ಬ್ರಹ್ಮಾವರ: ಪ್ರತಿ ವರ್ಷ ಬಾರಕೂರು ಆಳುಪೋತ್ಸವ ಯಶಸ್ವಿಯಾಗಿ ನಡೆಯಬೇಕು. ರಾಷ್ಟ್ರ ಮಟ್ಟದ ಕಾರ್ಯಕ್ರಮವಾಗಬೇಕು ಎನ್ನು ವುದು ನನ್ನ ಕನಸು ಎಂದು ಸಚಿವೆ ಡಾ| ಜಯಮಾಲಾ ಹೇಳಿದರು.
ಅವರು ರವಿವಾರ ಬಾರಕೂರಿನ ನಂದರಾಯನ ಕೋಟೆಯಲ್ಲಿ ಆಳುಪೋತ್ಸವದ ಸಮಾರೋಪ ಸಮಾ ರಂಭದಲ್ಲಿ ಮಾತನಾಡಿದರು.
ಸಚಿವೆ ಜಯಮಾಲಾ ಅವರು ಆಳುಪಶ್ರೀ ಪ್ರಶಸ್ತಿಯನ್ನು ಪ್ರಾಂಶು ಪಾಲ, ಇತಿಹಾಸ ತಜ್ಞ ಬಿ. ಜಗದೀಶ್ ಶೆಟ್ಟಿ ಅವರಿಗೆ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ಜಗದೀಶ್ ಶೆಟ್ಟಿ ಅವರು ಮಾತನಾಡಿ, ಬಾರಕೂರಿನ ಹಲವು ಸ್ಮಾರಕಗಳ ರಕ್ಷಣೆ ಮಾಡುವ ಸಲುವಾಗಿ ನಾನು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದೇನೆ. ಆದರೆ ನನ್ನ ಉದ್ದೇಶ ಇತಿಹಾಸವನ್ನು ರಕ್ಷಣೆ ಮಾಡುವುದಾಗಿದೆ. ಜಿಲ್ಲಾಡಳಿತ ಬೀಚ್, ಧಾರ್ಮಿಕ ಪ್ರವಾ ಸೋದ್ಯಮದೊಂದಿಗೆ ಐತಿಹಾಸಿಕ ಪ್ರವಾಸೋದ್ಯಮಕ್ಕೂ ಒತ್ತು ನೀಡ ಬೇಕು ಎಂದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ, ಉದ್ಯಮಿ ಮನೋಹರ ಶೆಟ್ಟಿ, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಡಾ| ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.
ಆಕರ್ಷಕ ಗಂಗಾರತಿ
ಮೂಡುಕೇರಿ ಶ್ರೀ ಸೋಮೇಶ್ವರ ಸ್ವಾಮಿಯ ಪುರಮೆರವಣಿಗೆಯ ಅನಂತರ ಮೂಡುಕೇರಿ ಪುಷ್ಕರಣಿಯಲ್ಲಿ ಮನಮೋಹಕ ಗಂಗಾ ಆರತಿ ನಡೆಯಿತು. ದೇವರ ತೆಪ್ಪೋತ್ಸವ, ಆಕರ್ಷಕ ಸುಡುಮದ್ದು ಪ್ರದರ್ಶನ ಜರಗಿತು. ಯುನಿಟಿ ಶಾಮಿಯಾನದ ಶೌಕತ್ ಅಲಿ ಅವರು ಗಂಗಾರತಿ ವೇದಿಕೆಗಳನ್ನು ನಿರ್ಮಿಸಿಕೊಟ್ಟಿದ್ದರು. ಡಾ| ಸಂತೋಷ್ ಗುರೂಜಿ ಮೊದಲಾದವರು ಉಪಸ್ಥಿತರಿದ್ದರು.