Advertisement

Koppala; ರಾಮ ಮಂದಿರ ಉದ್ಘಾಟನೆಗೆ ಆಹ್ವಾನವಿದ್ದವರು ಹೋಗಲಿ…: ಸಿಎಂ ಸಿದ್ದರಾಮಯ್ಯ

12:09 PM Jan 02, 2024 | Team Udayavani |

ಕೊಪ್ಪಳ: ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ಯಾರಿಗೆ ಆಹ್ವಾನ ಕೊಟ್ಟಿದ್ದಾರೆ, ಯಾರಿಗೆ ಬಿಟ್ಟಿದ್ದಾರೆಂದು ನನಗೆ ಗೊತ್ತಿಲ್ಲ. ಯಾರಿಗೆ ಕೊಟ್ಟಿದ್ದಾರೊ ಅವರು ಹೋಗಲಿ, ಯಾರಿಗೆ ಬಿಡುತ್ತಾರೋ ಬಿಡಲಿ. ಯಾರಿಗೆ ಆಹ್ವಾನ ಕೊಡುತ್ತಾರೆಂದು ಅವರಿಗೆ ಸೇರಿದ್ದು ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಜ.22 ಸರ್ಕಾರಿ ರಜೆ ಘೋಷಣೆ ಮಾಡುವ ವಿಚಾರವಾಗಿ ಮಾತನಾಡಿ, ಅಯೋಧ್ಯಾ ರಾಮ ಮಂದಿರ ಉದ್ಘಾಟನೆ ಕೇಂದ್ರ ಸರ್ಕಾರ ಮಾಡುತ್ತದೆ. ಅವರು ಬೇಕಾದರೆ ರಜೆ ಮಾಡಲಿ ಎಂದರು.

ಹುಬ್ಬಳ್ಳಿಯ ಕರ ಸೇವಕರ ಬಂಧನ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಪ್ಪು ಮಾಡಿದವರನ್ನು ಏನು ಮಾಡಬೇಕು? ಅವರನ್ನು ಸುಮ್ನೆ ಬಿಟ್ಟು ಬಿಡಬೇಕಾ? ಹಳೆಯ ಕೇಸ್ ಗಳನ್ನು ವಿಲೇವಾರಿ ಮಾಡಿ ಎಂದಿದ್ದೇವೆ. ಹಳೆಯ ಕೇಸ್ ನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಾವು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಸ್ಪಷ್ಟ ಪಡಿಸಿದರು.

ಇದನ್ನೂ ಓದಿ:ನೀನು ಕುಟುಂಬದಿಂದ ದೂರನೇ ಇರಬೇಕು.. Bigg Boss ಮನೆಯಲ್ಲಿ ಪ್ರತಾಪ್‌ ಭವಿಷ್ಯ ನುಡಿದ ಗುರೂಜಿ

ಅತಿಥಿ ಉಪನ್ಯಾಸಕರು ಪಾದಯಾತ್ರೆ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಅತಿಥಿ ಉಪನ್ಯಾಸಕರ ಜೊತೆಗೆ ಮಾತನಾಡಿದ್ದೇವೆ. ಆದರೂ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರನ್ನು ಖಾಯಂ ಮಾಡುವುದು ಕಷ್ಟದ ಕೆಲಸ, ಕಾನೂನು ಮೀರಿ ಖಾಯಂ ಮಾಡಿದರೆ ಕಷ್ಟವಾಗಲಿದೆ ಎಂದರು.

Advertisement

ಬರ ಪರಿಹಾರ ವಿತರಣೆಯ ವಿಚಾರವಾಗಿ ಮಾತನಾಡಿದ ಅವರು, ಬರ ಪರಿಹಾರ ವಿತರಣೆ ನಡೆಯುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬೇಕಾಗುತ್ತದೆ. ಹಾಗಾಗಿ ವಿಳಂಬವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next