Advertisement

Udupi Paryaya;”ವಿಶ್ವ ಪರ್ಯಾಯ’ವಾಗಲಿ: ಡಾ| ಹೆಗ್ಗಡೆ ಹಾರೈಕೆ

12:39 AM Sep 17, 2023 | Team Udayavani |

ಉಡುಪಿ: ತಾಯಿಗೆ ಬಾಯಿಯಲ್ಲಿ ವಿಶ್ವವನ್ನು ತೋರಿಸಿದ ವಿಶ್ವನಾಯಕನಾದ ಶ್ರೀಕೃಷ್ಣ ಪರಮಾತ್ಮನ ಸಂದೇಶ ಜಗತ್ತಿಗೆ ಸಾರುವ “ವಿಶ್ವ ಪರ್ಯಾಯ’ ಇದಾಗಬೇಕು. ಅಶಾಂತಿ ತಾಂಡವವಾಡುತ್ತಿರುವ ವಿಶ್ವಕ್ಕೆ ಪ್ರಸ್ತುತ ಶಾಂತಿ ಸಂದೇಶದ ಅಗತ್ಯವಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಶ್ರೀ ಪುತ್ತಿಗೆ ಪರ್ಯಾಯೋತ್ಸವ 2024-26ರ ಸ್ವಾಗತ ಸಮಿತಿಯ ಕಾರ್ಯಾಲಯವನ್ನು ಶನಿವಾರ ಉದ್ಘಾಟಿಸಿದ ಅವರು ಮಾತನಾಡಿ, ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದ ರೊಂದಿಗೆ ವಿಶ್ವಾದ್ಯಂತ ದೃಷ್ಟಿ ಬೆಳೆಸುವ ಪರ್ಯಾಯದ ಮೂಲಕ ಕೋಟಿ ಗೀತಾ ಲೇಖನ ಯಜ್ಞ ಆರಂಭಿಸಿದ್ದಾರೆ ಎಂದರು.

ಪರ್ಯಾಯ ಸಂದರ್ಭ ಅತಿಥಿಗಳಿಗೆ ವಸತಿ ಸೌಲಭ್ಯಕ್ಕಾಗಿ ಉಡುಪಿಯ ಆಯುರ್ವೇದ ಆಸ್ಪತ್ರೆಯಲ್ಲಿ 25 ಕೋಣೆಗಳನ್ನು ಮೀಸಲಿರಿಸ ಲಾಗುವುದು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಕಾರ್ಯಕರ್ತರು ಪರ್ಯಾಯ ಸಂದರ್ಭ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಸಮಿತಿ ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ಆರ್ಥಿಕ, ಹೊರೆಕಾಣಿಕೆ ಸಮಿತಿ, ವ್ಯವಸ್ಥೆ, ಸ್ವತ್ಛತೆ, ವಸತಿ ಸಹಿತ 21 ಉಪಸಮಿತಿಗಳನ್ನು ರಚಿಸಿ, ಹಲವು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಮೆರವಣಿಗೆ ಸಾಗಿ ಬರುವ ನಗರದಾದ್ಯಂತ ವಿದ್ಯುದ್ದೀಪಾಲಂಕಾರ, ಗೀತೆಗೆ ಪ್ರಾಧಾನ್ಯ ನೀಡುವ ಮೆರವಣಿಗೆ, ದೇಶ, ವಿದೇಶದಿಂದಲೂ ಬರುವವರಿಗೆ ಭಕ್ತರ ಮನೆಗಳಲ್ಲಿ ವಸತಿ ವ್ಯವಸ್ಥೆಗೆ ಕೋರಲಾಗಿದೆ. ಪರ್ಯಾಯಕ್ಕೆ ರಾಜ್ಯ ಸರಕಾರದ ವಿಶೇಷ ಅನುದಾನ ಕೋರಲಾಗುವುದು. ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವನ್ನು ಕೋರಲಿದ್ದೇವೆ. ಸುಮಾರು 5 ಕೋ.ರೂ. ವೆಚ್ಚ ಅಂದಾಜಿಸಲಾಗಿದೆ. ದಾನಿಗಳ ಸಹಕಾರದ ಅಗತ್ಯವಿದೆ ಎಂದರು.

ಸಮಿತಿ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌, ಪ್ರಧಾನ ಕಾರ್ಯದರ್ಶಿ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ಮಾತನಾಡಿ, ಪುತ್ತಿಗೆ ಶ್ರೀಪಾದರ ಚತುರ್ಥ ಪರ್ಯಾಯವನ್ನು ಸರ್ವರ ಸಹಾಕಾರದಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ ಎಂದರು.

Advertisement

ಡಾ| ಹೆಗ್ಗಡೆಯವರು ಪರ್ಯಾಯ ಲಾಂಛನ ಹಾಗೂ ಕೆನರಾ ಬ್ಯಾಂಕ್‌, ಕರ್ಣಾಟಕ ಬ್ಯಾಂಕ್‌ನ ಕ್ಯೂಆರ್‌ ಕೋಡ್‌ ಬಿಡುಗಡೆಗೊಳಿಸಿದರು. ಡಾ| ಹೆಗ್ಗಡೆಯವರಿಗೆ ಗೌರವಾಧ್ಯಕ್ಷ ಸ್ಥಾನದ ಅಧಿಕೃತ ಪತ್ರವನ್ನು ಶ್ರೀಮಠದ ಮುರಳೀಧರ ಆಚಾರ್ಯ ಹಸ್ತಾಂತರಿಸಿದರು.

ಶ್ರೀ ಕ್ಷೇತ್ರ ಕಟೀಲಿನ ಧರ್ಮದರ್ಶಿ ಲಕ್ಷ್ಮೀನಾರಾಯಣ ಆಸ್ರಣ್ಣ, ಕುಂಭಾಶಿ ಶ್ರೀ ಸಿದ್ಧಿವಿನಾಯಕ ಕ್ಷೇತ್ರದ ಸೂರ್ಯನಾರಾಯಣ ಉಪಾಧ್ಯಾಯ, ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಎ. ಕಿರಣ್‌ ಕೊಡ್ಗಿ, ಗುರುರಾಜ್‌ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಹೆರಂಜೆ ಕೃಷ್ಣ ಭಟ್‌, ಗೌರವ ಕೋಶಾಧಿಕಾರಿ ಎಂ. ಶ್ರೀನಾಗೇಶ್‌ ಹೆಗ್ಡೆ, ಕೋಶಾಧಿಕಾರಿ ರಂಜನ್‌ ಕಲ್ಕೂರ ಉಪಸ್ಥಿತರಿದ್ದರು.

ಸಮಿತಿಯ ಉಪಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸಂಚಾಲಕ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಪುರುಷೋತ್ತಮ ಪಿ. ಶೆಟ್ಟಿ, ಸಂತೋಷ್‌ ಶೆಟ್ಟಿ ತೆಂಕರಗುತ್ತು, ಪ್ರಫ‌ುಲ್ಲ ಶೆಟ್ಟಿ, ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಸತೀಶ್‌ ಶೆಟ್ಟಿ ಗುರ್ಮೆ, ಎ.ಪಿ. ಕೊಡಂಚ, ವಾಸುದೇವ ಶೆಟ್ಟಿ ಕಾಪು, ರಾಘವೇಂದ್ರ ಕಿಣಿ, ಕಿಶೋರ್‌ ಕುಮಾರ್‌ ಗುರ್ಮೆ, ಉದಯ ಕುಮಾರ್‌ ಶೆಟ್ಟಿ ಕಿದಿಯೂರು, ಪ್ರವೀಣ ಕುಮಾರ್‌ ಕಪ್ಪೆಟ್ಟು, ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಭುವನಾಭಿರಾಮ ಉಡುಪ, ಮೂಡುಬಿದಿರೆ ಶ್ರೀಪತಿ ಭಟ್‌, ಚಂದ್ರಶೇಖರ್‌ ಮೂಡುಬಿದಿರೆ ಮೊದಲಾದವರಿದ್ದರು.

ಶ್ರೀಮಠದ ನಾಗರಾಜ ಆಚಾರ್ಯ ಸ್ವಾಗತಿಸಿ, ರಮೇಶ್‌ ಭಟ್‌ ನಿರೂಪಿಸಿದರು. ಪ್ರಸನ್ನ ಆಚಾರ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next