ದೇವನಹಳ್ಳಿ: ತಾಲೂಕಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 19805 ಅರ್ಜಿ ಸ್ವೀಕೃತವಾಗಿದ್ದು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ವೀಣಾ ತಿಳಿಸಿದರು.
ನಗರದ ಬಿ.ಬಿ.ರಸ್ತೆಯ ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿ, ಎಲ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ಪಿಎಂ ಕಿಸಾನ್ ಯೋಜನೆಗೆ ಅರ್ಜಿಗಳ ಸ್ವೀಕೃತಿ ಕಾರ್ಯ ಮಾಡಲಾಗುತ್ತಿದೆ.
ಸಂಪೂರ್ಣ ಮಾಹಿತಿ ಪಡೆದು ಅಕ್ಕಪಕ್ಕದ ರೈತರಿಗೂ ತಿಳಿಸಿದರೆ, ಸಾಕಷ್ಟು ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ದೇವನಹಳ್ಳಿ ತಾಲೂಕಿನ 4 ಹೋಬಳಿಗಳಾದ ವಿಜಯಪುರ, ಕಸಬಾ ದೇವನ ಹಳ್ಳಿ, ಚನ್ನರಾಯಪಟ್ಟಣ, ಕುಂದಾಣ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಒಟ್ಟು 19805 ಅರ್ಜಿ ಆನ್‌ಲೈನ್ ಮೂಲಕ ಸ್ವೀಕೃತಗೊಂಡಿದೆ. ವಿಜಯಪುರ ಹೋಬಳಿ 5269, ಕಸಬಾ ಹೋಬಳಿ 3856, ಚನ್ನರಾಯಪಟ್ಟಣ ಹೋಬಳಿ 5189, ಕುಂದಾಣ ಹೋಬಳಿ 5489 ಅರ್ಜಿಗಳು ಸ್ವೀಕೃತಗೊಂಡಿದೆ. ಅರ್ಜಿದಾರರು ತಮ್ಮ ಸ್ವಯಂ ಘೋಷಣೆ ಅನುಬಂಧವನ್ನು ಸಂಪೂರ್ಣವಾಗಿ ಮಾಹಿತಿ ಪಡೆದು ಅರ್ಜಿ ಸಲ್ಲಿಬೇಕು. ಸುಮಾರು ಅರ್ಜಿ ಷರತ್ತುಗಳ ಪಾಲನೆ ಆಗದಿರುವುದು ಅನರ್ಹತೆಗೆ ಕಾರಣ. ಕುಂದಾಣ ಹೋಬಳಿಯಲ್ಲಿ ಸುಮಾರು 10ರಿಂದ 11ಸಾವಿರ ರೈತರು ಇದ್ದಾರೆಂದರು.
ಅಗತ್ಯ ಮಾಹಿತಿ: ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಪಡೆದುಕೊಳ್ಳಬಹುದು. ಅರ್ಜಿಯಲ್ಲಿ ತಿಳಿಸಿರುವ ಮಾಹಿತಿ ಪೂರ್ಣವಾಗಿರ ಬೇಕು. ಅರ್ಜಿ ಹಿಂಬದಿಯಲ್ಲಿ ತಿಳಿಸಿರುವ ಮಾಹಿತಿ ಓದಿ ಅರ್ಹರು ಅರ್ಜಿ ಸಲ್ಲಿಸುವಂತಾಗಬೇಕು. ಅಪೂರ್ಣತೆ ಅರ್ಜಿ, ಪತಿ ಪತ್ನಿ ವಯೋ ನಿವೃತ್ತಿ ಹೊಂದಿ 10ಸಾವಿರ ಅಥವಾ ಪಿಂಚಣಿ ಪಡೆಯುವ ರೈತರಿಗೆ ಇದು ಅನ್ವಯಿಸುವುದಿಲ್ಲ. ಯಾವುದೇ ಪತಿ, ಪತ್ನಿ ವೈದ್ಯ, ಅಭಿಯಂತರರು, ವಕೀಲರು, ಚಾಟ್‌ರ್ಡ್ ಅಕೌಂಟೆಂಟ್ ಹಾಗೂ ವಾಸ್ತುಶಿಲ್ಪ ಮುಂತಾದ ವೃತ್ತಿಪರ ಕ್ಷೇತ್ರ, ಸಂಘ ಸಂಸ್ಥೆಗಳೊಂದಿಗೆ ನೋಂದಣಿಯಾಗಿರಬಾರದು. ಕೇಂದ್ರ, ರಾಜ್ಯ ಸರ್ಕಾರಗಳ ಸಾರ್ವಜನಿಕ ವಲಯದ ಉದ್ಯಮಗಳ ಹಾಗೂ ಸರ್ಕಾರದ ಅಧೀನದಲ್ಲಿ ಬರುವ ಕಚೇರಿ ಹಾಗೂ ಯಾವುದೇ ಸ್ಥಳೀಯ ಸಂಸ್ಥೆ ಕಾಯಂ ನೌಕರರಾಗಿರಬಾರದು.
ರೈತರು ಪಿಎಂ ಕಿಸಾನ್ ಯೋಜನೆ ಮಾಹಿತಿ ಪಡೆದು ಅರ್ಜಿ ಸಲ್ಲಿಸಬೇಕು. ಅನುಬಂಧದಲ್ಲಿ ತಿಳಿಸಿರುವ ಮಾರ್ಗಸೂಚಿ ಗಮನಿಸಿ, ರೈತ ಸಂಪರ್ಕಕ್ಕೆ ಬಂದು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.