ಉಡುಪಿ: ಹೂಡಿಕೆಯಲ್ಲಿ ಗುಣಮಟ್ಟದ ಜಾಗೃತಿ ಇರಬೇಕು. ಸ್ವಲ್ಪ ಏರುಪೇರಾದರೂ ಸಮಾಜದಲ್ಲಿ ಮೋಸ, ವಂಚನೆಗಳಂತಹ ಪ್ರಕರಣಗಳು ಕಂಡುಬರುತ್ತವೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ವತಿಯಿಂದ ಬುಧವಾರ ಡಯಾನಾ ಹೋಟೆಲ್ನ ಸುನಂದಾ ದೇವದಾಸ ಹಾಲ್ನಲ್ಲಿ ನಡೆದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವ್ಯವಸ್ಥೆಗಳನ್ನು ಅರ್ಥೈಸಿಕೊಳ್ಳಿ
ಹೆಚ್ಚು ಹಣಗಳಿಸುವ ಆಮಿಷಗಳಿಗೆ ಮನಸೋಲಬಾರದು. ಬಂಡವಾಳ ಹೂಡಿಕೆಯಲ್ಲಿ ಜಾಗರೂಕತೆೆ ಇಲ್ಲದ ಕಾರಣವೇ ಐಎಂಎನಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೂಡಿಕೆಯಲ್ಲಿರುವ ವ್ಯವಸ್ಥೆಗಳನ್ನು ಅರ್ಥೈಸಿಕೊಳ್ಳಬೇಕು. ಐಎಂಎಯಲ್ಲಿ ಹಲವಾರು ಮಂದಿ ಬಡವರು ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಿದರೆ ಮಾತ್ರ ಸಮಾಜದಲ್ಲಿ ಆರ್ಥಿಕತೆ ಸಧೃಡವಾಗಿರಲು ಸಾಧ್ಯ ಎಂದರು.
ಸಿಎ ನರಸಿಂಹ ನಾಯಕ್ ಸ್ವಾಗತಿಸಿದರು. ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ ಡಾ| ರಾಧಾಕೃಷ್ಣ ಶರ್ಮ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಿಎ ಕವಿತಾ ಎಂ.ಪೈ ಉಪಸ್ಥಿತರಿದ್ದರು. ಪ್ರದೀಪ್ ಜೋಗಿ ಅವರು ನಿರೂಪಿಸಿದರು.