದರೆ ಒಂದು ಆಲೋಚಿಸಿ ಇತ್ತೀಚಿನ ತಲೆಮಾರಿನವರು ಅವರ ತಂದೆ ತಾಯಿಯನ್ನು ಅನಾಥಾಶ್ರಮಕ್ಕೆ ಬಿಟ್ಟು ಬರುವಾಗ ಭಾವ ಹೀನವಾಗುತ್ತಿದ್ದಾರೆ. ಅವರು ನೀವು ಚಿಕ್ಕ ಪ್ರಾಯದಲ್ಲಿರುವಾಗಿಂದ ನಿಮಗೆ ತುತ್ತು ಕೊಟ್ಟು ಹಾಕಿ ಸೇವಿಸುವಾಗ ಅವರೆಷ್ಟು ಕಷ್ಟಪಟ್ಟಿರುವರೆಂದು ಅವರು ನಿಮ್ಮಂತೆಯೇ ಆರೋಪಿಸಿದ್ದಾರೆ ನೀನೆಲ್ಲಿ ಇರುತಿದ್ದರೆಂದು?. ಇಂದಿನ ಯುಗದಲ್ಲಿ ನಾವೂ ಮಾಡಬೇಕಾದ ಕೆಲಸವೇನೆಂದರೆ ಆದಷ್ಟು ವೃದ್ಧಾಶ್ರಮಕ್ಕೆ ಪೋಷಕರನ್ನು ಕಡಿಮೆ ಮಾಡೋಣ, ವೃದ್ಧಾಶ್ರಮದಲ್ಲಿರುವ ತಂದೆ ತಾಯಿಯರನ್ನು ಮನೆಗೆ ಕರೆದುಕೊಂಡು ಹೋಗಿ ಅವರ ಜತೆ ಕೂಡಿ ಬಾಳ್ಳೋಣ. ಅವರನ್ನು ಚೆನ್ನಾಗಿ ಹಾರೈಸೋಣ. ಜಗತ್ತಿನಲ್ಲಿ ತಂದೆ ತಾಯಿ ಆಶೀರ್ವದಿಸಿ ಹರಿಸಿದರೆ ಯಾವ ದೇವರ ಆಶೀರ್ವಾದ ಸಹ ಬೇಡವಂತೆ ಅವರು ನಮ್ಮನ್ನು ಹೆತ್ತ ಕಾರಣಕ್ಕೆ ಅವರ ಬದುಕಿಗೆ ಸಾರ್ಥಕತೆಯನ್ನು ನೀಡೋಣ.

Advertisement

-ಕಾರ್ತಿಕ್‌ ಹಂಗಾರಕಟ್ಟೆ

ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಮಹಾ ವಿದ್ಯಾಲಯ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next