Advertisement
ಸಮಸ್ಯೆಯಿಂದ ತೊಳಲಾಡಿದ ವ್ಯಕ್ತಿಯೊಬ್ಬ ಜೀವನದಲ್ಲಿ ತುಂಬಾ ಜುಗುಪ್ಸೆ ಹೊಂದಿದ್ದ. ಅವನಿಗೆ ತನ್ನ ಸ್ಥಿತಿಯ ಬಗ್ಗೆ ನೆನೆದರೆ ಕೋಪ ಬರುತ್ತಾ ಇತ್ತು. ನನಗೆ ಮಾತ್ರ ಏಕೆ ಹೀಗಾಗುತ್ತಿದೆ ಎಂದು ಯೋಚಿಸಿ ತಲೆ ಕೆಡಿಸಿಕೊಂಡಿದ್ದನು. ನನ್ನ ಸಮಸ್ಯೆಗೆ ಝೆನ್ ಗುರುಗಳನ್ನು ಕಂಡರೆ ಪರಿಹಾರ ಸಿಗಬಹುದೆಂದು ತೀರ್ಮಾನಿಸಿ ಝೆನ್ ಗುರು ಓರ್ವರನ್ನು ಭೇಟಿಯಾದನು. ಝೆನ್ ಗುರುಗಳಿಗೆ ಅವನ ಮುಖ ನೋಡಿದಾಗಲೇ ತುಂಬಾ ಸಮಸ್ಯೆ ಇರುವಂತೆ ತೋರಿತ್ತು. ಅವನು ಗುರುಗಳ ಹತ್ತಿರ “ಗುರುಗಳೇ ನನಗೆ ಜೀವನ ಸಾಕಾಗಿದೆ. ನನಗೆ ಏನಾಗಿದೆ, ನಾನು ಯಾರು?’ ಎಂದು ಬಡಬಡಿಸುತ್ತಿದ್ದ. ಗುರುಗಳು ಏನೂ ಮಾತನಾಡಲಿಲ್ಲ. ಆ ವ್ಯಕ್ತಿಯು ಗುರುಗಳ ಹತ್ತಿರ “ನನ್ನ ಸಮಸ್ಯೆಗೆ ಪರಿಹಾರ ಒದಗಿಸಿ’ ಎಂದು ಬೇಡಿಕೊಂಡ. ಆದರೆ ಗುರುಗಳು ಒಂದು ಮಾತನ್ನೂ ಆಡಲಿಲ್ಲ. ಆ ವ್ಯಕ್ತಿಗೆ ತುಂಬಾ ಕೋಪ ಬಂತು. ಗುರುಗಳ ಹತ್ತಿರ ಪರಿಹಾರ ದೊರಕುವುದಿಲ್ಲ ಎಂದು ಭಾವಿಸಿ ನನ್ನ ಸಮಸ್ಯೆಯನ್ನು ನಾನೇ ಎದುರಿಸುತ್ತೇನೆ. ಇವರ ಸಹಾಯ ನನಗೆ ಬೇಕಾಗಿಲ್ಲ ಎಂಬ ಛಲದಿಂದ ಎದ್ದು ಹೊರನಡೆದನು.
Related Articles
Advertisement