Advertisement

ರಾಜೀನಾಮೆ ಕೊಟ್ಟವರು ಉಪಚುನಾವಣೆ ವೆಚ್ಚ ಭರಿಸಲಿ

11:51 PM Jul 08, 2019 | Team Udayavani |

ಹರಪನಹಳ್ಳಿ: ರಾಜೀನಾಮೆ ನೀಡಿದವರಿಂದಲೇ ಉಪಚುನಾವಣೆ ಸಂಪೂರ್ಣ ವೆಚ್ಚ ಭರಿಸುವ ಕಾಯ್ದೆ ಜಾರಿಯಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದರು.

Advertisement

ಪಟ್ಟಣದಲ್ಲಿ ಮಾತನಾಡಿ, ಶಾಸಕರನ್ನು 5 ವರ್ಷಗಳ ಅವ ಧಿಗೆ ಆಯ್ಕೆ ಮಾಡುತ್ತಾರೆ. ಆದರೆ, ತಮ್ಮ ವೈಯಕ್ತಿಕ ಆಸೆಗೆ ಪಕ್ಷಾಂತರ ಹೆಚ್ಚಾಗುತ್ತಿದ್ದು ಜನರ ತೆರಿಗೆ ಹಣ ಚುನಾವಣೆಗೆ ಪೋಲಾಗುತ್ತಿದೆ ಎಂದರು.

ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ 4 ಗೋಡೆಗಳ ಮಧ್ಯೆ ಚರ್ಚಿಸಬೇಕಾದ ವಿಷಯವನ್ನು ಶಾಸಕರು ಬೀದಿಗೆ ತಂದಿದ್ದಾರೆ. ಜನ ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ. ಬಿಜೆಪಿ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಇಷ್ಟೆಲ್ಲಾ ಅವಾಂತರ ನಡೆಯುತ್ತಿದೆ.

ಆದರೆ, ಇದಕ್ಕೂ-ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಬಿಜೆಪಿ ಡಬಲ್‌ಗೇಮ್‌ ಆಡುತ್ತಿದೆ. ಸಿದ್ದರಾಮಯ್ಯನ ಮೇಲೆ ವಿನಾ ಕಾರಣ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next