ದೀಪಾವಳಿ ಎಂದಾಕ್ಷಣ ಕಣ್ಣೆದುರಿಗೆ ಬರುವುದು ಹಚ್ಚಿದ ದೀಪ, ಹಣತೆ, ಬೆಳಕು, ಸಿಹಿತಿಂಡಿ, ಪಾಟಕಿ. ನಾವು ಪ್ರತಿದಿನ ಬೆಳಿಗ್ಗೆ ಸಾಂಯಕಾಲ ದೀಪ ಬೆಳಗತ್ತೇವೆ. ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವುದು ಮೂಲಕ ತಾವು ಕಾರ್ಯಕ್ರಮ ಆರಂಭಿಸುತ್ತೇವೆ. ದೀಪಕ್ಕೆ ತನ್ನದೇಯಾದ ಮಹತ್ವವನ್ನು ನಮ್ಮ ಸಂಸ್ಕೃತಿ ಕೊಟ್ಟಿದೆ. ಆದರೆ ಈಗ ಮಣ್ಣಿನಲ್ಲಿ ಮಾಡಿದ ಹಣತೆಯ ದೀಪಾ ಹಚ್ಚುವ ಬದಲು ಆದರ ಜಾಗಕ್ಕೆ ಕ್ಯಾಂಡಲ್ ಎನ್ನುವ ಹೊಸ ವಸ್ತು ಬಂದಿದೆ.
ಮಣ್ಣಿನ ಹಣತೆಯಲ್ಲಿ ದೀಪಾ ಹಚ್ಚುವುದರಿಂದ ದೇಶಿಯ ಕೈಗಾರಿಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇನ್ನೂ ಪಟಾಕಿ ಇಲ್ಲದೆ ದೀಪಾವಳಿ ಸಂಪೂರ್ಣವಾಗಲಾರದು. ಹೆಚ್ಚು ರಾಸಾಯನಿಕ ಬಳಸಿದ ಪಟಾಕಿಯನ್ನು ಸಿಡಿಸುವುದು ಪರಿಸರಕ್ಕೂ, ಮಾನವರಿಗೂ ಅಪಾಯಕಾರಿ.
ಇದನ್ನೂ ಓದಿ:ಬೆಳಕಿನ ಹಬ್ಬ: ಕುಂದಗನ್ನಡದ ಸಂಸ್ಕೃತಿಯಲ್ಲಿ ಬಲಿಪಾಡ್ಯಮಿ
ಕೆಲವರು ಪಟಾಕಿಯನ್ನು ವಿಭಿನ್ನವಾಗಿ ಸಿಡಿಸುತ್ತಾರೆ. ಪ್ರಾಣಿಗಳ ಬಾಲಕ್ಕೆ ಪಟಾಕಿ ಕಟ್ಟಿ ಸಿಡಿಸುವುದು. ಪ್ರಾಣಿಗಳು ಮಲಗಿದ್ದಾಗ ಅವುಗಳ ಮೇಲೆ ಪಾಟಕಿ ಸಿಡಿಸುವುದು ಮಾನವೀಯತೆ ಮರೆತು ದೀಪಾವಳಿ ಆಚಾರಿಸುತ್ತಾರೆ. ಈ ರೀತಿ ಮಾಡುವುದರಿಂದ ಪರಿಸರಕ್ಕೂ, ಪ್ರಾಣಿಗಳಿಗೂ ತುಂಬಾ ಅಪಾಯಕಾರಿ. ಆದರಿಂದ ದೀಪಾವಳಿಯನ್ನು ಯಾರಿಗೂ ತೊಂದರೆಯಾಗದಂತೆ ಆಚರಿಸುವುದು ತುಂಬಾ ಮುಖ್ಯವಾಗಿದೆ. ಹಾಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ರೀತಿ ದೀಪಾವಳಿ ಆಚರಿಸುವುದು ಉತ್ತಮ.
ನಿವೇದಿತಾ, ಜಾರ್ಕಳ ಮುಂಡ್ಮಿ