ಮೈಸೂರು: ಬುದ್ಧ, ಬಸವ, ಅಂಬೇಡ್ಕರ್‌ರ ತತ್ವ-ಸಿದ್ಧಾಂತಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲಿಸಬೇಕಿದೆ ಎಂದು ಶಾಸಕ ಎಂ.ಪಿ. ನರೇಂದ್ರಸ್ವಾಮಿ ಹೇಳಿದರು.
ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಬುದ್ಧ- ಬಸವ-ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೌಶಲ್ಯ, ಶಿಕ್ಷಣ, ಉದ್ಯಮ, ಪ್ರತಿಭೆಗಳನ್ನು ರೂಪಿಸಿ ಶಿಕ್ಷಣ-ಸಂಘಟನೆ- ಹೋರಾಟ ಬೆಳೆಸಬೇಕು. ಈ ಮೂವರು ಆದರ್ಶ ವ್ಯಕ್ತಿಗಳು ಅನುಸರಿಸಿದ ಮಾರ್ಗವನ್ನು ಪಾಲಿಸಬೇಕು ಎಂದರು.
ಬುದ್ಧ ನೆಡೆಗೆ ಹೋಗುವುದೆಂದರೆ ಜಾnನದ ಕಡೆಗೆ ಹೋಗುವುದು ಎಂದರ್ಥ. ಬುದ್ಧ ಇಡೀ ಜಗತಿನ ಜಾnನ ಬೆಳಕು. ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ ದೊರಕ ಬೇಕಾದರೆ ಮುಖ್ಯವಾಗಿ ಅನಿಷ್ಠ ಪದ್ಧತಿಗಳಿಂದ ದೂರವಿರಬೇಕು. ಬಡವ, ಶ್ರೀಮಂತ, ಮೇಲು-ಕೀಳುಗಳಿಂದ ಕೂಡಿದ ಹಿಂದೂ ಧರ್ಮದಲ್ಲಿ ಧ್ವಂಧ್ವ ಕಾಣುತ್ತಿದ್ದೇವೆ. ಈ ಅನಿಷ್ಠ ಪದ್ಧತಿಗಳನ್ನು 12ನೇ ಶತಮಾನದಲ್ಲೇ ಬಸವಣ್ಣ ಗುರುತಿಸಿ, ಅದರ ವಿರುದ್ಧ ಹೋರಾಡಿದ್ದಾರೆ ಎಂದು ತಿಳಿಸಿದರು.
ಅಂಬೇಡ್ಕರ್ ಸಂವಿಧಾನ ಬರೆದು, ಶೋಷಿತ ವರ್ಗ, ಅಸ್ಪೃಶ್ಯತೆ, ಮಹಿಳೆಯರು, ಕಾರ್ಮಿಕರ, ಶ್ರೇಯೋಭಿವೃದ್ಧಿಗೆ ದಿಟ್ಟ ಹೋರಾಟ ಮಾಡಿದ್ದಾರೆ. ಅಂಬೇಡ್ಕರ್ ನಮಗೆ ಸಂವಿಧಾನ ನೀಡದೆ ಇದ್ದರೆ ನಾವಿಂದು ಸಮಾಜದಲ್ಲಿ ಭಯಭೀತಿಯಿಂದ ಜೀವನ ನಡೆಸಬೇಕಾಗಿತ್ತು. ಸಮಾಜದ ಪ್ರತಿಯೊಂದು ವರ್ಗದ ಜನರಿಗೂ ಶಿಕ್ಷಣ ದೊರೆಯಬೇಕು, ಆ ಮೂಲಕ ಸಮಾಜದಲ್ಲಿ ಅನಿಷ್ಠ ಪದ್ಧತಿ ನಾಶವಾಗಬೇಕೆಂದು ಅವರು ಬದುಕಿರುವ ತನಕ ಹೋರಾಟ ಮಾಡಿದರು ಎಂದು ನೆನೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅನ್ನ ಸಿಗುವಂತೆ ಮಾಡಿದ್ದಾರೆ, ಅನ್ನಕ್ಕಾಗಿ ಹೋರಾಡಬೇಕಿದ್ದ ಸಂಕಷ್ಟ ದೂರಮಾಡುವ ಮೂಲಕ ಅಂಬೇಡ್ಕರ್‌ರ ಆಶಯವನ್ನು ಪೂರೈಸಿದ್ದಾರೆ. ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂದರು.
ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮಹೇಶ್ ಚಂದ್ರಗುರು, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಶಿವರಾಜಪ್ಪ, ಶಾಸಕ ಎಂ.ಕೆ.ಸೋಮಶೇಖರ್, ವರುಣ ಕ್ಷೇತ್ರ ವಸತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಮೈಸೂರು ವಿವಿ ಪ್ರಭಾರ ಕುಲಪತಿ ಪೊ›.ದಯಾನಂದ ಮಾನೆ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ.ರುದ್ರಯ್ಯ, ಮೈಸೂರು ವಿವಿ ಆಡಳಿತಾಧಿಕಾರಿ ಪ್ರೊ.ಸಿ.ರಾಮಸ್ವಾಮಿ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಎಂ.ಎಸ್.ಎಸ್. ಕುಮಾರ್ ಇತರರು ಇದ್ದರು.