Advertisement

ಮದ್ಯಪಾನ ಮುಕ್ತ ಸಮಾಜ ನಿರ್ಮಿಸೋಣ

12:31 PM Oct 04, 2020 | Suhan S |

ದೇವನಹಳ್ಳಿ: ಗ್ರಾಮೀಣಾಭಿವೃದ್ಧಿಗೆ ಮದ್ಯಪಾನ ಮಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಕುಡಿತದ ಚಟದಿಂದ ಎಷ್ಟೋ ಜೀವಗಳು ಕಳೆದು ಹೋಗುತ್ತಿವೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಸತೀಶ್‌ ನಾಯಕ್‌ ತಿಳಿಸಿದರು.

Advertisement

ನಗರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾಧಿಕಾರಿಗಳಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಹಾಗೂ ಅಖೀಲ ಕರ್ನಾಟಕ ಜನ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ಗಾಂಧಿಸ್ಮತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳಗ್ರಾಮಾಭಿವೃದ್ಧಿಯೋಜನೆಯ ಅಂಗಸಂಸ್ಥೆಯಾದ ಜನಜಾಗೃತಿ ವೇದಿಕೆಯ ಮುಖಾಂತರ ರಾಜ್ಯಾದ್ಯಂತ ಈವರೆಗೆ1,465ಮದ್ಯವರ್ಜನ ಶಿಬಿರಗಳನ್ನು ನಡೆಸಿ 1 ಲಕ್ಷ20 ಸಾವಿರ ಮಂದಿಯನ್ನು ಮದ್ಯ ಮುಕ್ತರನ್ನಾಗಿಮಾಡಲಾಗಿದೆ. ಜಿಲ್ಲಾದ್ಯಂತ ಕಳೆದ 8 ವರ್ಷಗಳಿಂದ 21 ಮದ್ಯವರ್ಜನ ಶಿಬಿರ ಗಳನ್ನು ನಡೆಸಿ 1,785 ಮಂದಿಯನ್ನು ಪಾನ ಮುಕ್ತಗೊಳಿಸಿ ಅವರ ಸಾಮಾಜಿಕ, ಆರ್ಥಿಕ ಮತ್ತು ಕುಟುಂಬಿಕ ಬದಲಾವಣೆಗೆ ಕಾರ್ಯ ಕ್ರಮಗಳನ್ನು ರೂಪಿಸಲಾಗಿದೆ ಎಂದರು.

ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿಎಷ್ಟೋಕುಟುಂಬಗಳುಮದ್ಯವರ್ಜನೆಯಿಂದ ಮುಕ್ತಗೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂದರು.

ಅಖೀಲ ಕರ್ನಾಟಕ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತ ನಾಡಿ, ಗಾಂಧೀಜಿ ಅವರು ಮದ್ಯಮುಕ್ತ ಭಾರತ ಕನಸು ಕಂಡಿದ್ದು, ಇದನ್ನು ನನಸು ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಮದ್ಯವ್ಯಸನಿಗಳು ಕುಡಿತ ತ್ಯಜಿಸಿ ಹೊಸ ಜೀವನ ಕಟ್ಟಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು. ಪ್ರಸ್ತುತ ದಿನಗಳಲ್ಲಿ ಡ್ರಗ್ಸ್‌ ಮಾಫಿಯಾ ಧಾರಾವಾಹಿಯಂತೆ ಬೆಳೆಯುತ್ತಿದೆ. ಸಾಧನೆ ಮಾಡಿದವರು ಕುಡಿತದ ದಾಸರಾಗಿರುವುದು ಬೇಸರದ ಸಂಗತಿ ಎಂದರು.

ಅಖೀಲ ಕರ್ನಾಟಕ ಜನ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಮಸ್ವಾಮಿ ಮಾತನಾಡಿ, ಕುಡಿತ ಮತ್ತು ಡ್ರಗ್ಸ್‌ಗಳಿಗೆ ಅಂಟಿ ಕೊಂಡರೆ ಹೊರಬರುವುದು ಕಷ್ಟಕರ, ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವ ನಾನ್ನುಡಿಯಂತೆ ಪ್ರತಿಯೊಬ್ಬರು ಸಹವಾಸ ಮಾಡುವಾಗ ನೂರು ಬಾರಿ ಯೋಚಿಸಿ ಸ್ನೇಹ ಮಾಡಬೇಕು.ಲಾಕ್‌ಡೌನ್‌ ಸಂದರ್ಭದಲ್ಲಿ ಮದ್ಯ ಸ್ಥಗಿತದಿಂದ ಆರ್ಥಿಕ ನಷ್ಟವಾಯಿತು ಎಂದು ಹೇಳುವ ಸರ್ಕಾರ ಮದ್ಯಮುಕ್ತ ರಾಜ್ಯ ಮಾಡುವ ಆಲೋಚಿಸಬೇಕೆಂದರು.

Advertisement

ಈ ವೇಳೆ ಅಖೀಲ ಕ‌ರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯರಾದ ವೀಣಾ ರಮೇಶ್‌, ಬಲುಮುರಿ ಶ್ರೀನಿವಾಸ್‌, ವೆಂಕ‌ಟೇಶ್‌, ತಾಲೂಕು  ಧ‌ರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಅಕ್ಷತಾ ರೈ, ಮೇಲ್ವಿàಚಾರಕ ವಿಶ್ವನಾಥ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next