Advertisement

‘ಹಿರಿಯರಿಗೆ ಸಾಂಸ್ಕೃತಿಕ ವೇದಿಕೆ ರಚನೆಯಾಗಲಿ

11:42 PM Jun 30, 2019 | sudhir |

ಕಾಸರಗೋಡು: ಹಿರಿಯರನ್ನು ಗೌರವಿಸುವುದು ಜೊತೆಗೆ ಅವರಲ್ಲಿ ಸುಪ್ತವಾಗಿರುವ ಪ್ರತಿಭೆಗೆ ವೇದಿಕೆ ನಿರ್ಮಿಸಿ ಅವರನ್ನು ಸಾಂಸ್ಕೃತಿಕವಾಗಿ ಸಕ್ರಿಯಗೊಳಿಸುವ ಅನಿವಾರ್ಯತೆಯಿದೆ. ಎಷ್ಟೋ ಮಂದಿ ಹಿರಿಯರು ಆರ್ಥಿಕವಾಗಿ ಸದೃಢವಾಗಿದ್ದರೂ ಮಾಡಲು ಕೆಲಸವಿಲ್ಲದೆ ಒಂಟಿಯಾಗಿ ಕಾಲಹರಣ ಮಾಡುವುದನ್ನು ಕಂಡಾಗ ವೇದನೆಯಾಗುತ್ತದೆ. ಇಂತಹ ಪ್ರತಿಭಾನ್ವಿತ ಹಿರಿಯರನ್ನು ಒಗ್ಗೂಡಿಸುವ ಮುಖಾಂತರ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡಬೇಕಾದದ್ದು ಸಾಂಸ್ಕೃತಿಕ ಸಂಘಟನೆಗಳ ಕರ್ತವ್ಯವೆಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅಭಿಪ್ರಾಯಪಟ್ಟರು.

Advertisement

ಅವರು ಮಂಗಳೂರಿನ ಕೊಂಕಣಿ ಸಾಂಸ್ಕೃತಿಕ ಸಂಘ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲ್ ಸಭಾಂಗಣದಲ್ಲಿ ‘ಸದಸ್ಯರ ದಿನಾಚರಣೆ’ ಅಂಗವಾಗಿ ಏರ್ಪಡಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಭಾ ಕಾರ್ಯಕ್ರಮದ ಮೊದಲು ಸದಸ್ಯರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಂಘದ ಸದಸ್ಯರಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಕಾಸರಗೋಡು ಚಿನ್ನಾ ಹಾಗೂ ಸಂಘದ ಅಧ್ಯಕ್ಷ ವಿಠuಲ್ ಕುಡ್ವ ಬಹುಮಾನವನ್ನು ವಿತರಿಸಿದರು. ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷರು, ಖ್ಯಾತ ಲೆಕ್ಕ ಪರಿಶೋಧಕರು ಆದ ವಿಠuಲ್ ಕುಡ್ವ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸಂತೋಷ್‌ ಶೆಣೈ ಅವರು ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ರತ್ನಾಕರ ಕುಡ್ವ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕಿ ಮಮತಾ ಕಾಮತ್‌ ವಂದಿಸಿರು. ಶ್ವೇತಾ ಕಾಮತ್‌ ಪ್ರಾರ್ಥನೆ ಹಾಡಿದರು. ಕಾಸರಗೋಡು ಚಿನ್ನಾ ಅವರನ್ನು ಗೌರವಿಸಲಾಯಿತು.

ಮಾತೃ ಭಾಷೆಯ ಕೆಲಸ ಮಾಡುವುದು ಭಾಷಿಕನ ಕರ್ತವ್ಯ

ಮಾತೃ ಭಾಷೆಯ ಕೆಲಸ ಮಾಡುವುದು ಪ್ರತಿಯೊಬ್ಬ ಭಾಷಿಕನ ಕರ್ತವ್ಯವಾಗಬೇಕೇ ವಿನ: ಸರಕಾರದ ಹಣಕ್ಕಾಗಿ ಕಾಯುತ್ತಾ ಸುಮ್ಮನಿರುವುದು ಬೆಳವಣಿಗೆಗೆ ಪೂರಕವಲ್ಲ. ಅಧಿಕಾರದಲ್ಲಿದ್ದಾಗ ಎಲ್ಲರೂ ಬಂದು ಹೇಳುತ್ತಾರೆ. ಗೆಳೆಯರಾಗಲು ಶ್ರಮಿಸುತ್ತಾರೆ. ಕಷ್ಟಕಾಲದಲ್ಲಿ ಬಂಧುಗಳು ದೊರೆಯುವುದು ದುರ್ಲಬ. ಕಷ್ಟಕಾಲದಲ್ಲಿ ಬಂಧು ಭಾವವನ್ನು ಯಾರು ತೋರುತ್ತಾರೋ ಅವರೇ ಗೆಳೆಯರು ಮತ್ತು ಬಂಧುಗಳು ಎಂದು ಕಾಸರಗೋಡು ಚಿನ್ನಾ ಹೇಳಿದರು.

ಕೊಂಕಣಿ ಸಾಂಸ್ಕೃತಿಕ ಸಂಘದಿಂದ ಸಾಧಕರಿಗೆ ಸಮ್ಮಾನ

ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್‌ ಗಳಿಸಿದ ಶ್ರೀಯಾ ಶೆಣೈ, ವಿಜ್ಞಾನ ವಿಭಾಗದಲ್ಲಿ 7ನೇ ರ್‍ಯಾಂಕ್‌ ಪಡೆದ ಅಪರ್ಣಾ ಕಿಣಿ ಹಾಗೂ ಎಸ್‌.ಎಸ್‌.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸ್ವಾತಿ ಬಾಳಿಗ ಹಾಗೂ ಭರತನಾಟ್ಯದಲ್ಲಿ ಸಾಧನೆಗೈದ ಧೃತಿ ಕಾಮತ್‌ ಅವರನ್ನು ಸಮ್ಮಾನಿಸಲಾಯಿತು.
Advertisement
Advertisement

Udayavani is now on Telegram. Click here to join our channel and stay updated with the latest news.

Next