Advertisement

ಶರಣ ಪರಂಪರೆ ಮುಂದುವರಿಯಲಿ

01:30 PM Jan 29, 2018 | |

ಬಸವಕಲ್ಯಾಣ: 12ನೇ ಶತಮಾನದಲ್ಲಿ ಗುರು ಬಸವಣ್ಣನವರು ಜಾತಿ, ವರ್ಣ, ವರ್ಗ ಮತ್ತು ಲಿಂಗ ಭೇದವನ್ನು ಅಳಿಸಿ, ಸರ್ವ ಸಮಾನತೆ ಧರ್ಮ ಸ್ಥಾಪಿಸಿದ್ದಾರೆ. ಶರಣರ ಆದರ್ಶ ಪರಂಪರೆ ಮುಂದುವರಿಸಿಕೊಂಡು ಹೋಗುವುದು ಇಂದಿನ ಅಗತ್ಯವಾಗಿದೆ ಎಂದು ಬಸವ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮಿ ಹೇಳಿದರು.

Advertisement

ತ್ರಿಪುರಾಂತದ ಶರಣ ಮಾದಾರ ಚನ್ನಯ್ಯ ಅರಿವು ಪೀಠದಿಂದ ಆಯೋಜಿಸಲಾಗಿದ್ದ ಮಾದರ ಚನ್ನಯ್ಯ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಶೈವ ಪರಂಪರೆ ಪುರಾತನವಾದ್ದು. ಈ ಪರಂಪರೆಯಲ್ಲಿ ಸಮಾನತೆಯಿತ್ತು. ಆದರೆ ಮುಂದೆ ವೈದಿಕರ ಶ್ರೇಣಿಕೃತ ಸಮಾಜ ವರ್ಗೀಕರಣದಿಂದ ಅಸಮಾನತೆ ಹುಟ್ಟಿಕೊಂಡಿದೆ ಎಂದರು. ಶರಣ ಮಾದಾರ ಚನ್ನಯ್ಯನವರು ಭಕ್ತಿಯ ಸಾಕಾರ ಮೂರ್ತಿಯಾಗಿದ್ದರು. ಅವರ ಭಕ್ತಿಗೆ ಶಿವನೂ ತಲೆ ಬಾಗಿಸಿದ್ದಾನೆ.

ಅವರ ವಚನಗಳು ಸಮಾಜಕ್ಕೆ ಮಾರ್ಗದರ್ಶಿಯಾಗಿದ್ದು, ಇವುಗಳ ಬಗ್ಗೆ ಅಧ್ಯಯನ ನಡೆಸುವುದು ಅವಶ್ಯಕವಾಗಿದೆ.
ಮಕ್ಕಳಿಗೂ ತಿಳಿಸಿಕೊಡುವ ಅಗತ್ಯವಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಶರಣೆ ಚಿತ್ರಮ್ಮ ತಾಯಿ ಮಾತನಾಡಿ, ಶರಣ ಚನ್ನಯ್ಯನವರ ಭಕ್ತಿಯನ್ನು ಅಖಂಡವಾಗಿ ಗುರುತಿಸಿದವರು ಗುರು ಬಸವಣ್ಣವರು. ಶರಣ ಮಾದಾರ ಚನ್ನಯ್ಯನವರ ವಚನಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು.

ಜೆಡಿಎಸ್‌ ಮುಖಂಡ ಸಂಜು ಗಾಯಕವಾಡ ಮಾತನಾಡಿ, ಶರಣ ನೂಲಿಯ ಚಂದಯ್ಯ, ಶರಣ ಮಾದಾರ
ಚನ್ನಯ್ಯನವರ ವಚನಗಳ ಪ್ರಚಾರ, ಪ್ರಸಾರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು. ಶರಣರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅಗತ್ಯವಿರುವ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನೂಲಿಯ ಚಂದಯ್ಯ ಪಂಚಕಮಿಟಿ ಅಧ್ಯಕ್ಷ ಘಾಳೆಪ್ಪ ಮುಜನಾಯಕ, ಗಿರಿಜಾ ಸಿದ್ದಣ್ಣ, ಸರಸ್ವತಿ ಹೊದಲೂರೆ, ಹರಿಹರ ಗೋಖಲೆ, ದತ್ತು ಡಾಂಗೆ, ಸಿದ್ರಾಮಪ್ಪ ಹಂಗ್ರಿಕರ್‌, ಶಂಕರ ಐನಾಪೂರ ಇದ್ದರು. ಪೂಜಾ ಸ್ವಾಗತಿಸಿದರು. ಚೇತನಾ ನಿರೂಪಿಸಿದರು. ಶೃತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next