Advertisement
ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವ ಭಯಾನಕ ರೋಗಗಳಲ್ಲಿ ಒಂದಾಗಿರುವ ಮಧುಮೇಹ (ಡಯಾಬಿ ಟೀಸ್)ರೋಗವು ಇಂದು ಯಾವುದೇ ವಯೋಮಾನದವರನ್ನು ಬಿಡದೇ ಕಾಡುತ್ತಿದೆ. ಆನುವಂಶಿಕವಾಗಿ ಈ ರೋಗವು ಹುಟ್ಟೋ ಮಗುವಿನಿಂದ ಹಿಡಿದು ವೃದ್ಧರವರೆಗೆ ಈ ಕಾಯಿಲೆಗೆ ತುತ್ತಾಗಿರುವವರನ್ನು ಕಾಣಬಹುದು.
Related Articles
ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಡಯಾಬಿಟಿಸ್ ಫೆಡರೇಶನ್ ಸಹಯೋಗದಲ್ಲಿ 1991ರಲ್ಲಿ ಸಕ್ಕರೆ ಕಾಯಿಲೆಯ ನಿವಾರಣೆಗೆ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಮಧುಮೇಹ ದಿನವನ್ನು ಆರಂಭಿಸಲಾಯಿತು. ತರುವಾಯ 2006ರಲ್ಲಿ ವಿಶ್ವಸಂಸ್ಥೆಯೂ ಸಕ್ಕರೆ ಕಾಯಿಲೆಗೆ ಮದ್ದಾದ ಇನ್ಸುಲಿನ್‌ನ್ನು ಕಂಡು ಹಿಡಿದ ಸರ್ ಫೆಡ್ರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ಸವಿನೆನಪಿಗಾಗಿ ನ. 14ನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲು ಘೋಷಿಸಲಾಯಿತು. ವಿಶ್ವವನ್ನು ಗಾಢವಾಗಿ ಆವರಿಸಿರುವ ಈ ಕಾಯಿಲೆಯ ನಿರ್ಮೂಲನೆಗೆ ಪಣತೊಟ್ಟು ಜಾಗೃತಿ ದಿನವನ್ನಾಗಿ ಆಚರಿಸಲು ಕರೆ ನೀಡಲಾಯಿತು.
Advertisement
ಕುಟುಂಬ ರಕ್ಷಣೆಗೆ ಆದ್ಯತೆವಿಶ್ವ ಮಧುಮೇಹ ದಿನವನ್ನು ವಿಶೇಷ ಲೋಗೋ ಮತ್ತು ಸಂದೇಶದೊಂದಿಗೆ ಪ್ರತಿವರ್ಷ ಆಚರಿಸುತ್ತಿದ್ದು 2019ರ ಈ ದಿನವನ್ನು “ಕುಟುಂಬ ಮತ್ತು ಮಧುಮೇಹ ಕಾಯಿಲೆ’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಶೇ. 80ರಷ್ಟು ಆನುವಂಶಿಯವಾಗಿ ಕಾಣಿಸಿಕೊಳ್ಳುವ ಈ ಮಧುಮೇಹ ರೋಗವನ್ನು ಕುಟುಂಬ ಮಟ್ಟದಲ್ಲಿ ಹೇಗೆ ನಿಯಂತ್ರಿಸಬಹುದು ಇದಕ್ಕೆ ಹಾಕಿಕೊಳ್ಳಬಹುದಾದ ಪೂರಕ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಮಧುಮೇಹ ಅನೇಕ ಕಾರಣಗಳಿಂದ ಬರುವಂತಹ ರೋಗ. ಇದು ಆಹಾರ ಪದ್ಧತಿ, ಸರಿಯಾದ ವ್ಯಾಯಾಮದ ಕೊರತೆಗಳಿಂದ ಕಂಡು ಬರುತ್ತವೆ. ಆಧುನಿಕ ಜಗತ್ತಿನ ಒತ್ತಡ, ಮತ್ತು ಅವುಗಳ ನಿಯಂತ್ರಿಸುವಲ್ಲಿ ಆಗುವ ಕೊರತೆಯಿಂದ ಈ ರೋಗ ಇನ್ನು ಉಲ್ಬಣಿಸುತ್ತದೆ. ಇದಕ್ಕೆಲ್ಲ ಮೂಲ ಕಾರಣ ನಮ್ಮ ಜೀವನ ಶೈಲಿ. ಆದ್ದರಿಂದ ಆದಷ್ಟು ಅದನ್ನು ಮೊದಲು ಸರಿ ಮಾಡಿಕೊಳ್ಳಬೇಕು. ವೈದ್ಯಕೀಯವಾಗಿ ಈ ರೋಗಕ್ಕೆ ಹಲವು ಔಷಧಗಳಿದ್ದರೂ ಕೂಡ ಪ್ರಾಣಾಯಾಮ, ಯೋಗ, ಧ್ಯಾನದ ಅಭ್ಯಾಸಗಳನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸೂಕ್ತವಾದ ರೀತಿಯಲ್ಲಿ ಅದನ್ನು ಮರೆಯದರೆ ಮಾಡಬೇಕು ಆಗ ಮಧುಮೇಹ ಎಂಬ ರೋಗ ನಿಮ್ಮಿಂದಲೇ ನಿಯಂತ್ರಿಸಲ್ಪಡುತ್ತದೆ. ಆದರೆ ಇದನ್ನು ನಿರಂತರವಾಗಿ ಮಾಡಬೇಕು. ಇಲ್ಲವಾದಲ್ಲಿ ಇದರ ಫಲ ನಿಮಗೆ ದೊರಕುವುದು ತುಂಬಾ ಕಷ್ಟ. ಸಾಧ್ಯವಾದಷ್ಟು ಒಂದೇ ಸಮಯದಲ್ಲಿ ಅದನ್ನು ಅಭ್ಯಸಿಸಲು ಪ್ರಯತ್ನಿಸಬೇಕು. ನಿಮ್ಮ ದಿನ ನಿತ್ಯದ ಕೆಲಸಕ್ಕೆ ಅನುಗುಣವಾಗಿ ಬೆಳಗ್ಗೆ ಅಥವಾ ಸಂಜೆ ಒಂದು ಸಮಯವನ್ನು ಅದಕ್ಕೆಂದು ಮೀಸಲಿರಿಸಿರಿ. ಆ ಸಮಯವನ್ನು ನಿಷ್ಠೆಯಿಂದ ಪಾಲಿಸಿರಿ. ಮಧುಮೇಹ ವಿವಿಧ ದೇಶಗಳಲ್ಲಿ
· ಚೀನ ದೇಶದಲ್ಲಿ ಅತೀ ಹೆಚ್ಚು ಮಧುಮೇಹ ರೋಗಿಗಳಿದ್ದಾರೆ (114 ಮಿ).
· ವಿಶ್ವದಲ್ಲಿ ಪ್ರತಿ ವರ್ಷ 1.6 ಮಿಲಿಯನ್ ಜನರು ಡಯಾಬಿಟೀಸ್ ರೋಗದಿಂದ ಮೃತಪಡುತ್ತಿದ್ದಾರೆ. 422 ಮಿಲಿಯನ್ ಜನರು ಡಯಾಬಿಟೀಸ್ ರೋಗದಿಂದ ಬಳಲುತ್ತಿದ್ದಾರೆ.
· ಭಾರತದಲ್ಲಿ 69.2 ಮಿಲೀಯನ್‌ನಷ್ಟು ಜನರಿಗೆ ಡಯಾಬಿಟೀಸ್ ರೋಗವಿದೆ.
· ಕೇರಳದಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳಿದ್ದಾರೆ. ಶೇಕಡಾ 19.2 ಜನರಿಗೆ ಈ ರೋಗವಿದೆ.ಚಂಡೀಗಢ್ ಹಾಗೂ ತಮಿಳು ನಾಡುಗಳು ಅನಂತರದ ಸ್ಥಾನದಲ್ಲಿವೆ. ಅಲ್ಲಿ ಕ್ರಮವಾಗಿ ಶೇಕಡಾ 13.6 ಹಾಗೂ ಶೇಕಡಾ 10 ಜನರಿಗೆ ಮಧುಮೇಹವಿದೆ.
· ಡಯಾಬಿಟೀಸ್ ರೋಗದಿಂದ ಮೃತಪಡುವವರ ಸಂಖ್ಯೆಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಮಧುಮೇಹಕ್ಕೆ ಕಾರಣಗಳು
1 ಅಶಿಸ್ತು ಜೀವನ ಕ್ರಮದಿಂದ ಸಕ್ಕರೆ ಕಾಯಿಲೆ ಉಂಟಾಗುತ್ತದೆ.
2 ಜೀವನ ಶೈಲಿಯಲ್ಲಿ ಆಗುವ ಬದಲಾವಣೆ.
3 ನಿಯಮಿತ ವ್ಯಾಯಾಮ ಇಲ್ಲದಿರುವುದು
4 ಮಾನಸಿಕ ಒತ್ತಡ, ಅಧಿಕ ರಕ್ತಡೊತ್ತಡ
5 ದೇಹದಲ್ಲಿರುವ ಇನ್ಸುಲಿನ್, ಹಾರ್ಮೋನುನಲ್ಲಿ ಆಗುವ ಬದಲಾವಣೆಯಿಂದಾಗಿಯೂ ಸಕ್ಕರೆ ಕಾಯಿಲೆ ಬರಬಹುದು.
6 ಆನುವಂಶಿಕವಾಗಿ
7 ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟ ಹೆಚ್ಚು- ಕಡಿಮೆ ಆದರೂ ಮಧುಮೇಹ ಬರುತ್ತದೆ.
8 ಸ್ಪೀರಾಯ್ಡ, ಅಧಿಕ ರಕ್ತ ದೊತ್ತಡದ ಔಷಧಗಳ ಸೇವನೆ.
9 ಧೂಮಪಾನ, ಮಧ್ಯಪಾನ
10 ಅತಿಯಾದ ತೂಕ, ಶ್ರಮವಿಲ್ಲದ ಜೀವನ
11 ಅಧಿಕ ಕೊಬ್ಬಿನ ಅಂಶವಿರುವ ಪದಾರ್ಥ ಮತ್ತು ಕುರುಕಲು ತಿಂಡಿ ಸೇವನೆ ರೋಗ ನಿಯಂತ್ರಣ ಸಾಧ್ಯ
ಡಯಾಬಿಟೀಸ್ ಇತ್ತೀಚೆಗೆ ಅಧಿಕ ವಾಗುತ್ತಿದೆ. ಅದರಲ್ಲಿ ಎರಡು ವಿಧವಿದೆ ಟೈಪ್1 ಮತ್ತು 2. ಟೈಪ್ 2 ಡಯಾಬಿಟಿಸ್ 40ರ ಅನಂತರ ಕಾಣಿಸಿಕೊಳ್ಳುತ್ತದೆ. ಟೈಪ್ 1 ಡಯಾಬಿಟೀಸ್ ಅತೀ ಚಿಕ್ಕ ಪ್ರಾಯದಲ್ಲಿ ಕಾಣಿಸಿಕೊಳ್ಳುತ್ತದೆ. ಈಗ ಟೈಪ್ 1 ಡಯಾಬಿಟಿಸ್ ರೋಗ ಅಧಿಕವಾಗುತ್ತಿದೆ. ಶರೀರದಲ್ಲಿ ಇನ್ಸುಲಿನ್ ಉತ್ಪಾದನೆ ಇಲ್ಲದಿರುವುದರಿಂದ ಸಣ್ಣ ಪ್ರಾಯದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಮುಖವಾಗಿ ಮಾಡುವ ಸಾಧ್ಯತೆ ಕಡಿಮೆಯಿದ್ದರೂ ನಿಯಂತ್ರಣದಲ್ಲಿಡಬಹುದು. ನಿಯಮಿತ ಆಹಾರ ಸೇವನೆ, ಯೋಗ, ಧ್ಯಾನಗಳನ್ನು ಮಾಡುವುದರ ಮೂಲಕ ನಿಯಂತ್ರಿಸಬಹುದು. ಜೀವನ ಶೈಲಿಯ ಬದಲಾವಣೆ, ಆಹಾರ ಕ್ರಮ, ಬೊಜ್ಜುತನ ಮೊದಲಾದವುಗಳಿಂದ ಮಧುಮೇಹ ಬರುತ್ತದೆ. ವಂಶ ಪಾರಂಪರಿಕವಾಗಿಯೂ ಈ ರೋಗ ಬರುತ್ತದೆ. ರೋಗದ ಬಗ್ಗೆ ಹೆಚ್ಚು ಒತ್ತಡ ತೆಗೆದುಕೊಳ್ಳದೆ ಔಷಧಗಳನ್ನು ಕ್ರಮವಾಗಿ ತೆಗೆದುಕೊಂಡು ಆಹಾರ ಕ್ರಮಗಳನ್ನು ಸರಿಯಾಗಿ ಪಾಲಿಸಿದರೆ ಮಧುಮೇಹದ ಅಪಾಯದಿಂದ ಪಾರಾಗಬಹುದು.
- ಡಾ| ಅರುಣ್ ಎಸ್. ಅಸೋಸಿಯೇಟ್ ಪ್ರೊಫೆಸರ್ ಮೆಡಿಸಿನ್ ವಿಭಾಗ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಆಶ್ಚರ್ಯಕರ ಸಂಗತಿಗಳು
· 2045ರಲ್ಲಿ 134 ಮಿಲಿಯನ್ ಮಧುಮೇಹಿಗಳನ್ನು ಭಾರತ ಹೊಂದಲಿದೆ.
· ಆಗ್ನೇಯ ಏಷ್ಯಾ ದೇಶಗಳಲ್ಲಿ 2017ರಲ್ಲಿ 6 ಲಕ್ಷ ಜನ ಮಧು ಮೇಹದಿಂದ ಸಾವನ್ನಪ್ಪಿದ್ದಾರೆ
· 727 ಬಿ. ಡಾಲರ್ ಜಗತ್ತಿನಾದ್ಯಂತ ರೋಗಿಗಳು ವ್ಯಯಿಸಿದ ಹಣ (ವರ್ಷಕ್ಕೆ)
· ಅಭಿವೃದ್ಧಿಶೀಲ ದೇಶಗಳಲ್ಲಿ ಮಧುಮೇಹಿಗಳ ಪ್ರಮಾಣ ಹೆಚ್ಚು
· ಕುರುಡುತನ, ಅಂಗ ಛೇದನ, ಕಿಡ್ನಿ ವಿಫಲತೆಗೆ ಕಾರಣ ಸೇವಿಸಬಹುದಾದ ಆಹಾರ ಪದಾರ್ಥಗಳು
1. ಸೊಪ್ಪು -ತರಕಾರಿ
2. ದಾಲಿcನ್ನಿ
3. ಮೊಟ್ಟೆ
4. ಚೀಯಾ ಬೀಜಗಳು
5. ಅರಿಶಿನ
6. ಗ್ರೀಕ್ ಮೊಸರು
7. ಕೋಸುಗಡ್ಡೆ
8. ಅಗಸೆಬೀಜಗಳು
9. ಸ್ಟ್ರಾಬೆರಿ
10.ಬೆಳ್ಳುಳ್ಳಿ
11.ಗೋಧಿ ಪದಾರ್ಥ
12. ಆಲಿವ್ ಎಣ್ಣೆ ವಿಶೇಷ ಲೋಗೋ
ನೀಲಿ ಬಣ್ಣದ ವೃತ್ತ ಆಕಾರವು (ಬ್ಲೂಜೀರೋ ಸರ್ಕಲ್) ಇದು ವಿಶ್ವ ಮಧುಮೇಹಿಗಳನ್ನು ಸೂಚಿಸುವ ಸಂಕೇತವಾಗಿದೆ. ನೀಲಿ ಬಣ್ಣದ ವೃತ್ತ ಆಕಾರವನ್ನು ಲೋಗೋವನ್ನಾಗಿ ಬಳಸಿ ಕೊಂಡು ಈ ದಿನದಂದು ವಿಶ್ವಾದ್ಯಂತ ಜಾಗೃತಿ ಮೂಡಿಸಲಾಗುತ್ತದೆ. ಯೋಗ ಮದ್ದು
ಮಧುಮೇಹ ಎಂದಾಕ್ಷಣ ಒಂದು ಸಲ ಭಯವಾಗುತ್ತದೆ. ಮಾನವ ಸಂಕುಲದಲ್ಲಿ ಅತಿಯಾಗಿ ಕಾಡುತ್ತಿರುವ ರೋಗಗಳಲ್ಲಿ ಇದು ಒಂದು. ಇದನ್ನು ತಡೆಯಲು ಅನೇಕ ರೀತಿಯ ಸಂಶೋಧನೆಗಳನ್ನು ಮಾಡುತ್ತಲೇ ಇದ್ದಾರೆ ಅದಲ್ಲದೆ ನಾವು ಮನೆಯಲ್ಲಿ ಕುಳಿತು ಈ ರೋಗವನ್ನು ಆದಷ್ಟು ಕಡಿಮೆ ಮಾಡಲು ಹಲವು ವಿಧಾನಗಳಿವೆ ಅದರಲ್ಲಿ ಯೋಗ ಅತ್ಯಂತ ಸಹಕಾರಿಯಾದ ಒಂದು ವಿಧಾನ. ಯೋಗದ ಯಾವ ಆಸನಗಳನ್ನು ಮಾಡಿದರೆ ಈ ರೋಗವನ್ನು ತಡೆಯಬಹುದು ಎಂಬ ಮಾಹಿತಿ ಇಲ್ಲಿದೆ. ಕಪಾಲಭಾತಿ ಪ್ರಾಣಾಯಾಮ
ಕಪಾಲಭಾತಿ ಉಸಿರಾಟದ ಪ್ರಕ್ರಿಯೆ ನರವ್ಯವಸ್ಥೆಯನ್ನು ಶಕ್ತಿಯುತವಾಗಿಸುತ್ತದೆ. ಮೆದುಳಿನ ಕೋಶಗಳನ್ನು ಪುನರುಜ್ಜೀ ವನಗೊಳಿಸುತ್ತದೆ. ಮಧುಮೇಹಿಗಳಿಗೆ ಇದು ಸಹಕಾರಿ. ಸುಪ್ತ ಮತ್ಸೆದ್ರಿಯಾಸನ
ಅಂಗಾತವಾಗಿ ಮಲಗಿ ದೇಹವನ್ನು ತಿರುಚಿದಾಗ ಹೊಟ್ಟೆಯ ಭಾಗಕ್ಕೆ ಒತ್ತಡ ನೀಡುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಧನುರಾಸನ
ಧನಸ್ಸಿನ ಭಂಗಿಯಲ್ಲಿ ದೇಹ ಮಾಡಿಕೊಳ್ಳಬೇಕು. ಇದು ಮಧುಮೇಹಿಗಳಿಗೆ ಒಳ್ಳೆಯ ಆಸನವಾಗಿದ್ದು ಇದರಿಂದ ಹೊಟ್ಟೆಯ ಸ್ನಾಯುಗಳು ಬಲಿಷ್ಠವಾಗುವುದಲ್ಲದೆ, ದಣಿವು, ಒತ್ತಡವನ್ನು ನಿಭಾಯಿಸುತ್ತದೆ. ಪಶ್ಚಿಮೋತ್ತಾನಾಸನ
2 ಕಾಲುಗಳನ್ನು ಮುಂದಕ್ಕೆ ಚಾಚಿ ಹೊಟ್ಟೆಯ ಭಾಗ ವನ್ನು ನಿಧಾನಕ್ಕೆ ತಿರುಗಿಸಬೇಕು. ಈ ಯೋಗವು ದೇಹದಲ್ಲಿ ಸಮತೋಲನವನ್ನು ಉಂಟು ಮಾಡುತ್ತದೆ. ಶವಾಸನ
ಕೊನೆಯ ವಿಶ್ರಾಂತಿ ಭಂಗಿಯೆಂದರೆ ಶವಾಸನ. ಕೈಕಾಲು ಅಂಗಾತ ಚಾಚಿ ಮಲಗಿದ ಭಂಗಿಯಿಂದ ನಿಧಾನವಾಗಿ ಸುದೀರ್ಘವಾಗಿ ಉಸಿರಾಡಬೇಕು. ಇದು ದೇಹವನ್ನು ಆಳವಾದ ಧಾನ್ಯದ ಸ್ಥಿತಿಗೆ ಕರೆದೊಯ್ಯತ್ತದೆ. ಇದು ದೇಹಕ್ಕೆ ವಿಶ್ರಾಂತಿಯನ್ನು ಉಂಟುಮಾಡುತ್ತದೆ. - ಶಿವ ಸ್ಥಾವರಮಠ, ಪ್ರೀತಿ ಭಟ್, ಸುಶ್ಮಿತಾ ಶೆಟ್ಟಿ, ಧನ್ಯಾಶ್ರೀ, ಶಿವಾನಂದ ಎಚ್.
ನಿರ್ವಹಣೆ: ಮಂಗಳೂರು ಡೆಸ್ಕ್