Advertisement
ನಗರದ ಧ್ವನ್ಯಾಲೋಕದಲ್ಲಿ ಭಾನುವಾರ ಆಯೋಜಿಸಿದ್ದ ಕೃಷಿಯ ಸುತ್ತ ಒಂದು ಚರ್ಚೆ ಕಾರ್ಯಕ್ರಮದಲ್ಲಿ ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ ಬಳಗದಿಂದ ಪ್ರಕಟಿಸಿರುವ ಭೂಸ್ವಾಧೀನ ಒಳಸುಳಿಗಳು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು,ರೈತರ ಕೃಷಿ ಭೂಮಿ ಸ್ವಾಧೀನದಲ್ಲಿ ರಾಜಕಾರಣಿಗಳು, ಪುಡಿರಾಜಕಾರಣಿಗಳೇ ರಿಯಲ್ ಎಸ್ಟೇಟ್ ಏಜೆಂಟರು. ಇವರೆಲ್ಲ ಕೃಷಿಕರ ಬದುಕು ಕಿತ್ತುಕೊಳ್ಳುವ ದಲ್ಲಾಳಿಗಳು ಎಂದರು.
Related Articles
Advertisement
ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ,ಕೃತಿಯ ಲೇಖಕಿ ಗಾಯಿತ್ರಿ, ಚಿಂತಕರಾದಯತಿರಾಜ್, ಸಂತೋಷ್ ಕೌಜಲಗಿ, ಜಲ ತಜ್ಞರವಿಕುಮಾರ್, ರೈತ ಮುಖಂಡ ಹೊಸಕೋಟೆಬಸವರಾಜು, ಕಾರ್ಯಕ್ರಮದ ಸಂಯೋಜಕ ಟಿ.ಜಿ.ಎಸ್.ಅವಿನಾಶ್ ಇನ್ನಿತರರು ಇದ್ದರು.
ಹೆದ್ದಾರಿಗಳು ಅಸಮಾನತೆ ಸೃಷ್ಟಿಸುವ ರಹದಾರಿ :
ಕೃಷಿ ಭೂಮಿ ಸ್ವಾಧೀನ ಪಡೆಸಿಕೊಂಡು ನಿರ್ಮಾಣವಾಗುವ ರಾಷ್ಟ್ರೀಯ ಹೆದ್ದಾರಿಗಳುಅಸಮಾನತೆ ಸೃಷ್ಟಿಸುವ ರಹದಾರಿ ಆಗಿದೆ. ಸಾಮಾಜಿಕ ತಾರತಮ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಬಂಡವಾಳದಾರರಿಗೆ ಕೈಗಾರಿಕೆ ಸ್ಥಾಪಿಸಲು ಭೂಮಿ, ನೀರು, ತೆರಿಗೆಯಲ್ಲಿ ರಿಯಾಯಿತಿಯಷ್ಟೇ ನೀಡುತ್ತಿಲ್ಲ. ಅವರಿಗೆ ಮೂಲ ಸೌಕರ್ಯ ಕಲ್ಪಿಸಲು ಸಹ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ.
ಅವರಿಗಾಗಿ ರಸ್ತೆ, ವಿಮಾನನಿಲ್ದಾಣ ನಿರ್ಮಿಸುವುದೇ ಅಭಿವೃದ್ಧಿಯಾಗಿದೆ ಎಂದು ಬಡಗಲಪುರ ನಾಗೇಂದ್ರ ಹೇಳಿ ದರು. ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿರುವುದು ಅಪಾಯಕಾರಿಯಾಗಿದೆ. ಆಹಾರ ಭದ್ರತೆ ಧಕ್ಕೆಯಾಗಲಿದೆ. ಇದೊಂದು ಭೂ ಕಬಳಿಕೆ ಕಾಯ್ದೆಯಾಗಿ ಪರಿವರ್ತನೆಯಾಗಿದೆ. ಸ್ವಾಧೀನದಿಂದ ಉಂಟಾಗುವ ಪರಿಸರ, ಸಾಮಾಜಿಕ ಪರಿಣಾಮಗಳು, ಭೂಮಿಕಳೆದುಕೊಂಡವರಿಗೆ ಪುನರ್ ವಸತಿ ಅಂಶಗಳೆಲ್ಲ ಕೈಬಿಡಲಾಗಿದೆ. ನರಭಕ್ಷಕ ವ್ಯವಸ್ಥೆ ರೂಪಗೊಳ್ಳುತ್ತಿದೆ. ಇದಕ್ಕೆ ಎಲ್ಲ ಪಕ್ಷದವರು ಬೆಂಬಲವಾಗಿ ನಿಂತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು